KGF ಪ್ರಶಾಂತ್ ನೀಲ್ ಇತ್ತೀಚೆಗೆ ಯಂಗ್ ಟೈಗರ್ ಎನ್ಟಿಆರ್ ಕಾಂಬಿನೇಷನ್ನಲ್ಲಿ ಸಿನಿಮಾ ಅನೌನ್ಸ್ ಮಾಡಿರೋದು ಗೊತ್ತೇಯಿದೆ. ಎನ್ಟಿಆರ್ ಆರ್ಟ್ಸ್ ಮತ್ತು ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ನಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಎನ್ಟಿಆರ್ ಸದ್ಯ RRR ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಬಳಿಕ ಕೊರಟಾಲ ಶಿವ ಡೈರೆಕ್ಷನ್ನಲ್ಲಿ ನಟಿಸಲಿದ್ದಾರೆ. ಕೆಜಿಎಫ್-2 ಮುಗಿಸಿರೋ ನೀಲ್ ಸಲಾರ್ ಚಿತ್ರದ ಕೆಲಸದಲ್ಲಿ ತಲ್ಲೀನರಾಗಿದ್ದಾರೆ. ಇಬ್ಬರ ಕಮೀಟ್ಮೆಂಟ್ಸ್ ಮುಗಿದ್ಮೇಲೆ ಹೊಸ ಸಿನಿಮಾ ಶುರುವಾಗಲಿದೆ. ಈ ಮಧ್ಯೆ #NTR31 ಚಿತ್ರದಲ್ಲಿ ಪ್ರಶಾಂತ್ ನೀಲ್ ಸಂಭಾವನೆ ಕೇಳಿ ಕೆಲವರು ದಂಗಾಗಿದ್ದಾರೆ. ಅದ್ಯಾಕೆ ಅನ್ನೋದನ್ನು ಹೇಳ್ತಿವಿ ಕೇಳಿ..
ಉಗ್ರಂ ಮತ್ತು ಕೆಜಿಎಫ್ ಚಾಪ್ಟರ್ 1 ಸಿನಿಮಾ ಬಿಡುಗಡೆಯಾಗಿದೆ. ಕೆಜಿಎಫ್ 2 ಇನ್ನೂ ರಿಲೀಸ್ ಆಗ್ಬೇಕಿದೆ. ಸಲಾರ್ ಇನ್ನೂ ಶೂಟಿಂಗ್ ಹಂತದಲ್ಲೇ ಇದೆ. ಅಷ್ಟರಲ್ಲೇ ಮುಂದಿನ ಚಿತ್ರಕ್ಕೆ ₹10 ಕೋಟಿ ಸಂಭಾವನೆ ಪಡೀತಿದ್ದಾರೆ ಎನ್ನಲಾಗ್ತಿದೆ. ದೊಡ್ಡ ಪ್ಯಾನ್ ಇಂಡಿಯಾ ಚಿತ್ರಕ್ಕೆ ಪ್ಲಾನ್ ಮಾಡ್ತಿದ್ದು, ನೂರಾರು ಕೋಟಿ ವೆಚ್ಚದಲ್ಲಿ #NTR31 ನಿರ್ಮಾಣವಾಗಲಿದೆ. ಅದರಲ್ಲಿ ಕೆಜಿಎಫ್ ಸಾರಥಿಗೆ ಕೊಡ್ತಿರೋ ₹10 ಕೋಟಿ ಸಂಭಾವನೆ ಏನೇನು ಅಲ್ವಂತೆ.
ಬಹಳ ಹಿಂದೆಯೇ ಈ ಸಿನಿಮಾ ಒಪ್ಪಿಕೊಂಡಿದ್ದ ಕಾರಣಕ್ಕೆ ₹10ಕೋಟಿ ಸಂಭಾವನೆಗೆ ಫಿಕ್ಸ್ ಆಗಿದ್ದಾರಂತೆ ಪ್ರಶಾಂತ್ ನೀಲ್. ಕೆಜಿಎಫ್ ಚಾಪ್ಟರ್-1 ಹಿಟ್ ಆದ್ಮೇಲೆ ನೀಲ್ ಕ್ರೇಜ್ ನೋಡಿದ್ರೆ, ₹20 ಕೋಟಿ ಕೇಳಿದ್ರೂ ನಿರ್ಮಾಪಕರು ಕೊಡೋಕೆ ರೆಡಿಯಿದ್ರು. ಆದರೆ 10 ಕೋಟಿಗೆ ಡೀಲ್ ಕುದುರಿಸಿದ್ದಾರಂತೆ.
ಒಂದು ವೇಳೆ ಕೆಜಿಎಫ್-2, ಸಲಾರ್ ಸಿನಿಮಾಗಳ ರಿಲೀಸ್ ನಂತ್ರ ಪ್ರಶಾಂತ್ ನೀಲ್, ಎನ್ಟಿಆರ್ ಸಿನಿಮಾ ಒಪ್ಪಿಕೊಂಡಿದ್ರೆ, ₹20ರಿಂದ ₹25 ಕೋಟಿ ಸಂಭಾವನೆ ಡಿಮ್ಯಾಂಡ್ ಮಾಡ್ಬಹುದಿತ್ತು ಅಂತಾರೆ ಟಾಲಿವುಡ್ ಪಂಡಿತರು. ಕನ್ನಡ ಸಿನಿಮಾ ನಿರ್ದೇಶಕರೊಬ್ಬರು ಚಿತ್ರವೊಂದಕ್ಕೆ ₹10 ಕೋಟಿ ಸಂಭಾವನೆ ಪಡೀತಿದ್ಧಾರೆ ಅನ್ನೋದೇ ಹೆಮ್ಮೆಯ ಸಂಗತಿ. ನೀಲ್ ದಂಡಯಾತ್ರೆಯಲ್ಲಿ ಇನ್ನೂ ಎಷ್ಟೆಷ್ಟು ದೋಚುತ್ತಾರೋ ನೋಡೋಣ.