ರಿಯಲ್ ಸ್ಟಾರ್ ಉಪೇಂದ್ರ ಅಣ್ಣನ ಮಗ ನಿರಂಜನ್ ಸುಧೀಂದ್ರ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದು ಗೊತ್ತೇ ಇದೆ. ನಿರಂಜನ್ ಚೊಚ್ಚಲ ಚಿತ್ರದಲ್ಲೇ ‘ಸೂಪರ್ ಸ್ಟಾರ್’ ಲುಕ್ ಕೊಟ್ಟು ಕನ್ನಡ ಚಿತ್ರರಂಗ ಎಂಟ್ರಿಕೊಟ್ಟಿದ್ದಾರೆ. ಇದೇ ಸಿನಿಮಾದಲ್ಲಿ ಖ್ಯಾತ ನೃತ್ಯ ನಿರ್ದೇಶಕ ಸುಂದರಂ ಮಾಸ್ಟರ್ ಕೂಡ ನಟಿಸಿದ್ದಾರೆ. ಇವರು ಪ್ರಭುದೇವ ಅವರ ತಂದೆ ಅನ್ನೋದು ಗಮನಿಸಬೇಕಾದ ಅಂಶ. ತನ್ನ 86 ರ ಇಳಿ ವಯಸ್ಸಿನಲ್ಲೂ ಉತ್ಸಾಹದಿಂದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ವಿಶೇಷ ಅಂದ್ರೆ, ಈ ಚಿತ್ರದಲ್ಲೂ ನೃತ್ಯ ನಿರ್ದೇಶಕನ ಪಾತ್ರದಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ.
ಸುಂದರಂ ಮಾಸ್ಟರ್ ಅವ್ರ ದೃಶ್ಯಗಳ ಚಿತ್ರೀಕರಣ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯಿತು. ಇಳಿವಯಸ್ಸಿನಲ್ಲೂ ಯಾರಿಗೂ ಕಮ್ಮಿ ಇಲ್ಲ ಅನ್ನೋ ಹಾಗೆ ನಟಿಸಿದ್ದಾರೆ. ಇದೇ ದೃಶ್ಯಗಳನ್ನಿಟ್ಕೊಂಡು ಸೂಪರ್ಸ್ಟಾರ್ ಚಿತ್ರತಂಡ ಮೇಕಿಂಗ್ ಟೀಸರ್ ಮಾಡಿದ್ದು, ಈಗಾಗ್ಲೇ ಯೂಟ್ಯೂಬ್ನಲ್ಲಿ ಬಿಡುಗಡೆ ಮಾಡಿದೆ.
ಅಂದ್ಹಾಗೆ, ಸೂಪರ್ಸ್ಟಾರ್ ಚಿತ್ರವನ್ನ ರಮೇಶ್ ವೆಂಕಟೇಶ್ ಬಾಬು ನಿರ್ದೇಶನ ಮಾಡ್ತಿದ್ದಾರೆ. ಈ ಚಿತ್ರದ ಎರಡು ಹಂತಗಳ ಚಿತ್ರೀಕರಣ ಈಗಾಗ್ಲೇ ಮುಕ್ತಾಯವಾಗಿದ್ದು, ಮೂರನೇ ಹಂತದ ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದೆ. ನಿರಂಜನ್ ಸುಧೀಂದ್ರ ಈ ಚಿತ್ರಕ್ಕಾಗಿ ಸಾಕಷ್ಟು ವರ್ಕ್ ಔಟ್ ಮಾಡಿದ್ದು, ಜಾರಾ ಎಸ್ಮಿನ್ ಈ ಚಿತ್ರದ ನಾಯಕಿ. ಅಚ್ಯುತ್ ಕುಮಾರ್, ರಂಗಾಯಣ ರಘು, ದೇವಿಯಾನಿ, ಸುಧಾ ಬೆಳವಾಡಿ, ಅವಿನಾಶ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್ ಮುಂತಾದವ್ರು ಈ ಚಿತ್ರದಲ್ಲಿದ್ದಾರೆ.
ಸೂಪರ್ಸ್ಟಾರ್ ಚಿತ್ರಕ್ಕೆ ರಾಘವೇಂದ್ರ ವಿ ಸಂಗೀತ ನೀಡುತ್ತಿದ್ದಾರೆ. ಭರ್ಜರಿ ಖ್ಯಾತಿಯ ಚೇತನ್ ಕುಮಾರ್ ಸಾಹಿತ್ಯ ರಚಿಸಿದ್ದಾರೆ. ಯೋಗಿ ಛಾಯಾಗ್ರಹಣ, ವಿಜಯ್ ಕುಮಾರ್ ಸಂಕಲನ ಹಾಗೂ ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.
Reviews On :