ಒಂದೊಂದು ಸಿನಿಮಾನೂ ವಿಭಿನ್ನವಾಗಿರ್ಬೇಕು ಅನ್ನೋದು ಪ್ರತಿಯೊಬ್ಬ ನಟನ ಕನಸು. ಹೀಗಾಗಿ ಪ್ರತಿಯೊಂದು ಸಿನಿಮಾಗೂ ಪ್ರತಿಯೊಬ್ಬ ಹೊಸ ವಿದ್ಯೆಯನ್ನ ಏನಾದ್ರೂ ಕಲಿಯುತ್ತಲೇ ಇರುತ್ತಾರೆ. ಈಗ ಪ್ರಭಾಸ್ ಹೊಸ ವಿದ್ಯೆಯೊಂದನ್ನ ಕಲಿಯುತ್ತಿದ್ದಾರೆ. ಹೌದು, ಬಾಹುಬಲಿ ನಟ ಪ್ರಭಾಸ್ ತಮ್ಮ ಮುಂದಿನ ಚಿತ್ರ ಆದಿಪುರುಷ್ ಗಾಗಿ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ರಾಮಾಯಣ ಹಿನ್ನೆಲೆ ಇರೋ ಈ ಚಿತ್ರಕ್ಕಾಗಿ ಪ್ರಭಾಸ್ ಬಿಲ್ಲು ವಿದ್ಯೆ ಕಲಿಯುತ್ತಿದ್ದಾರಂತೆ.
ರಾಮನ ಪಾತ್ರಕ್ಕಾಗಿ ಬಿಲ್ಲು ವಿದ್ಯೆ ಕಲಿಯಲೇ ಬೇಕಿದೆ. ಹೀಗಾಗಿ ದಿನಕ್ಕೆ ಎರಡು ಸಲ ಬಿಲ್ಲು ವಿದ್ಯೆಗೆ ತರಭೇತಿ ಪಡೆದುಕೊಳ್ತಿದ್ದಾರಂತೆ. ಇಷ್ಟೇ ಅಲ್ಲ, ಭಾಷೆ ವಿಭಿನ್ನವಾಗಿರೋದ್ರಿಂದ ಅದಕ್ಕೂ ಪ್ರಭಾಸ್ ಟ್ರೈನಿಂಗ್ ಪಡೆಯುತ್ತಿದ್ದಾರೆ. ಕೇವಲ ಪ್ರಭಾಸ್ ಅಷ್ಟೇ ಅಲ್ಲ.. ಎಲ್ಲಾ ಕಲಾವಿದರೂ ವಿಡಿಯೋ ಕಾನ್ಫರೆನ್ಸ್ ಮೂಲಕವೇ ಭಾಷೆಯ ತರಬೇತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಆದಿಪುರುಷ್ ಚಿತ್ರದಲ್ಲಿ ಪ್ರಭಾಸ್ ರಾಮನಾಗಿದ್ರೆ, ಎದುರಿಗೆ ರಾವಣನಾಗಿ ನಟ ಸೈಫ್ ಅಲಿ ಖಾನ್ ಕಾಣಿಸಿಕೊಳ್ತಿದ್ದಾರೆ. ಇನ್ನೊಂದ್ಕಡೆ ಪ್ರಭಾಸ್ ರಾಮನ ಪಾತ್ರಕ್ಕಾಗಿ ಸಣ್ಣಗಾಗಬೇಕಿದೆ. ಹೀಗಾಗಿ ಅದಿಪುರುಷ್ ಸಿನಿಮಾ ಸಾಕಷ್ಟು ಕುತೂಹಲವನ್ನ ಕೆರಳಿಸಿದೆ. ಮುಂದಿನ ವರ್ಷ ಆಗಸ್ಟ್ ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಆದಿಪುರುಷ್ ವಿಶ್ವದಾದ್ಯಂತ ಬಿಡುಗಡೆ ಆಗಲಿದೆ.