ಧ್ರುವ ಸರ್ಜಾ ಪೊಗರು ಮೊದಲ ಮೂರು ದಿನದಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಮೊದಲ ಮೂರು ದಿನ ಬರೋಬ್ಬರಿ ₹30 ಕೋಟಿ ಹಣ ಕಲೆಹಾಕಿದೆ. ಕನ್ನಡ, ತಮಿಳು, ತೆಲುಗಿನಲ್ಲೂ ರಿಲೀಸ್ ಆಗಿರೋದ್ರಿಂದ ಸಿನಿಮಾದ ಕಲೆಕ್ಷನ್ ಮೇಲೆ ಕಣ್ಣಿತ್ತು. ಅದ್ರಂತೆ ಬಾಕ್ಸಾಫೀಸ್ನಲ್ಲಿ ಪೊಗರು ಧೂಳೆಬ್ಬಿಸಿದೆ.
ಪೊಗರು ಸಿನಿಮಾಗೆ ಮೊದಲ ಮೂರು ದಿನ ಕಲೆಕ್ಷನ್ ಬಹಳ ಮುಖ್ಯ ಆಗಿತ್ತು. ಯಾಕಂದ್ರೆ, ಮೂರು ಭಾಷೆ ಸೇರಿ ಸಾವಿರಕ್ಕೂ ಅಧಿಕ ಚಿತ್ರಮಂದಿರದಲ್ಲಿ ರಿಲೀಸ್ ಮಾಡಲಾಗಿದೆ. ಹೀಗಾಗಿ ಪೊಗರು ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸಲೇ ಬೇಕಾದ ಅನಿವಾರ್ಯತೆ ಇತ್ತು. ಮೊದಲ ಮೂರು ದಿನ ಪರೀಕ್ಷೆಯನ್ನ ಗೆದ್ದು ಗೆಲುವಿನ ನಗೆ ಬೀಗಿದೆ.
ಫೆಬ್ರವರಿ 19, ಫೆಬ್ರವರಿ 20, ಹಾಗೂ 21 ಈ ಮೂರು ದಿನ ಎಲ್ಲೆಲ್ಲಿ ಎಷ್ಟೆಷ್ಟು ಕಲೆಕ್ಷನ್ ಮಾಡಿದೆ ಅನ್ನೋನ್ನ ಡಿಟೈಲ್ಸ್ ಇಲ್ಲಿದೆ.
ಪೊಗರು ಮೂರು ದಿನದ ಕಲೆಕ್ಷನ್
1ನೇ ದಿನ ₹8.70 ಕೋಟಿ (Karnataka)
₹1.35 ಕೋಟಿ (Andra Pradesh+Telangana+Tamilnadu)
2 ನೇ ದಿನ ₹10 ಕೋಟಿ (Karnataka)
3ನೇ ದಿನ ₹09 ಕೋಟಿ (Kannada, Telugu, Tamil)
ಒಟ್ಟು 3 ದಿನದ ಗಳಿಕೆ ₹30 ಕೋಟಿ
ಪೊಗರು ಮೂರು ದಿನಕ್ಕೆ ₹30 ಕೋಟಿ ಗಳಿಸಿದೆ. ಲಾಕ್ಡೌನ್ ಬಳಿಕ ಕನ್ನಡ ಸಿನಿಮಾ ಇಷ್ಟೊಂದು ದೊಡ್ಡ ಗಳಿಕೆ ಕಂಡ ಮೊದಲ ಸಿನಿಮಾವಿದು. ಹೀಗಾಗಿ ರಿಲೀಸ್ಗೆ ರೆಡಿಯಾಗಿರೋ ಸಿನಿಮಾಗಳಿಗೆ ಪೊಗರು ಹೊಸ ಭರವಸೆ ನೀಡಿದೆ. ಇನ್ನು ಮೊದಲ ಮೂರು ದಿನದಂತೆ, ಇನ್ನೊಂದು ವಾರ ಗೆದ್ದುಬಿಟ್ರೆ ಪೊಗರು ₹50 ಕೋಟಿ ಕ್ಲಬ್ ಸೇರೋದ್ರಲ್ಲಿ ಡೌಟೇ ಇಲ್ಲ.