ದರ್ಶನ್ ಹೆಸರಲ್ಲಿ ₹25 ಕೋಟಿ ಸಾಲ ಪಡೆಯಲು ಯತ್ನಿಸಿದ್ದರು ಎಲ್ಲಾದ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ಅರುಣಾಕುಮಾರಿ ನಿರ್ಮಾಪಕ ಉಮಾಪತಿ ಕಡೆ ಬೊಟ್ಟು ಮಾಡುತ್ತಿದ್ರೆ, ಇನ್ನೊಂದ್ಕಡೆ ಉಮಾಪತಿ ಅರುಣಾಕುಮಾರಿ ವಿರುದ್ಧ ತಿರುಗಿಬಿದ್ದಿದ್ದಾರೆ. ಹೀಗಾಗಿ ಪ್ರಕರಣ ಪೊಲೀಸ್ ತನಿಖೆಯಿಂದ್ಲೇ ಹೊರಬರಬೇಕಿದೆ. ಇದೇ ವಿಚಾರವಾಗಿ ನಟ ಹಾಗೂ ಜಿಡಿಎಸ್ ಯುವ ಮೋರ್ಚಾದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಮ್ಮ ಅಭಿಪ್ರಾಯವನ್ನು ಹೊರ ಹಾಕಿದ್ದಾರೆ.
ದರ್ಶನ್ ಸ್ಯಾಂಡಲ್ವುಡ್ನ ಹಿರಿಯ ನಟ. ಅವರು ನಮ್ಮ ಕನ್ನಡ ಚಿತ್ರರಂಗಕ್ಕೆ ಬಹಳ ಕೊಡುಗೆ ನೀಡಿದ್ದಾರೆ. ಕಳೆದ ಎರಡು ಮೂರು ದಿನಗಳಿಂದ ವಿವಾದ ನಡೆಯುತ್ತಿದೆ. ಇದನ್ನು ಬಗೆಹರಿಸಿಕೊಳ್ಳೊಕೆ ಭಗವಂತ ಶಕ್ತಿ ಕೊಟ್ಟಿದ್ದಾನೆ. ಅದನ್ನು ಅವರು ಬಗೆಹರಿಸಿಕೊಳ್ತಾರೆ ಎಂದಿದ್ದಾರೆ.
ದೇವನಹಳ್ಳಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನಿಖಿಲ್ ಕುಮಾರಸ್ವಾಮಿ ದರ್ಶನ್ ಉಮಾಪತಿ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು. ಸದ್ಯ, ದರ್ಶನ್ ಹಾಗೂ ಉಮಾಪತಿ ಯಾವುದೇ ಪ್ರತಿಕ್ರಿಯೆ ನೀಡದೆ ಇರಲು ತೀರ್ಮಾನಿಸಿದ್ದಾರೆ. ಅಲ್ಲದೆ ದರ್ಶನ್ ಕೂಡ ನಿರ್ಮಾಪಕರನ್ನು ಬಿಟ್ಟು ಕೊಡೋದಿಲ್ಲ ಅನ್ನೋ ಮಾತನ್ನು ಹೇಳಿದ್ದರು.
ಸದ್ಯ ಉಮಾಪತಿ ಹಾಗೂ ದರ್ಶನ್ ಇಬ್ಬರ ನಡುವೆ ರಾಜಿ ಸಂಧಾನ ನಡೆದಿದೆ ಎನ್ನಲಾಗಿದೆ. ರಹಸ್ಯ ಸ್ಥಳದಲ್ಲಿ ಇಬ್ಬರೂ ಈ ಪ್ರಕರಣವನ್ನು ಇಲ್ಲಿಗೆ ಕೈ ಬಿಡಲು ತೀರ್ಮಾನಿಸಿದ್ದಾರೆ ಮಾತು ಕೇಳಿಬರುತ್ತಿದೆ. ಆದ್ರೆ, ಅರುಣಾಕುಮಾರಿ ಮಾತ್ರ ತನ್ನ ಬೀದಿಗೆ ತಳ್ಳಿದ್ದಾರೆ ಅಂತ ಆರೋಪ ಮಾಡುತ್ತಿದ್ದಾರೆ.