ತಮಿಳಿನ ಮಾಸ್ಟರ್ ಸಿನಿಮಾ 110 ಕೋಟಿಗೂ ಹೆಚ್ಚು ವಹಿವಾಟು ನಡೆಸಿ ಕೊರೊನಾ ನಂತರದ ಸಿನಿಮಾ ಇಂಡಸ್ಟ್ರಿಗೆ ದೊಡ್ಡ ಧೈರ್ಯ ಕೊಟ್ಟಿದೆ. ವಿಜಯ್ ಸೇರುಪತಿ ಮತ್ತು ದಳಪತಿ ವಿಜಯ್ ಕಾಂಬಿನೇಶನ್ ಭಾರೀ ಯಶಸ್ಸು ಕಂಡಿದೆ. ಅಮೇಜಾನ್ ಪ್ರೈಮ್ ನಲ್ಲೂ ಈ ಚಿತ್ರ ಸೂಪರ್ ಡೂಪರ್ ಹಿಟ್ ಎನಿಸಿಕೊಂಡಿದೆ. ಆದ್ರೆ ಚಿತ್ರತಂಡ ಅಂದುಕೊಂಡಿರದ ಡಿಮ್ಯಾಂಡ್ ಒಂದು ಆಶ್ಚರ್ಯಕರವಾಗಿ ಮುಂದೆ ಬಂದಿತ್ತಂತೆ. ಅದೇ ಹಿಂದಿ ಡಬ್ಬಿಂಗ್ !


ತಮಿಳು ಚಿ್ರಗಳಿಗೆ ತಮ್ಮದೇ ಆದ ಮಾರುಕಟ್ಟೆ ಇದೆ. ಬೇರೆ ಯಾವ ಭಾಷೆಯ ಸಿನಿಮಾ ಬಂದ್ರೂ ತಮಿಳು ವೀಕ್ಷಕರು ಮೊದಲು ನೋಡೋದು ತಮಿಳು ಚಿತ್ರವನ್ನೇ. ಹಾಗಾಗಿ ಹಾಲಿವುಡ್ ಸಿನಿಮಾ ಬಂದ್ರೂ ಅದು ತಮಿಳಿಗೆ ಡಬ್ ಆಗಿಯೇ ಬರುತ್ತದೆ. ಆದ್ರೆ ಮಾಸ್ಟರ್ ಹಿಂದಿ ಡಬ್ಬಿಂಗ್ ವರ್ಶನ್ ಎಲ್ಲಿ ಅಂತ ಒಂದಷ್ಟು ಬೇಡಿಕೆ ಬಂದಿದ್ದು ಕೇಳಿ ಚಿತ್ರತಂಡಕ್ಕೆ ಆಶ್ಚರ್ಯ ಆಯ್ತಂತೆ. ಸರಿ, ಇದೂ ಒಂದು ಆಗಿಬಿಡ್ಲಿ ಅಂತ ಮಾಸ್ಟರ್ ಹಿಂದಿಗೆ ಡಬ್ ಆಗಿದೆ.
ಹಿಂದಿಯ ಮಾಸ್ಟರ್ ಚಿತ್ರ zee5ನಲ್ಲಿ ಇಂದು ಬಿಡುಗಡೆಯಾಗಿದೆ. ಅಲ್ಲೂ ವಿಜಯ್ ಮತ್ತು ವಿಜಯ್ ಸೇತುಪತಿ ನಡುವಿನ ಯುದ್ಧ ದಾಖಲೆಗಳನ್ನು ಧೂಳೀಪಟ ಮಾಡಿಬಿಟ್ಟಿದ್ಯಂತೆ. ಜನರ ಬೇಡಿಕೆಯ ಮೇರೆಗೆ ಹಿಂದಿಗೆ ಡಬ್ ಆದ ಮಾಸ್ಟರ್ ಒಟಿಟಿಯಲ್ಲೂ ದೊಡ್ಡ ಯಶಸ್ಸು ಕಂಡಿರೋದು ಚಿತ್ರತಂಡಕ್ಕೆ ಅಚ್ಚರಿಯ ಸಂತಸ ತಂದಿದೆ.