ಟಾಲಿವುಡ್ ಪವರ್ಸ್ಟಾರ್ ಪವನ್ ಕಲ್ಯಾಣ್ ಸಿನಿಮಾ ವಕೀಲ್ ಸಾಬ್ ಇಂದು( ಏಪ್ರಿಲ್ 9) ರಿಲೀಸ್ ಆಗಿದೆ. ಆಂಧ್ರ, ತೆಲಂಗಾಣದಲ್ಲಿ ಬಿಡುಗಡೆಗೂ ಮುನ್ನವೇ ಅಮೆರಿಕದಲ್ಲಿ ಮೊದಲ ಪ್ರಿಮಿಯರ್ ಅನ್ನ ಆಯೋಜಿಸಲಾಗಿತ್ತು. ಅಲ್ಲದೆ ಬೆಳಗ್ಗೆಯಿಂದ್ಲೇ ಆಂಧ್ರ, ತೆಲಂಗಾಣ, ಕರ್ನಾಟಕದ ಗಡಿ ಭಾಗದಲ್ಲಿ ಫ್ಯಾನ್ಸ್ ಶೋ ಆರಂಭ ಆಗಿದೆ.
ವಕೀಲ್ ಸಾಬ್ ಬಾಲಿವುಡ್ ಸಿನಿಮಾ, ಅಮಿತಾಬ್ ಬಚ್ಚನ್, ತಾಪ್ಸಿ ನಟಿಸಿದ್ದ ಪಿಂಕ್ ಸಿನಿಮಾದ ರಿಮೇಕ್. ಹೀಗಾಗಿ ಸ್ಟೋರಿಯಲ್ಲಿ ಸಸ್ಪೆನ್ಸ್ ಅನ್ನೋದು ಉಳಿದಿಲ್ಲ. ಆದ್ರೆ, ಪವನ್ ಕಲ್ಯಾಣ್ ಸ್ಟಾರ್ಡಮ್ಗೆ ತಕ್ಕಂತೆ ಸಿನಿಮಾ ಮಾಡಿದ್ದಾರಾ? ಪವರ್ಸ್ಟಾರ್ ಅಭಿಮಾನಿಗಳಿಗೆ ಸಿನಿಮಾ ಇಷ್ಟ ಆಯ್ತಾ? ಅನ್ನೋದು ಈಗ ಮುಖ್ಯ ಆಗುತ್ತೆ.
ಫಸ್ಟ್ ಹಾಫ್ ನೋಡಿದ ಫ್ಯಾನ್ಸ್ ಸಿನಿಮಾವನ್ನ ಹಾಡಿ ಹೊಗಳಿದ್ದಾರೆ. ಫ್ಲ್ಯಾಶ್ ಬ್ಯಾಕ್ ಸೀನ್, ಪವನ್ ಕಲ್ಯಾಣ್ ಎಂಟ್ರಿ ಎಲ್ಲಾ ಸೂಪರ್ ಆಗಿದೆ ಅಂತ ಟ್ವೀಟ್ ಮಾಡುತ್ತಿದ್ದಾರೆ. ಆದ್ರೆ, ಅಮೆರಿಕದಲ್ಲಿ ಸಿನಿಮಾ ನೋಡಿದ ಅಭಿಮಾನಿಗಳಿಗೆ ಮೊದಲಾರ್ಧ ಸ್ವಲ್ಪ ಲ್ಯಾಗ್ ಇದೆ ಅಂತ ಅನಿಸಿದೆ. ಪವನ್ ಸಿನಿಮಾ ಅಂದ್ರೆ, ಇವೆಲ್ಲಾ ಏನೂ ಲೆಕ್ಕಕ್ಕೆ ಬರೋದಿಲ್ಲ. ಅದಕ್ಕೆ ಕರ್ನಾಟಕದ ಗಡಿ ಭಾಗ ಬಳ್ಳಾರಿಯಲ್ಲಿರೋ ಕ್ರೇಜ್
ವಕೀಲ್ ಸಾಬ್ ಸಿನಿಮಾ ಹೈಲೈಟ್ ಅಂದ್ರೆ, ಡೈಲಾಗ್.. ಪವನ್ ಕಲ್ಯಾಣ್ ಪೊಲಿಟಿಲ್ ಡೈಲಾಗ್ ಅಭಿಮಾನಿಗಳಿಗೆ ಕಿಕ್ ಕೊಡ್ತಿದೆ. ರಾಜಕೀಯ ಸನ್ನಿವೇಶಗಳನ್ನ ಮುಂದಿಟ್ಟಿಕೊಂಡು ವಾದ ಮಾಡೋ ಪವನ್ ಕಲ್ಯಾಣ್ ಡೈಲಾಗ್ಗೆ ಭರಪೂರ ಶಿಳ್ಳೆಗಳ ಸುರಿಮಳೆಯಾಗುತ್ತೆ. ಇನ್ಮುಂದೆ ಸಿನಿಮಾ ಮಾಡಲ್ಲ ಅಂತ ರಾಜಕೀಯಕ್ಕೆ ಹಾರಿದ್ದ ಪವನ್ ಕಲ್ಯಾಣ್ ಸದ್ಯ ಸಿನಿಮಾ ಮಾಡಿದ್ದೇ ಅಭಿಮಾನಿಗಳಿಗೆ ದೊಡ್ಡ ಖುಷಿಯಂತಾಗಿದೆ. ದೇಶ, ವಿದೇಶದಲ್ಲಿ ವಕೀಲ್ ಸಾಬ್ ರಿಪೋರ್ಟ್ ಭಿನ್ನವಾಗಿದೆ. ಹೀಗಾಗಿ ಪವನ್ ಕಲ್ಯಾಣ್, ಶೃತಿ ಹಾಸನ್, ನಿವೇತಾ ಥಾಮಸ್, ಅಂಜಲಿ ಪರ್ಫಾಮೆನ್ಸ್ ಹೇಗಿದೆ ಅಂತ ತಿಳ್ಕೊಳ್ಳೊಕೆ ಸ್ವಲ್ಪ ಸಮಯ ಬೇಕಿದೆ.