ಥಿಯೇಟರ್ನಲ್ಲಿ ಸಿನಿಮಾ ಆರಂಭಕ್ಕೂ ಮುನ್ನ ಧೂಮಪಾನ ನಿಷೇಧದ ಜಾಹೀರಾತನ್ನ ನೋಡಿರುತ್ತೀರ. ಧೂಮಪಾನ ಮಾಡುತ್ತಿದ್ದ ತಂದೆಯ ಪಕ್ಕದಲ್ಲೇ ಕೂತು ಮುಗ್ಧಳಾಗಿ ಕಂಡಿದ್ದ ಆ ಬಾಲನಟಿ ಈಗ ಕನ್ನಡ ಸಿನಿಮಾವೊಂದ್ರಲ್ಲಿ ನಾಯಕಿಯಾಗಿದ್ದಾರೆ. ಅಂದ್ಹಾಗೆ, ಅಂದಿನ ಬಾಲನಟಿ ಇಂದು ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾಳೆ. ಅಂದ್ಹಾಗೆ ಆಕೆಯ ಹೆಸರು ಸಿಮ್ರಾನ್ ನಾಟೇಕರ್.
ಸಿಮ್ರಾನ್ ನಾಟೇಕರ್ ಮೂಲತಃ ಮುಂಬೈನವರು. ಸಾಕಷ್ಟು ಜಾಹಿರಾತುಗಳಲ್ಲಿ ಅಭಿನಯಿಸಿರೋ ಸಿಮ್ರಾನ್, ಇದೇ ಮೊದಲ ಬಾರಿಗೆ ಕನ್ನಡದ ಬರ್ಕ್ಲಿ ಅನ್ನೋ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಆನೇಕಲ್ ಬಾಲರಾಜ್ ನಿರ್ಮಿಸುತ್ತಿರೋ ಬರ್ಕ್ಲಿ ಯಲ್ಲಿ ಸಿಮ್ರಾನ್ ಗ್ಲಾಮರ್ ಲುಕ್ ಕೊಟ್ಟಿದ್ದಾಳೆ. ಸದ್ಯ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಕೂಡ ಬಿರುಸಿನಿಂದ ಸಾಗಿದೆ.
ಈ ಹಿಂದೆ ಕರಿಯ, ಗಣಪ, ಕರಿಯ ೨ ಅಂತ ಅದ್ಧೂರಿ ಸಿನಿಮಾಗಳನ್ನ ನಿರ್ಮಿಸಿರೋ ಆನೇಕಲ್ ಬಾಲರಾಜ್ ಮಗ ಸಂತೋಷ್ ಬಾಲರಾಜ್ ಗಾಗಿ ನಿರ್ಮಿಸಿರೋ ಮತ್ತೊಂದು ಅದ್ದೂರಿ ಚಿತ್ರ ಬರ್ಕ್ಲಿ. ವಸಿಷ್ಠ ಸಿಂಹ ಅಭಿನಯದ ಕಾಲಚಕ್ರ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿರುವ ಸುಮಂತ್ ಕ್ರಾಂತಿ ಈ ಚಿತ್ರದ ನಿರ್ದೇಶಕರು.
ನೋ ಸ್ಮೋಕಿಂಗ್ ಜಾಹೀರಾತಿನ ಸಿಮ್ರಾನ್ ನಾಟೇಕರ್ ಸದ್ಯದ್ರಲ್ಲೇ ತೆರೆಮೇಲೆ ಕಾಣಿಸಿಕೊಳ್ಳಿದ್ದಾರೆ. ಬಾಲನಟಿಯಾಗಿ ನಟನೆಯಲ್ಲಿ ಯಶಸ್ಸು ಕಂಡಿದ್ದ ಸಿಮ್ರಾನ್, ನಾಯಕಿಯಾಗಿ ಗೆಲುವು ಪಡೀತಾರಾ? ಬಾಲ್ಯದಲ್ಲಿ ಫೇಮಸ್ ಆದಷ್ಟೇ ಇಲ್ಲೂ ಆಗ್ತಾರಾ ಅನ್ನೋ ಕುತೂಹಲವಿದೆ.