ಸರಿಯಾಗಿ ವರ್ಷದ ಹಿಂದೆ ಪ್ರಶಾಂತ್ ನೀಲ್ ಟ್ವೀಟ್ ಮಾಡಿ ಜ್ಯೂನಿಯರ್ ಎನ್ಟಿಆರ್ಗೆ ವಿಶ್ ಮಾಡಿದ್ದರು. ಆ ಟ್ವೀಟ್ ನೋಡಿದಾಗಲೇ ಇವರಿಬ್ಬರು ಸೇರಿ ಸಿನಿಮಾ ಮಾಡ್ತಾರೆ ಅನ್ನೋದು ಪಕ್ಕಾ ಆಗಿತ್ತು. ಆದ್ರೆ, ಅದಕ್ಕೂ ಮೊದ್ಲು ಹೊಂಬಾಳೆ ಫಿಲ್ಮ್ಸ್ ಬ್ಯಾನರ್ನ ಕರ್ಕೊಂಡ್ ಹೋಗಿ ಪ್ರಭಾಸ್ ಕಾಲ್ ಶೀಟ್ ತಗೊಂಡು ‘ಸಲಾರ್’ ಸಿನಿಮಾ ಶುರು ಮಾಡಿದ್ರು. ಈಗ ಎನ್ಟಿಆರ್ 31ನೇ ಚಿತ್ರವನ್ನು ಡೈರೆಕ್ಡ್ ಮಾಡೋದಾಗಿ ಘೋಷಿಸಿದ್ದಾರೆ. ಅಲ್ಲಿಗೆ ಸದ್ಯಕ್ಕೆ ಪ್ರಶಾಂತ್ ನೀಲ್ ಕನ್ನಡ ಚಿತ್ರವನ್ನ ನಿರ್ದೇಶನ ಮಾಡೋಲ್ಲ ಅನ್ನೋದು ಪಕ್ಕಾ ಆಗೋಗಿದೆ.
ಥಿಯೇಟರ್ ಲಾಕ್ ಆಗಿದ್ದು, ಕೆಜಿಎಫ್ ಚಾಪ್ಟರ್-2 ರಿಲೀಸ್ ತಡವಾಗ್ತಿದೆ. ಇನ್ನು ಸಲಾರ್ ಶೂಟಿಂಗ್ ಶುರುವಾಗೋದಕ್ಕೆ ಮುಂದೆನ ವರ್ಷದವರೆಗೂ ಕಾಯ್ಬೇಕೇನೊ. ಸಲಾರ್ ಮುಗಿದ ಮೇಲೆ ಎನ್ಟಿಆರ್ 31. ಹಂಗಾದ್ರೆ ಇನ್ನು ಎರಡು ಮೂರು ವರ್ಷ ನೀಲ್ ಕನ್ನಡದಲ್ಲಿ ಸಿನಿಮಾ ಡೈರೆಕ್ಟ್ ಮಾಡೋದಿಲ್ಲ ಅಂತಾಯ್ತು. ಸಲಾರ್, ಎನ್ಟಿಆರ್31 ಹಿಟ್ ಆಗ್ಬಿಟ್ರೆ, ನೆಕ್ಸ್ಟ್ ಬಾಲಿವುಡ್ ಸ್ಟಾರ್ಸ್ನ ಡೈರೆಕ್ಟ್ ಮಾಡ್ತಾರೆ ಅನ್ಸತ್ತೆ. ಅಲ್ಲಿಗೆ ಪ್ರಶಾಂತ್ ನೀಲ್ ಕನ್ನಡ ಸಿನಿಮಾ ಮಾಡೋದು ಗ್ಯಾರೆಂಟಿನೇ ಇಲ್ಲ ಅನ್ನಿಸುತ್ತೆ. ಇದನ್ನ ನೋಡಿ ಕನ್ನಡ ಸಿನಿರಸಿಕರು ಖುಷಿಪಡಬೇಕೋ, ಬೇಸರ ಮಾಡ್ಕೋಬೇಕೋ ಗೊತ್ತಾಗ್ತಿಲ್ಲ.
ಇದೆಲ್ಲದರ ನಡುವೆ ‘ಉಗ್ರಂ’ ಸಿನಿಮಾ ರಿಲೀಸ್ ಆದಾಗ ಪ್ರಶಾಂತ್ ನೀಲ್ ಮಾತನಾಡಿರೋ ವೀಡಿಯೋ ವೈರಲ್ ಆಗಿದೆ. ನೀಲ್ ಅವತ್ತೇ ಹೇಳಿಬಿಟ್ಟಿದ್ದಾರೆ. ಸಿನಿಮಾಗೆ ಭಾಷೆಯ ಗಡಿ ಇರಲ್ಲ, ಸಿನಿಮಾಗೂ ಭಾಷೆಗೂ ಸಂಬಂಧವೇ ಇಲ್ಲ ಅಂತ. ಇದನ್ನೆಲ್ಲಾ ನೋಡ್ತಿದ್ರೆ, ಕೆಜಿಎಫ್ ಡೈರೆಕ್ಟರ್ ಬಾಲಿವುಡ್, ಹಾಲಿವುಡ್ ಕಡೆ ಮುಖ ಮಾಡಿರುವಂತೆ ಕಾಣ್ತಿದೆ. ಎನಿವೇ ಆಲ್ದಿ ಬೆಸ್ಟ್.