ಬಿಗ್ ಬಾಸ್ ಮನೆಯೊಳಗೆ ಹೋದವರೆಲ್ಲಾ ನಿಧಾನಕ್ಕೆ ತಮ್ಮ ನಿಸ್ವರೂಪವನ್ನು ತೋರಿಸೋಕೆ ಶುರು ಮಾಡಿದ್ದಾರೆ. ಒಂದೆರಡು ವಾರ ಕಳೆದು ಎಲ್ಲರ ಜೊತೆ ಬೆರೆತ ಮೇಲೆ ಮಿತ್ರರು ಮತ್ತು ಶತ್ರುಗಳ ಪಂಗಡಗಳು ಹುಟ್ಟೋದು. ಇದರ ಜೊತೆಗೇ ಮನೆಯವ್ರು, ಗೆಳೆಯರು ಎಲ್ರೂ ತುಂಬಾ ನೆನಪಾಗೋಕೆ ಶುರುವಾಗ್ತಾರೆ.
ಬಿಗ್ ಬಾಸ್ ನ ಈ ಸೀಸನ್ ನ ಮೂರನೇ ವಾರ ಸದ್ಯ ನಡೆಯುತ್ತಿದೆ. ಇದುವರೆಗೆ ಆಗ್ಲೇ ಶುಭಾ ಪೂಂಜಾ, ನಿಧಿ ಸುಬ್ಬಯ್ಯ, ದಿವ್ಯಾ ಸುರೇಶ್ ಮನೆಯವ್ರನ್ನ ನೆನಪಿಸಿಕೊಂಡು ಕಣ್ಣೀರು ಹಾಕಿದ್ದಾರೆ. ಅಲ್ಲಿಗೆ ಹೆಣ್ಣುಮಕ್ಕಳು ಒಂದು ರೌಂಡ್ ಕಣ್ಣೀರಿನ ಕತೆ ಮುಗಿಸಿದಂತಾಗಿದೆ. ಆದ್ರೆ ಈ ಬಾರಿ ಅಚ್ಚರಿ ಎನ್ನುವಂತೆ ಪ್ರಶಾಂತ್ ಸಂಬರಗಿ ಕಣ್ಣೀರಿಟ್ಟಿದ್ದಾರೆ.
ಬಹುಶಃ ಸದ್ಯ ಬಿಗ್ ಬಾಸ್ ಮನೆಯಲ್ಲಿರುವ ಅತ್ಯಂತ ಸ್ಟ್ರಾಂಗ್ ವ್ಯಕ್ತಿ ಪ್ರಶಾಂತ್ ಸಂಬರಗಿ. ಆದ್ರೆ ಅವರಿಗೆ ಗಂಟಲು ಸಮಸ್ಯೆ ಆಗಿರೋದು ತಿಳಿದು ಆಯುರ್ವೇದ ವೈದ್ಯೆಯಾಗಿರುವ ಅವರ ಪತ್ನಿ ಔಷಧ ಕಳಿಸಿದ್ದಾರೆ. ಅದನ್ನು ನೋಡಿ ಆಕೆಯ ನೆನಪಾಗಿ ಭಾವುಕರಾಗಿದ್ದಾಗಿ ಹೇಳಿದ್ದಾರೆ ಸಂಬರಗಿ. ಇಷ್ಟು ದಿನ ಗಟ್ಟಿಯಾಗಿದ್ದ ಇವರ ಇಮೋಶನಲ್ ಸೈಡ್ ನೋಡಿ ಪ್ರೇಕ್ಷಕರೂ ಅಚ್ಚರಿಗೊಂಡಿದ್ದಾರೆ.