ಲಾಕ್ಡೌನ್ ಸಿನಿಮಾ ಕಥೆ ಮುಗೀತು. ಅದ್ರಲ್ಲೂ ಹೊಸಬರ ಸಿನಿಮಾಗಳ ಕಥೆಯಂತೂ ಮುಗಿದೇ ಹೋಯ್ತು ಅಂತ ಮಾತಾಡಿಕೊಂಡವ್ರೇ ಹೆಚ್ಚು. ಇಂತಹ ವೇಳೆ ಕಾಡು ಮಳೆ ಅನ್ನೋ ಸಿನಿಮಾದ ತಂಡ ಸ್ಯಾಂಡಲ್ವುಡ್ನಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ. ಕೇವಲ ಒಂದೇ ಒಂದು ಟೀಸರ್ನಿಂದ ಕಾಡು ಮಳೆ ಸಿನಿಮಾದ ಟೀಸರ್ ಸೆನ್ಸೇಷನ್ ಹುಟ್ಟುಹಾಕಿದೆ.
ಬಹುತೇಕ ಹೊಸಬರೇ ಕೂಡಿ ಮಾಡಿರೋ ಕಾಡುಮಳೆ ಸಿನಿಮಾದ ಟೀಸರ್ ಬರೋಬ್ಬರಿ 1 ಮಿಲಿಯನ್ಗೂ ಅಧಿಕ ವೀವ್ಸ್ ಪಡ್ಕೊಂಡಿದೆ. ಯಾವುದೇ ಬ್ರ್ಯಾಂಡ್ ಇಲ್ಲದೆ. ಸ್ಟಾರ್ ಗ್ರೂಪ್ ಇಲ್ಲದೇ ಯಾವುದೇ ಪ್ರಚಾರವಿಲ್ಲದೆ ಕಾಡುಮಳೆ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ.
ಹೊಸ ನಿರ್ದೇಶಕ ಸಮರ್ಥ್ ಕಾಡು ಮಳೆ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ನಾಲ್ಕೈದು ಮಂದಿ ಗೆಳೆಯರು ಸೇರಿಕೊಂಡು ಬಂಡವಾಳ ಹೂಡಿದ್ದಾರೆ. ಈ ಚಿತ್ರದಲ್ಲಿ ಹರ್ಷನ್, ಸಂಗೀತ, ಗೌತಮ್, ಗಿಲ್ಲಿ ಮಂಜು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷ ಅಂದ್ರೆ, ಬಹುದಿನಗಳ ಬಳಿಕ ನಟಿ ವಿಜಯಲಕ್ಷ್ಮಿ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.
ಟ್ಯಾಲೆಂಟೆಡ್ ಟೆಕ್ನಿಷಿಯನ್ಸ್ ಸೇರಿಕೊಂಡು ಮಾಡಿರೋ ಕಾಡುಮಳೆ ಟೆಕ್ನಿಕಲ್ ವಿಚಾರಕ್ಕೆ ಸಾಕಷ್ಟು ಮಗನ ಸೆಳೆಯುತ್ತಿದೆ. ಹೊಸಬರ ಸಿನಿಮಾ ಕಾಡು ಮಳೆ ಟ್ರೈಲರ್ ಇಷ್ಟೊಂದು ಸದ್ದು ಮಾಡ್ತಿರೋದು ಸ್ಯಾಂಡಲ್ವುಡ್ ಮಂದಿಗೆ ಹೊಸ ಭರವಸೆ ನೀಡಿದೆ.