ಬಿಗ್ ಬಾಸ್ 8ನೇ ಸೀಸನ್ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಲೇ ಇತ್ತು. ಮನೆಯೊಳಗೆ ಇರ್ತಾರೆ ಅಂದ್ಕೊಂಡವರು ಹೊರಬಂದ್ರು. ಹೊರಬರ್ತಾರೆ ಅಂದ್ಕೊಂಡವ್ರು ಮನೆಯೊಳಗೆ ಇದ್ರು. ಈ ವಾರವಂತೂ ಬಿಗ್ ಬಾಸ್ ಅಚ್ಚರಿ ಮೇಲೆ ಅಚ್ಚರಿ ನೀಡಿದೆ. ಯಾರು ಪ್ರಶಸ್ತಿ ಗೆಲ್ಲಬಹುದು ಎಂದು ನಿರೀಕ್ಷಿಸಲಾಗಿತ್ತೋ ಅವರೆಲ್ಲರೂ ಮನೆಯಿಂದ ಹೊರಬಂದಿದ್ದಾರೆ. ಪ್ರಶಾಂತ್ ಸಂಬರಗಿ ಹಾಗೂ ವೈಷ್ಣವಿ ಗೌಡ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದು, ಉಳಿದವ್ರಲ್ಲಿ ಗೆಲುವು ಯಾರಿಗೆ ಅನ್ನೋ ಕುತೂಹಲಕ್ಕೆ ಆಗಸ್ಟ್ 8 ರಂದು ತೆರೆಬೀಳಲಿದೆ.
ವೈಷ್ಣವಿ ಗೌಡ, ಬಿಗ್ ಬಾಸ್ ಗೆಲ್ಲುವ ಲಿಸ್ಟ್ನಲ್ಲಿ ಮೊದಲಿದ್ರು. ಈ ಬಾರಿ ವೈಷ್ಣವಿ ಗೌಡ ಬಿಗ್ ಬಾಸ್ ಗೆಲ್ಲುತ್ತಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದ್ರೀಗ ವೈಷ್ಣವಿ ಸ್ಪರ್ಧೆಯಿಂದ ಹೊರಬಿದ್ದಿದ್ದು, ಅಚ್ಚರಿಗೆ ಕಾರಣವಾಗಿದೆ. ವೈಷ್ಣವಿ ಸುಮಾರು 10 ಲಕ್ಷ ವೋಟ್ಗಳನ್ನು ಪಡೆದಿದ್ದು, ಉಳಿದ ಮೂವರಿಗಿಂತ ಹಿಂದಿದ್ದರು. ಹೀಗಾಗಿ ಬಿಗ್ ಬಾಸ್ ಮನೆಯಿಂದ ಹೊರಬರಲೇ ಬೇಕಾಗಿದೆ.
ಪ್ರಶಾಂತ್ ಸಂಬರಗಿ ಬಿಗ್ ಬಾಸ್ ಮನೆಯ ಆ್ಯಂಗ್ರಿ ಯಂಗ್ಮ್ಯಾನ್. ಆಗಾಗ ಪ್ರತಿಭಟನೆಗಳನ್ನು ಮಾಡುತ್ತಾ, ಗುಂಪುಗಾರಿಕೆಯ ವಿರುದ್ಧ ಹೋರಾಡುತ್ತಿದ್ದರು. ತಂಟೆ-ತಕರಾರುಗಳು ಇದ್ದರೂ ಬಿಗ್ ಬಾಸ್ ಗೆಲ್ಲುವ ಲಿಸ್ಟ್ನಲ್ಲಿ ಪ್ರಶಾಂತ್ ಸಂಬರಗಿ ಹೆಸರು ಕೂಡ ಓಡಾಡುತ್ತಿತ್ತು. ಆದ್ರೀಗ 6.69 ಲಕ್ಷ ವೋಟ್ ಪಡೆದು ವೈಷ್ಣವಿ ಮೂಲಕ ಮನೆಯಿಂದ ಹೊರಬಂದಿದ್ದಾರೆ.
ಬಿಗ್ ಬಾಸ್ ಸೀಸನ್ 8ರ ಪ್ರಶಸ್ತಿ ಗೆಲ್ಲುವ ಪಟ್ಟಿಯಲ್ಲಿ ಮೂರು ಉಳಿದಿದ್ದಾರೆ. ಮಂಜು ಪಾವಗಡ, ದಿವ್ಯ ಉರುಡುಗ ಹಾಗೂ ಅರವಿಂದ್. ಈ ಮೂವರಲ್ಲಿ ಯಾರು ಪ್ರಶಸ್ತಿ ಗೆಲ್ಲುತ್ತಾರೆಂಬುದು ಇಂದು(ಆಗಸ್ಟ್ 8) ಹೊರಬೀಳಲಿದೆ.