ಬಾಹುಬಲಿ ಯಶಸ್ಸಿನ ನಂತರ ನಟ ಪ್ರಭಾಸ್ ಈಗ ಪ್ಯಾನ್ ಇಂಡಿಯಾ ಸ್ಟಾರ್. ಪ್ರಭಾಸ್ ಚಿತ್ರ ಅಂದ್ಮೇಲೆ ಮಿನಿಮಮ್ ಇಷ್ಟಾದ್ರೂ ಬಾಕ್ಸಾಫೀಸ್ ದೋಚೋದು ಗ್ಯಾರಂಟಿ ಎನ್ನುವಂಥಾ ಗ್ಯಾರಂಟಿ ಲೆಕ್ಕಾಚಾರ ಕೊಡೋ ನಟ ಈತ. ಅಂದ್ಮೇಲೆ ಆತನ ಸಂಭಾವನೆ ಕೂಡಾ ಅದೇ ಗ್ಯಾರಂಟಿಯಲ್ಲಿ ಇರ್ಬೇಕಲ್ಲಾ? ಖಂಡಿತಾ ಇದೆ. ಎಷ್ಟರಮಟ್ಟಿಗೆ ಅಂದ್ರೆ ಅನೇಕರ ಕನಸಿನ ಐಶಾರಾಮಿ ಕಾರ್ ಒಂದನ್ನು ಕೊಂಡು ಮನೆ ಮುಂದೆ ತಂದು ನಿಲ್ಲಿಸಿಕೊಂಡಿದ್ದಾರೆ ಈ ಸಾಹೋ ಸ್ಟಾರ್.


ಅಂದ್ಹಾಗೆ ಸದ್ಯ ಭಾರೀ ಚರ್ಚೆಯಲ್ಲಿರೋದು ಪ್ರಭಾಸ್ ರ ಹೊಚ್ಚ ಹೊಸಾ ಲ್ಯಾಂಬೊರ್ಗಿನಿ ಕಾರು. ಕಿತ್ತಳೆ ಬಣ್ಣದ ಈ ಕಾರ್ ನಲ್ಲಿ ಹೈ ಎಂಡ್ ಫೀಚರ್ಸ್ ಇವೆಯಂತೆ. ಕೆಲವೇ ಕೆಲವು ಬೆರಳೆಣಿಕೆಯಷ್ಟು ಜನರ ಬಳಿ ಇರುವ ಈ ಕಾರ್ ಸದ್ಯ ಪ್ರಭಾಸ್ ಬಳಿಯೂ ಇರೋದು ನೋಡಿ ಫ್ಯಾನ್ಸ್ ಸಿಕ್ಕಾಪಟ್ಟೆ ಖುಷಿಯಾಗ್ಬಿಟ್ಟಿದ್ದಾರೆ. ಎಲ್ಲಾ ಕಡೆ ಈಗ ಹೊಸಾ ಕಾರಿನದ್ದೇ ಫೋಟೋ, ವಿಡಿಯೋಗಳು ಹರಿದಾಡ್ತಿವೆ. ಅಂದ್ಹಾಗೆ ಈ ಕಾರಿನ ಬೆಲೆ ಬರೋಬ್ಬರಿ 6 ಕೋಟಿ ರೂಪಾಯಿಗಳು ಎನ್ನಲಾಗಿದೆ.
ಪ್ರಭಾಸ್ ಬಳಿ ಈಗಾಗ್ಲೇ ಬಿಎಂಡಬ್ಲಯು, ಔಡಿ ಕ್ಯೂ5 ಸೀರೀಸ್, ಮರ್ಸಿಡಿಸ್ ಮುಂತಾದ ದುಬಾರಿ ಕಾರುಗಳ ಭರ್ಜರಿ ಕಲೆಕ್ಷನ್ ಇದೆ. ಆದ್ರೆ ಈಗ ಬಂದಿರೋ ಲ್ಯಾಂಬೊರ್ಗಿನಿ ಮುಂದೆ ಅವ್ಯಾವೂ ಲೆಕ್ಕಕ್ಕಿಲ್ಲ ಎನ್ನುವಂತಿದೆ. ಸಖತ್ ಸ್ಟೈಲಿಶ್ ಆಗಿರೋ ಈ ಕಾರಿನಲ್ಲಿ ನೆಚ್ಚಿನ ನಟ ಓಡಾಡೋದನ್ನ ನೋಡೋದೇ ಹಬ್ಬ ಎನ್ನುತ್ತಿದ್ದಾರೆ ಫ್ಯಾನ್ಸ್. ಸದ್ಯ ಪ್ರಭಾಸ್ ರಾಧೇ ಶ್ಯಾಂ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿರುವ ಈ ಚಿತ್ರ ಪ್ಯಾನ್ ಇಂಡಿಯಾ ರಿಲೀಸ್ ಗೆ ತಯಾರಾಗಿದೆ. ನಂತರ ಸಲಾರ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಪ್ರಭಾಸ್. ಒಂದು ಮೂಲದ ಪ್ರಕಾರ ಮುಂದಿನ ಎರಡು ವರ್ಷಗಳವರಗೆ ಪ್ರಭಾಸ್ ಕಂಪ್ಲೀಟ್ ಬುಕ್ ಆಗ್ಬಿಟ್ಟಿದ್ದಾರಂತೆ. ಅವರ ಸಂಭಾವನೆಯೂ ಭಾರೀ ಏರಿಕೆಯಾಗಿದ್ದು ಲ್ಯಾಂಬೊರ್ಗಿನಿ ತಗೊಳ್ಳೋದು ಅವ್ರಿಗೇನೂ ಕಷ್ಟವಲ್ಲ ಬಿಡಿ ಎನ್ನುವ ಮಾತುಗಳು ಕೇಳಿಬರ್ತಿವೆ.