ಸ್ಯಾಂಡಲ್ವುಡ್ನ ಬಹುನಿರೀಕ್ಷೆಯ ಸಿನಿಮಾ ಕೋಟಿಗೊಬ್ಬ 3. ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ 3 ಎಲ್ಲಾ ಸರಿಯಿದ್ದಿದ್ರೆ, ಇಷ್ಟೊತ್ತಿಗಾಗ್ಲೇ ರಿಲೀಸ್ ಆಗ್ಬೇಕಿತ್ತು. ಆದ್ರೆ, ಕೊರೊನಾದಿಂದಾಗಿ ಏಪ್ರಿಲ್ ಕೊನೆ ವಾರದಲ್ಲಿ ಬಿಡುಗಡೆಯಾಗ್ಬೇಕಿದ್ದ ಸಿನಿಮಾ ಅನಿರ್ಧಿಷ್ಟ ಅವಧಿಗೆ ಮುಂದೂಡಲ್ಪಟ್ಟಿದೆ. ಅಷ್ಟ್ರಲ್ಲೇ ಕೋಟಿಗೊಬ್ಬ 3ಸಿನಿಮಾವನ್ನ ಒಟಿಟಿಗೆ ನೀಡುವಂತೆ ನಿರ್ಮಾಪಕ ಸೂರಪ್ಪ ಬಾಬು ಆಪ್ತರೊಬ್ಬರು ಸಲಹೆ ನೀಡಿದ್ದಾರೆ. ಆದ್ರೆ, ಸೂರಪ್ಪ ಬಾಬು ಒಟಿಟಿ ಕಡೆಗೆ ಮುಖ ಮಾಡದೆ ಇರಲು ನಿರ್ಧರಿಸಿದ್ದಾರೆ.
ಕೋಟಿಗೊಬ್ಬ 3 ಸಿನಿಮಾದ ಹಾಡುಗಳು ಈಗಾಗ್ಲೇ ಹಿಟ್ ಆಗಿವೆ. ಕೋಟಿಗೊಬ್ಬ 3 ಟ್ರೈಲರ್ ನೋಡಿದವ್ರೂ ಮೆಚ್ಚಿ ಕೊಂಡಾಡಿದ್ದಾರೆ. ಇನ್ನು ಕಿಚ್ಚ ಸುದೀಪ್ ಅಭಿಮಾನಿಗಳೂ ಕೂಡ ಕೋಟಿಗೊಬ್ಬ 3 ಕನ್ನಡ ಸಿನಿಮಾ ನೋಡೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಅಷ್ಟರಲ್ಲೇ ಒಟಿಟಿಯೊಂದು ನಿರ್ಮಾಪಕ ಸೂರಪ್ಪ ಬಾಬುಗೆ ₹35 ಕೋಟಿಗೆ ಆಫರ್ ಕೊಟ್ಟಿದೆಯೆಂದು ಕನ್ನಡ ವೆಬ್ ಸೈಟ್ ವರದಿ ಮಾಡಿದೆ. ಆದ್ರೆ ನಿರ್ಮಾಪಕರು ಮಾತ್ರ ಈ ಆಫರ್ ಅನ್ನ ತಳ್ಳಿ ಹಾಕಿದ್ದಾರೆ.
ಸುದೀಪ್ ಫೈಲ್ವಾನ್ ಬಳಿಕ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಹೀಗಾಗಿ ಲಾಕ್ಡೌನ್ ಮುಗಿದು ಥಿಯೇಟರ್ಗಳು ಓಪನ್ ಆಗುತ್ತಿದ್ದಂತೆ ಕೋಟಿಗೊಬ್ಬ 3 ಸಿನಿಮಾ ಬಿಡುಗಡೆ ಮಾಡೋಕೆ ಸಿದ್ದತೆ ಮಾಡ್ಕೊಂಡಿದ್ದಾರೆ. ಅಲ್ಲದೆ ಸೂರಪ್ಪ ಬಾಬುಗೆ ಸಿನಿಮಾ ಬಗ್ಗೆ ನಂಬಿಕೆಯಿದ್ದು, ಕೋಟಿಗೊಬ್ಬ 3 ಕಮ್ಮಿ ಅಂದ್ರೂ ₹100 ಕೋಟಿ ಬಾಚಿಕೊಳ್ಳುತ್ತೆ. ಅಂದ್ಮೇಲೆ ನಾನ್ಯಾಕೆ ಒಟಿಟಿಗೆ 35 ಕೋಟಿಗೆ ಮಾರಲಿ ಎಂದು ಹೇಳಿದ್ದಾರೆ.
ಸದ್ಯ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣದ ಚಿತ್ರೀಕರಣ ಕೂಡ ಕೊನೆಯ ಹಂತದಲ್ಲಿದೆ. ಹೀಗಾಗಿ ಕೋಟಿಗೊಬ್ಬ 3 ಮೊದಲು ಬಿಡುಗಡೆಯಾಗುತ್ತಾ? ವಿಕ್ರಾಂತ್ ರೋಣ ಮೊದಲು ರಿಲೀಸ್ ಆಗುತ್ತಾ? ಅನ್ನೋದನ್ನು ಕಿಚ್ಚನ ಅಭಿಮಾನಿಗಳು ಎದುರು ನೋಡ್ತಿದ್ದಾರೆ.