ಡಾ ರಾಜ್ಕುಮಾರ್ ಕುಟುಂಬ ಉಳಿದ ಭಾಷೆಗಳ ತಾರೆಯರ ಕುಟುಂಬದ ಜೊತೆ ಒಳ್ಳೆ ಸಂಬಂಧವನ್ನೇ ಹೊಂದಿದೆ. ಆದ್ರೆ ಮೊದಲ ಬಾರಿಗೆ ಅಪ್ಪು ಮತ್ತು ಅಕ್ಕಿನೇನಿ ನಾಗಾರ್ಜುನ ಎದುರಾಳಿಗಳಾಗುವ ಸನ್ನಿವೇಶ ಬಂದಂತಿದೆ. ಇದಕ್ಕೆಲ್ಲಾ ಕಾರಣ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಟನೆಯ ಹೊಸಾ ಸಿನಿಮಾ ಯುವರತ್ನ.
ಕನ್ನಡ ಸಿನಿಮಾಗಳು ಈಗ ಬೇರೆ ಭಾಷೆಗಳಲ್ಲೂ ಬಿಡುಗಡೆಯಾಗೋದು ಸಾಮಾನ್ಯ ಎನ್ನುವಂತಾಗಿದೆ. ಪ್ಯಾನ್ ಇಂಡಿಯಾ ರಿಲೀಸ್ ಅನ್ನೋದೇ ಒಂದು ಟ್ರೆಂಡ್ ಆಗಿದೆ. ಇತ್ತೀಚೆಗಷ್ಟೇ ಪೊಗರು ಮತ್ತು ರಾಬರ್ಟ್ ಕೂಡಾ ತೆಲುಗು ಮತ್ತು ತಮಿಳಿನಲ್ಲಿ ಬಿಡುಗಡೆಯಾಗಿ ಸಾಕಷ್ಟು ಸದ್ದು ಕೂಡಾ ಮಾಡಿತ್ತು.
ಈಗ ಪುನೀತ್ ರಾಜ್ಕುಮಾರ್ ಅಭಿನಯದ ಯುವರತ್ನ ಚಿತ್ರ ಕೂಡಾ ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗ್ತಿದೆ. ಏಪ್ರಿಲ್ 1 ಕ್ಕೆ ಯುವರತ್ನ ತೆರೆಕಾಣುತ್ತಿದೆ. ಕನ್ನಡದಲ್ಲಿ ಯುವರತ್ನಕ್ಕೆ ಎದುರಾಳಿಗಳು ಇಲ್ಲ. ಆದ್ರೆ ತೆಲುಗಿನಲ್ಲಿ ಯುವರತ್ನ ರಿಲೀಸ್ ಆದ ಮಾರನೆಯ ದಿನವೇ ಅಕ್ಕಿನೇನಿ ನಾಗಾರ್ಜುನ ನಟನೆಯ ವೈಲ್ಡ್ ಡಾಗ್ ಚಿತ್ರ ಬಿಡುಗಡೆಯಾಗ್ತಿದೆ. ಇದು ಸ್ವಲ್ಪಮಟ್ಟಿಗೆ ದೊಡ್ಡ ಟಕ್ಕರ್ ಅಂತಲೇ ಹೇಳಬಹುದು. ತೆಲುಗು ಮಾರ್ಕೆಟ್ಟಿನಲ್ಲಿ ನಾಗಾರ್ಜುನ ಎದುರಾಗಿ ಯುವರತ್ನ ಎಷ್ಟರಮಟ್ಟಿಗೆ ಯಶಸ್ಸು ಸಾಧಿಸುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.