ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಸಿನಿಮಾ ಕೆಲಸವನ್ನೆಲ್ಲಾ ಪಕ್ಕಿಟ್ಟು ಕೊರೊನಾ ಲಸಿಕೆ ಪಡೆದು ಮಾದರಿಯಾಗಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರೋ ಕೆಸಿ ಜನರಲ್ ಆಸ್ಪತ್ರೆದಲ್ಲಿ ಮೊದಲ ಡೋಸ್ ಕೊರೊನಾ ಲಸಿಕೆ ಪಡೆದಿದ್ದಾರೆ. 45 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯುವಂತೆ ಕೇಂದ್ರ ಸರ್ಕಾರ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಪುನೀತ್ ಕೊರೊನಾ ಲಸಿಕೆ ಪಡೆದಿದ್ದಾರೆ.
ಲಸಿಕೆ ಪಡೆದು ಟ್ವೀಟ್ ಮಾಡುತ್ತಿದ್ದಂತೆ ಪುನೀತ್ ಅಭಿಮಾನಿಗಳು ನೀವೇ ನಮಗೆ ಸ್ಪೂರ್ತಿ ಎಂದಿದ್ದಾರೆ. ಕೆಲವು ಅಪ್ಪುಗೆ 45 ವರ್ಷ ದಾಟಿದೆ ಅನ್ನೋದನ್ನ ನಂಬುತ್ತಲೇ ಇಲ್ಲ. ಪುನೀತ್ ರಾಜ್್ಕುಮಾರ್ ಫಿಟ್ನೆಸ್ಗೆ ಫಿದಾ ಆಗಿದ್ದಾರೆ. ಅಪ್ಪು ಫ್ಯಾನ್ ತಮ್ಮ ಮನೆಯಲ್ಲಿರೋ 45 ಮೇಲ್ಪಟ್ಟವರಿಗೂ ಲಸಿಕೆ ಕೊಡಿಸೋದಾಗಿ ಹೇಳುತ್ತಿದ್ದಾರೆ.
ಕೊರೊನಾ 2ನೇ ಅಲೆ ಆತಂಕ ಎಲ್ಲೆಡೆ ಹೆಚ್ಚಾಗುತ್ತಿದೆ. ಅದ್ರಲ್ಲೂ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಕೊರೊನಾ ಲಸಿಕೆ ಪಡೆಯೋದು ಅನಿವಾರ್ಯವಾಗಿದೆ. ಈ ಹಿಂದೆ ರಾಘವೇಂದ್ರ ರಾಜ್ಕುಮಾರ್, ಶ್ರೀನಾಥ್, ಆನಂತ್ನಾಗ್, ನಾಗತ್ತಿಹಳ್ಳಿ ಚಂದ್ರಶೇಖರ್ ಸೇರಿದಂತೆ ಹಲವರು ಕೊರೊನಾ ಲಸಿಕೆ ಪಡೆದಿದ್ದಾರೆ.
ಇನ್ನು ಯುವರತ್ನ ಯಶಸ್ವಿಯಾಗಿ ಒಂದು ವಾರ ಕಂಪ್ಲೀಟ್ ಮಾಡಿದೆ. ಏಪ್ರಿಲ್ 7ರವರೆಗೆ ಇದ್ದ ಶೇ.100ರಷ್ಟು ಸೀಟ್ ವ್ಯವಸ್ಥೆ 50 ಪರ್ಸೆಂಟ್ಗೆ ಇಳಿಯಲಿದೆ. ಇಲ್ಲಿವರೆಗೂ ಉತ್ತಮ ಗಳಿಕೆ ಕಂಡಿದ್ದ ಸಿನಿಮಾ ಮುಂದೆ ಯಾವ ರೀತಿ ಪ್ರದರ್ಶನ ಕಾಣುತ್ತೆ ಅನ್ನೋದು ಶೀಘ್ರದಲ್ಲೇ ಗೊತ್ತಾಗಲಿದೆ.