ಹೆಚ್ಚುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆಯನ್ನ ನಿಯಂತ್ರಿಸಲು ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಜಾರಿ ಮಾಡಿದೆ. ಹೀಗಾಗಿ 10 ಗಂಟೆಗೆ ಸಿನಿಮಾ ಹಾಲ್ಗಳು ಬಂದ್ ಮಾಡಲೇ ಬೇಕಾದ ಅನಿವಾರ್ಯತೆ ಎದುರಾಗಿದೆ. ಅದ್ರಲ್ಲೂ ಸಂಜೆ 7.30 ಶೋಗೆ ಮೇಲೆ ಪರಿಣಾಮ ಬೀರಿದ್ದು, ರಾಬರ್ಟ್ ಹಾಗೂ ಯುವರತ್ನ ತಂಡಕ್ಕೆ ಬರೆ ಮೇಲೆ ಬರೆ ಎಳೆದಂತಾಗಿದೆ.
ಅರ್ಧಗಂಟೆ ಮುಂಚಿತವಾಗಿ ಶೋ ಆರಂಭ
ಬಹುತೇಕ ಚಿತ್ರಮಂದಿರಗಳು ಅರ್ಧ ಗಂಟೆ ಮುಂಚಿತವಾಗಿ ಸಿನಿಮಾ ಶೋಗಳನ್ನ ಆರಂಭ ಮಾಡಿದೆ. ಬೆಳಗ್ಗೆ 10.30ಕ್ಕೆ ಆರಂಭ ಆಗ್ಬೇಕಿದ್ದ ಶೋ 10 ಗಂಟೆಗೆ ಶುರುವಾಗಲಿದೆ. ಹೀಗಾಗಿ ರಾತ್ರಿ 7 ಗಂಟೆಗೆ ಶೋ ಶುರುವಾದ್ರೂ, ಸಿನಿಮಾ ಬಿಡೋದು 10 ಗಂಟೆಯಾಗ್ತಿದೆ. ಹೀಗಾಗಿ 7 ಗಂಟೆ ಶೋ ಮೇಲೆ ನೈಟ್ ಕರ್ಫ್ಯೂ ನೇರ ಪರಿಣಾಮ ಬೀರುತ್ತಿದೆ. ಯುವರತ್ನ, ರಾಬರ್ಟ್ ಎರಡೂ ಚಿತ್ರಗಳ ಮೇಲೆ ಪರಿಮಾಣ ಬೀರಿದೆ.
ರಾಬರ್ಟ್ 2 ಗಂಟೆ 49 ನಿಮಿಷ ಸಿನಿಮಾ: ಚಿತ್ರಮಂದಿರಕ್ಕೆ ಸಂಕಷ್ಟ
ರಾಬರ್ಟ್ ಸಿನಿಮಾದ ಲೆಂಥ್ ದೊಡ್ಡದಿದೆ. ಸುಮಾರು 2 ಗಂಟೆ 49 ನಿಮಿಷ ಸಿನಿಮಾ ಆಗಿರೋದ್ರಿಂದ 7 ಗಂಟೆಗೆ ಆರಂಭ ಮಾಡಿದ್ರೂ, ಇಂಟರ್ವಲ್ ಎಲ್ಲಾ ಸೇರಿ 3 ಗಂಟೆ ದಾಟುತ್ತೆ. ಹೀಗಾಗಿ ಸಂಜೆ ಶೋಗೆ ಬಾರಿ ಏಟು ಬೀಳುತ್ತಿದೆ. ಹೀಗಾಗಿ ಚಿತ್ರಮಂದಿರ ಅದ್ಯಾವ ರೀತಿ ಟೈಮ್ ಮ್ಯಾನೇಜ್ಮೆಂಟ್ ಮಾಡುತ್ತೋ ಗೊತ್ತಿಲ್ಲ.
ಯುವರತ್ನಗೆ ಮಲ್ಟಿಪ್ಲೆಕ್ಸ್ನಲ್ಲಿ 15 ಶೋ ಕಟ್
ನೈಟ್ ಕರ್ಪ್ಯೂ ಜಾರಿಯಿಂದಾಗಿ ಮಲ್ಟಿಪ್ಲೆಕ್ಸ್ನಲ್ಲಿ ಶುರುವಾಗ್ಬೇಕಿದ್ದ ನೈಟ್ ಶೋಗಳು ಕ್ಯಾನ್ಸಲ್ ಆಗಿವೆ. ರಾತ್ರಿ, 7, 8 ಹಾಗೂ 9 ಗಂಟೆ ಮೇಲೆ ಆರಂಭ ಆಗ್ಬೇಕಿದ್ದ ಶೋಗಳನ್ನ ನಿಲ್ಲಿಸಲಾಗಿದೆ. ಹೀಗಾಗಿ 10 ದಿನಗಳ ಕಾಲ ಯುವರತ್ನಗೆ ಕಮ್ಮಿ ಅಂದ್ರೂ 150 ಶೋ ಕ್ಯಾನ್ಸಲ್ ಆಗಿದ್ದು, ಬಾರಿ ನಷ್ಟ ಎದುರಿಸಬೇಕಾಗಿದೆ.