ಫ್ಯಾನ್ ಇಂಡಿಯಾ ಸೂಪರ್ಸ್ಟಾರ್ ಪ್ರಭಾಸ್ ಹಾಗೂ ಕೆಜಿಎಫ್ ಡೈರೆಕ್ಟರ್ ಪ್ರಶಾಂತ್ ನೀಲ್ ಇಬ್ಬರೂ ಸಲಾರ್ ಸಿನಿಮಾದಲ್ಲಿ ಬ್ಯುಸಿಯಾಗಿರೋದು ಗೊತ್ತೇ ಇದೆ. ಆದ್ರೆ, ಈ ಸಿನಿಮಾಗೂ ಮುನ್ನ ಇದೇ ಕಾಂಬಿನೇಷನ್ ಟಾಲಿವುಡ್ನ ಖ್ಯಾತ ನಿರ್ಮಾಪಕ ದಿಲ್ ರಾಜುಗೆ ಸಿನಿಮಾ ಮಾಡ್ಬೇಕಿತ್ತು. ಆದ್ರೆ, ಆ ಸಿನಿಮಾ ಮಾಡೋಕೆ ಆಗ ಪ್ರಭಾಸ್ ಹಿಂದೇಟು ಹಾಕಿದ್ದರು. ಆದ್ರೀಗ ಡಾರ್ಲಿಂಗ್ ತನ್ನ 25ನೇ ಚಿತ್ರಕ್ಕೆ ಅದೇ ಕಥೆಯನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯಿದೆ.
ಸಲಾರ್ಗೂ ಮುನ್ನ ಪ್ರಶಾಂತ್ ನೀಲ್, ಪ್ರಭಾಸ್ ಹಾಗೂ ದಿಲ್ ರಾಜು ಈ ಮೂವರ ಕಾಂಬಿನೇಷನ್ನಲ್ಲಿ ಸಿನಿಮಾ ಸೆಟ್ಟೇರಬೇಕಿತ್ತು. ಅಂಡರ್ವರ್ಲ್ಡ್, ರಾ ಕಥೆಯನ್ನು ಪಕ್ಕಕ್ಕಿಟ್ಟು ಪಕ್ಕಾ ಪೌರಾಣಿಕ ಸಿನಿಮಾ ಮಾಡೋಕೆ ಸಜ್ಜಾಗಿದ್ದರು. ಆದ್ರೆ, ಕೊನೆಯ ಕ್ಷಣದಲ್ಲಿ ಪ್ರಭಾಸ್ ಈ ಸಿನಿಮಾದಲ್ಲಿ ನಟಿಸೋಕೆ ಹಿಂದೇಟು ಹಾಕಿದ್ದರು. ಈಗ ಪ್ರಭಾಸ್ 25ನೇ ಸಿನಿಮಾ ಇದೇ ಕಥೆ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯಿದೆ.
ಪ್ರಭಾಸ್ ಪೌರಾಣಿಕ ಸಿನಿಮಾ ಕೈ ಬಿಡೋಕೆ ಕಾರಣವಿದೆ. ಬಾಹುಬಲಿಗಾಗಿ 5 ವರ್ಷ ಬೇರಾವುದೇ ಸಿನಿಮಾ ಮಾಡಿರಲಿಲ್ಲ. ಹೀಗಾಗಿ ಮತ್ತೊಂದು ಪೌರಾಣಿಕ ಸಿನಿಮಾ ಇನ್ನಷ್ಟು ಸಮಯ ತೆಗೆದುಕೊಳ್ಳಬಹುದು ಎಂಬ ಕಾರಣಕ್ಕೆ ಈಗಲೇ ಬೇಡ ಎಂದು ಹೇಳಿದ್ದರು. ಅದಕ್ಕಾಗೇ ಪ್ರಶಾಂತ್ ನೀಲ್ ಸಲಾರ್ ಸಿನಿಮಾ ಮಾಡೋಕೆ ಮುಂದಾಗಿದ್ದರು. ಅತ್ತ ದಿಲ್ ರಾಜ್ ಕೂಡ ಬೇರೆ ಸಿನಿಮಾ ಮಾಡುತ್ತಿದ್ದರಿಂದ ಕೊಂಚ ಸಮಯ ಕೇಳಿದ್ದರು.
ಪ್ರಭಾಸ್ 25ನೇ ಸಿನಿಮಾವನ್ನ ದಿಲ್ ರಾಜುನೇ ನಿರ್ಮಾಣ ಮಾಡ್ತಿರೋದ್ರಿಂದ ಮತ್ತೆ ಪೌರಾಣಿಕ ಸಿನಿಮಾ ಚರ್ಚೆಯಲ್ಲಿದೆ. ಆದಿಪುರುಷ್, ಸಲಾರ್, ನಾಗ ಚೈತನ್ಯ ನಿರ್ದೇಶನದ ಸಿನಿಮಾಗಳು ಮುಗಿಯುತ್ತಿದ್ದಂತೆ ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ 25ನೇ ಚಿತ್ರಕ್ಕೆ ತಯಾರಿ ನಡೆಸಲಿದ್ದಾರೆ. ಈ ಮೂಲಕ ಮೂವರು ಮತ್ತೊಂದು ಸಾಹಸಕ್ಕೆ ಕೈ ಹಾಕಲಿದ್ದಾರೆ.