ಸಮಂತಾ ಹಾಗೂ ನಾಗಚೈತನ್ಯ ಟಾಲಿವುಡ್ನ ಬ್ಯೂಟಿಫುಲ್ ಪೇರ್. ಇಬ್ಬರ ಜೋಡಿ ನೋಡಿ ಅದೆಷ್ಟೋ ಮಂದಿ ಹೊಟ್ಟೆ ಉರಿದುಕೊಂಡಿದ್ದು ಇದೆ. ಇಬ್ಬರೂ ಮತ್ತೆ ಒಟ್ಟಿಗೆ ನಟಿಸ್ಬೇಕು ಅಂತ ಆಸೆಪಟ್ಟವರು ಅದೆಷ್ಟೋ ಮಂದಿ. ಮತ್ತೆ ಕೆಲವರು ಈ ಜೋಡಿಯ ಕುಡಿಯನ್ನು ನೋಡಲು ಬಯಸಿದ್ದರು. ಆದರೆ, ಈಗ್ಯಾಕೋ ಬೇರೆಯದ್ದೇ ಸುದ್ದಿ ಕೇಳಿಬರುತ್ತಿದೆ. ಇಬ್ಬರ ನಡುವಿನ ಬಾಂಧವ್ಯ ಈಗ ಹಳಸಿದೆ ಅನ್ನೋ ಮಾತು ಕೇಳಿ ಬರುತ್ತಿದೆ. ನಿಜಕ್ಕೂ ಇಬ್ಬರ ನಡುವೆ ಆಗ್ತಿರೋದೇನು?
ಸಮಂತಾಳ ಒಂದೇ ಒಂದು ನಡೆ ಇಷ್ಟೆಲ್ಲಾ ಅನುಮಾನಗಳಿಗೆ ಕಾರಣವಾಗಿದೆ. ಕೆಲವು ದಿನಗಳ ಹಿಂದೆ ಸಮಂತಾ ತನ್ನ ಹೆಸರಿನ ಜೊತೆಯಿದ್ದ ಅಕ್ಕಿನೇನಿಯನ್ನು ತೆಗೆದು ಹಾಕಿದ್ದರು. ಆಗಲೇ ಇಬ್ಬರ ಅಭಿಮಾನಿಗಳು ಕುತೂಹಲದಿಂದ ನೋಡಿದ್ದರು. ಅಕ್ಕಿನೇನಿ ಹೆಸರನ್ನು ಸಮಂತಾ ತೆಗೆದು ಹಾಕಿದ ಕೂಡಲೇ ಸುದ್ದಿ ಕಾಡ್ಗಿಚ್ಚಿನಂತೆ ಹರಡಿತ್ತು. ಆದರೆ, ಇಬ್ಬರು ಮೌನಕ್ಕೆ ಶರಣಗಾಗಿದ್ದರು.
ಕೆಲವೇ ದಿನಗಳ ಹಿಂದೆ ಸಂದರ್ಶನವೊಂದ್ರಲ್ಲಿ ಅಕ್ಕಿನೇನಿ ಹೆಸರನ್ನು ತೆಗೆದು ಹಾಕಿದ್ದೇಕೆ ಅನ್ನೋ ಪ್ರಶ್ನೆನೂ ಸಮಂತಾ ಮುಂದಿತ್ತು. ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಮಂತಾ ‘ಯಾವುದೇ ಟ್ರೋಲ್ಗಳಿಗೆ ಪ್ರತಿಕಿಯಿಸಬೇಕು ಎಂದೆನಿಸಿದರೆ ಮಾತ್ರ ಪ್ರತಿಕ್ರಿಯಿಸುತ್ತೇನೆ. ಯಾರೋ ಕೇಳಿದ ಮಾತ್ರಕ್ಕೆ ನೀಡಲಾಗುವುದಿಲ್ಲ. ಇಂತಹ ವಿಷಯಗಳನ್ನು ಚರ್ಚೆ ಮಾಡುವ ಅಗತ್ಯವೂ ನನಗಿಲ್ಲ’ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದರು.
ಈ ಹೇಳಿಕೆ ನೀಡಿದ ಬೆನ್ನಲ್ಲೇ ಸಮಂತಾ ಹಾಗೂ ನಾಗಚೈತನ್ಯ ಬಾಳಲ್ಲಿ ಬಿರುಕು ಬಿಟ್ಟಿದೆ. ಶೀಘ್ರದಲ್ಲೇ ಇಬ್ಬರೂ ತಮ್ಮ ದಾಂಪತ್ಯ ಜೀವನಕ್ಕೆ ವಿಚ್ಛೇದನ ನೀಡಲಿದ್ದಾರೆಂದು ಸುದ್ದಿಗಳು ಹಬ್ಬುತ್ತಿವೆ. ಆದರೆ, ಆಶ್ಚರ್ಯವೆಂಬಂತೆ ಸಮಂತಾ ಮಾವ ನಾಗಾರ್ಜುನಾಗೆ ಹುಟ್ಟುಹಬ್ಬದ (ಆಗಸ್ಟ್ 30) ಶುಭಾಶಯ ಕೋರಿದ್ದಾರೆ.
ಸಮಂತಾಳ ಈ ನಡೆ ಟಾಲಿವುಡ್ನಲ್ಲಿ ಗೊಂದಲವನ್ನು ಸೃಷ್ಟಿಸಿದೆ. ನಾಗಚೈತನ್ಯ ಹಾಗೂ ಸಮಂತಾ ಅಭಿಮಾನಿಗಳು ಕಂಗಾಲಾಗಿದ್ದಾರೆ. ಈ ಜೋಡಿ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡದೆ ತಮ್ಮ ಲೈಫ್ನಲ್ಲಿ ಆರಾಮಾಗಿದೆ.