ನೀನಾಸಂ ಸತೀಶ್ ತಮಿಳು ಸಿನಿಮಾದಲ್ಲಿ ನಟಿಸ್ತಿರೋದು ಗೊತ್ತೇ ಇದೆ. ಕೆಲವು ದಿನಗಳ ಹಿಂದೆಷ್ಟೇ ತಮಿಳು ಸಿನಿಮಾ ಸೆಟ್ಟೇರಿತ್ತು. ಕಾಲಿವುಡ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡ್ತಿರೋ ಖುಷಿಯಲ್ಲಿದ್ದ ಸತೀಶ್ ಈಗ ಯಶಸ್ವಿಯಾಗಿ ಸಿನಿಮಾ ಮುಗಿಸಿದ್ದಾರೆ.
ನೀನಾಸಂ ಸತೀಶ್ ಮೊದಲ ತಮಿಳು ಸಿನಿಮಾ ಪಾಗೈವನುಕ್ಕು ಅರುಲ್ವೈ. ಈ ಸಿನಿಮಾ ಮೂರು ತಿಂಗಳ ಹಿಂದೆ ಚಿತ್ರೀಕರಣ ಆರಂಭ ಆಗಿತ್ತು. ತಮಿಳಿನ ನಿರ್ದೇಶಕ ಕಮ್ ನಟ ಶಶಿಕುಮಾರ್ ಈ ಚಿತ್ರದಲ್ಲಿ ಲೀಡ್ ರೋಲ್ನಲ್ಲಿ ನಟಿಸುತ್ತಿದ್ದಾರೆ. ಇಬ್ಬರು ನಾಯಕರಲ್ಲಿ ನೀನಾಸಂ ಸತೀಶ್ ಕೂಡ ಒಬ್ಬರಾಗಿದ್ದು, ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಈಗಾಗ್ಲೇ ಈ ಚಿತ್ರದ ಚಿತ್ರೀಕರಣ ಯಶಸ್ವಿಯಾಗಿ ಮುಗಿದಿದೆ.
ಇತ್ತೀಚೆಗೆ ಪಾಗೈವನುಕ್ಕು ಅರುಲ್ವೈ ತಂಡ ಶಿವಮೊಗ್ಗದಲ್ಲಿ ಬೀಡುಬಿಟ್ಟಿತ್ತು. ಕಳೆದ ಕೆಲವು ದಿನಗಳಿಂದ ಶಿವಮೊಗ್ಗದ ಹಲವೆಡೆ ಚಿತ್ರದ ಕೆಲವು ದೃಶ್ಯಗಳನ್ನ ಚಿತ್ರೀಕರಿಸಲಾಗಿದೆ. ಶಿವಮೊಗ್ಗದ ಸೆಂಟ್ರಲ್ ಜೈಲ್ನಲ್ಲಿ ಶೂಟ್ ಮಾಡಲಾಗಿದೆ. ಇದೇ ಜಾಗದಲ್ಲಿ ತಮಿಳನ ಮಾಸ್ಟರ್ ಸಿನಿಮಾವನ್ನೂ ಚಿತ್ರೀಕರಿಸಲಾಗಿತ್ತು. ನೀನಾಸಂ ಸತೀಶ್ ಶಿವಮೊಗ್ಗದಲ್ಲಿ ಚಿತ್ರೀಕರಣ ಮುಗಿಸಿ ಹಿಂತಿರುಗಿದ್ದಾರೆ.
ನೀನಾಸಂ ಸತೀಶ್ ತನ್ನ ಮೊದಲ ತಮಿಳು ಸಿನಿಮಾ ಬಗ್ಗೆ ಖುಷಿಯಾಗಿದ್ದು, ಪಾಗೈವನುಕ್ಕು ಅರುಲ್ವೈ ಚಿತ್ರದಲ್ಲಿ ಮೂರು ಹಾಡುಗಳು ಸತೀಶ್ಗಾಗಿ ನೀಡಿದ್ದಾರೆ. ಇದ್ರೊಂದಿಗೆ ಆ್ಯಕ್ಷನ್ ಸೀನ್ ಗಳು ಕೂಡ ಇವೆ. ಹೀಗಾಗಿ ಪಾಗೈವನಕ್ಕು ಅರುಲ್ವೈ ಚಿತ್ರ ನೋಡೋಕೆ ಕನ್ನಡಿಗರೂ ಕೂಡ ಕಾದುಕೂತಿದ್ದಾರೆ.