ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಿನಿಮಾ ಬಾಕ್ಸಾಫೀಸ್ ಮತ್ತೆ ಕಮಾಲ್ ಮಾಡಿತ್ತಿದೆ. ಮೊದಲನೇ ದಿನ ಬರೋಬ್ಬರಿ 10.05 ಕೋಟಿ ಲೂಟಿ ಮಾಡಿದ್ದ ಪೊಗರು, ಎರಡನೇ ದಿನ ಕೂಡ ಕಮಾಲ್ ಮಾಡಿದೆ. ಕನ್ನಡ ಅಷ್ಟೇ ಅಲ್ಲದೆ ತಮಿಳು, ತೆಲುಗಿನಲ್ಲೂ ರಿಲೀಸ್ ಆಗಿರೋದ್ರಿಂದ ಸಿನಿಮಾದ ಕಲೆಕ್ಷನ್ ಮೇಲೆ ಎಲ್ಲರ ಕಣ್ಣಿದೆ.
ಯಾವುದೇ ಸಿನಿಮಾ ಆಗಿದ್ರೂ, ಮೊದಲ ಮೂರು ದಿನದ ಕಲೆಕ್ಷನ್ ಬಹಳ ಮುಖ್ಯ ಆಗಿರುತ್ತೆ. ಹೀಗಾಗಿ ಪೊಗರು ಕೂಡ ಮೊದಲ ಮೂರು ದಿನ ಪರೀಕ್ಷೆಯನ್ನ ಗೆದ್ದು ಬೀಗಿದೆ. ಫೆಬ್ರವರಿ 21 ಒಂದು ದಿನ ಬಿಟ್ಟು, ಫೆಬ್ರವರಿ 19 ಹಾಗೂ 20 ಈ ಎರಡು ದಿನ ಯಾವ್ಯಾವ ಭಾಷೆಯಲ್ಲಿ ಎಷ್ಟೆಷ್ಟು ಕಲೆಕ್ಷನ್ ಮಾಡಿದೆ ಅನ್ನೋದನ್ನ ಡಿಟೈಲ್ಸ್ ಇಲ್ಲಿದೆ.
ಪೊಗರು ಎರಡು ದಿನದ ಕಲೆಕ್ಷನ್
1ನೇ ದಿನ 8.70 ಕೋಟಿ (Karnataka)
1.35 ಕೋಟಿ (Andra Pradesh+Telangana+Tamilnadu)
2 ನೇ ದಿನ 10 ಕೋಟಿ (Karnataka)
ಒಟ್ಟು 2 ದಿನದ ಗಳಿಕೆ 21 ಕೋಟಿ
ಪೊಗರು ಎರಡೇ ದಿನಕ್ಕೆ 21 ಕೋಟಿ ಗಳಿಸಿದೆ. ಲಾಕ್ಡೌನ್ ಬಳಿಕ ಕನ್ನಡ ಸಿನಿಮಾ ಇಷ್ಟೊಂದು ದೊಡ್ಡ ಬ್ಯುಸಿನೆಸ್ ಮಾಡಿದ್ದು, ರಿಲೀಸ್ಗೆ ರೆಡಿಯಾಗಿರೋ ಸಿನಿಮಾಗಳಿಗೆ ಹೊಸ ಹುರುಪು ಬಂದಿದೆ. ಇನ್ನು ಮೊದಲ ಎರಡು ದಿನದಂತೆ, ಮೂರನೇ ದಿನ ಕೂಡ 10 ಕೋಟಿ ಬ್ಯುಸಿನೆಸ್ ಮಾಡಿದ್ರೆ, ಮೂರೇ ದಿನದಲ್ಲಿ 30 ಕೋಟಿ ಬಾಚಿದಂತಾಗುತ್ತೆ.