ಟಾಲಿವುಡ್ನಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್ಗಿರೋ ಕ್ರೇಜ್ ಮತ್ಯಾವುದೇ ಸೂಪರ್ ಸ್ಟಾರ್ಗೂ ಇಲ್ಲ. ಅದೇ ಕಾರಣಕ್ಕೆ ಪವನ್ ಸಿನಿಮಾ ಬರ್ತಿದೆ ಅಂದ್ರೆ ಹಬ್ಬದ ವಾತಾವರಣ ನಿರ್ಮಾಣವಾಗುತ್ತೆ. ಕೆಲವು ವರ್ಷಗಳಿಂದ ರಾಜಕೀಯರಂಗದಲ್ಲೂ ಸಕ್ರಿಯರಾಗಿರೋ ಜನಸೇನಾನಿ ‘ವಕೀಲ್ ಸಾಬ್’ ಆಗಿ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಬಾಲಿವುಡ್ನ ‘ಪಿಂಕ್’ ಚಿತ್ರದ ಅಫೀಷಿಯಲ್ ರೀಮೇಕ್ ಇದು. ರೀಮೇಕ್ ಆದ್ರು, ರಿಲೀಸ್ಗೂ ಮೊದ್ಲೆ ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿತ್ತು. ಸದ್ಯ ಸಿಲ್ವರ್ ಸ್ಕ್ರೀನ್ ‘ವಕೀಲ್ ಸಾಬ್’ ದರ್ಬಾರ್ ಜೋರಾಗಿ ನಡೀತಿದೆ. ಅಭಿಮಾನಿಗಳಂತೂ ಸಿನಿಮಾ ನೋಡಿ ಬ್ಲಾಕ್ ಬಸ್ಟರ್ ಅಂತ ಕುಣಿದು ಕುಪ್ಪಳಿಸ್ತಿದ್ದಾರೆ. ಪವರ್ ಸ್ಟಾರ್ ಇಮೇಜ್ಗೆ ತಕ್ಕಂತೆ ನಿರ್ದೇಶಕ ವೇಣು ಶ್ರೀರಾಮ್ ಒಂದಷ್ಟು ಬದಲಾವಣೆ ಮಾಡಿ ಸಿನಿಮಾ ಕಟ್ಟಿಕೊಟ್ಟು ಗೆದ್ದಿದ್ದಾರೆ.
ವಕೀಲ್ ಸಾಬ್’ ಕಥೆ
ಜರೀನಾ(ಅಂಜಲಿ), ದಿವ್ಯ(ಅನನ್ಯಾ), ಪಲ್ಲವಿ(ನಿವೇತಾ ಥಾಮಸ್) ಅನ್ನೋ ಮೂವರು ಯುವತಿಯರು ಒಂದು ಕೇಸ್ನಲ್ಲಿ ಸಿಕ್ಕಿ ಹಾಕಿಕೊಳ್ತಾರೆ. ತನ್ನದಲ್ಲದ ತಪ್ಪಿಗೆ ಪಲ್ಲವಿ ಜೈಲು ಸೇರಬೇಕಾಗುತ್ತದೆ. ಎಂಪಿ ಮಗನ ಕೇಸ್ ಅನ್ನೋ ಕಾರಣಕ್ಕೆ ಬೇಲ್ ಕೂಡ ಸಿಗೋದಿಲ್ಲ. ಇಂತಹ ಸಮಯದಲ್ಲಿ ಅವರಿಗೆ ಲಾಯರ್ ಸತ್ಯದೇವ್ ಕೋನಿದೇಲ ಸಹಾಯಕ್ಕೆ ಬರ್ತಾನೆ. ಆತನನ್ನ ಎಂಪಿ ಹೆದರಿಸಲು ನೋಡ್ತಾನೆ. ಪ್ರತಿಯಾಗಿ ಸತ್ಯದೇವ್(ಪವನ್ ಕಲ್ಯಾಣ್) ತಾನೇ ಕೇಸ್ ಟೇಕಾಫ್ ಮಾಡಿ ಯುವತಿಯರ ಪರ ನಿಲ್ತಾನೆ. ಕೋರ್ಟ್ನಲ್ಲಿ ಡಿಫೆನ್ಸ್ ಲಾಯರ್ ನಂದಗೋಪಾಲ್(ಪ್ರಕಾಶ್ ರೈ) ಎಂಪಿ ಮನಗ ಕೇಸ್ ವಾದಿಸ್ತಾನೆ. ಈ ಕೇಸ್ನಲ್ಲಿ ಯಾರಿಗೆ ನ್ಯಾಯ ಸಿಗುತ್ತೆ ಅನ್ನೋದೇ ‘ವಕೀಲ್ ಸಾಬ್’ ಕಥೆ.
ಅಭಿಮಾನಿಗಳಿಗೆ ಸಿನಿಮಾ ಇಷ್ಟ ಆಗೋದ್ಯಾಕೆ..?
ಹಿಂದಿನ ಪಿಂಕ್ ಸಿನಿಮಾ ನೋಡಿದವರಿಗೆ ‘ವಕೀಲ್ ಸಾಬ್’ ಕಥೆಯನ್ನ ಬಿಡಿಸಿ ಹೇಳೋದೇ ಬೇಕಿಲ್ಲ. ಅದೇ ಕಥೆಯನ್ನ ಕೊಂಚ ಬದಲಿಸಿಕೊಂಡು ಕೊಂಚ ಮಾಸ್ ಅಂಶಗಳನ್ನ ಸೇರಿಸಿ, ‘ವಕೀಲ್ ಸಾಬ್’ ದರ್ಬಾರ್ ತೋರಿಸಿದ್ದಾರೆ ನಿರ್ದೇಶಕ ವೇಣು ಶ್ರೀರಾಮ್. ಬರೀ ಪವರ್ ಸ್ಟಾರ್ ಇಮೇಜ್ ಮಾತ್ರವಲ್ಲ ಜನಸೇನಾನಿ ಪವನ್ ಇಮೇಜ್ ಅನ್ನೂ ಗಮನದಲ್ಲಿಟ್ಟುಕೊಂಡು ಒಂದಷ್ಟು ಸನ್ನಿವೇಶಗಳನ್ನ, ಡೈಲಾಗ್ಗಳನ್ನ ಸೇರಿಸಿ ಸಿನಿಮಾ ಕಟ್ಟಿಕೊಡಲಾಗಿದೆ. ಅದು ಕ್ಲಿಕ್ ಆಗಿದೆ.
ಇಂಟರ್ವಲ್ ಬ್ಲಾಕ್, ಎರಡು ಸ್ಟೈಲಿಶ್ ಫೈಟ್ಸ್ ಅಂತೂ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಮಜಾ ಕೊಡುತ್ತೆ. ಪವನ್ ಕಲ್ಯಾಣ್ ಬಹಳ ವರ್ಷಗಳ ನಂತ್ರ ಮತ್ತೆ ಪ್ರೇಕ್ಷಕರನ್ನ ರಂಜಿಸುವಲ್ಲಿ ಗೆದ್ದಿದ್ದಾರೆ. ಡೈಲಾಗ್ಸ್, ಆ್ಯಕ್ಷನ್ ಎಲ್ಲದರಲ್ಲೂ ಪವನ್ ಅಬ್ಬರಿಸಿ ಬೊಬ್ಬರಿದಿದ್ದಾರೆ. ಸೆಕೆಂಡ್ ಹಾಫ್ ಕೋರ್ಟ್ ರೂಮ್ನಲ್ಲಿ ಪವನ್ ಮತ್ತು ಪ್ರಕಾಶ್ ರೈ ನಡುವಿನ ವಾದ ಪ್ರತಿವಾದದ ದೃಶ್ಯಗಳು ಅಭಿಮಾನಿಗಳಿಗೆ ಸಖತ್ ಕಿಕ್ ಕೊಡ್ತಿದೆ. ಎಸ್. ತಮನ್ ಬಿಜಿಎಂ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್. ‘ವಕೀಲ್ ಸಾಬ್’ ಆರ್ಭಟಕ್ಕೆ ತಮನ್ ಸಾಥ್ ಜೋರಾಗಿದೆ.
ಎಲ್ಲರೂ ಮಸಾಲೆ ‘ವಕೀಲ್ ಸಾಬ್’ನ ನೋಡ್ಬೋದಾ..?
ಪವರ್ ಸ್ಟಾರ್ ಅಭಿಮಾನಿಗಳಿಗೆ ‘ವಕೀಲ್ ಸಾಬ್’ ನಿಜಕ್ಕೂ ಬಾಡೂಟಈಗಾಗಲೇ ಸೂಪರ್ ಹಿಟ್ ಆಗಿರೋ ಕಥೆಯನ್ನ ತೆಲುಗು ಪ್ರೇಕ್ಷಕರಿಗೆ ಇಷ್ಟವಾಗುವಂತೆ ಕಟ್ಟಿಕೊಡಲಾಗಿದೆ. ಮಾಸ್ ಪ್ರೇಕ್ಷಕರಿಗೂ ಸಿನಿಮಾ ಇಷ್ಟವಾಗುತ್ತೆ. ಆದ್ರೆ, ಡೀಸೆಂಟ್ ಆಗಿದ್ದ ‘ಪಿಂಕ್’ ಸಿನಿಮಾವನ್ನ ಇಷ್ಟಪಟ್ಟವರಿಗೆ ‘ವಕೀಲ್ ಸಾಬ್’ ಮಾಸ್ ಮಸಾಲೆ ಕೊಂಚ ವಾಕರಿಕೆ ತರಿಸೋದು ಸುಳ್ಳಲ್ಲ. ಬ್ಲಾಕ್ ಬಸ್ಟರ್ ಟಾಕ್ ಬಂದ್ರು, ಕೊರೋನಾ ಪರಿಣಾಮವಾಗಿ ಚಿತ್ರಕ್ಕೆ 2ನೇ ದಿನ ರೆಸ್ಪಾನ್ಸ್ ಕಮ್ಮಿಯಾಗಿದೆ.