ನಳೀನ್ ಕುಮಾರ್ ಕಟೀಲ್ ಆಡಿಯೋ ಬಹಿರಂಗ ಆಗುತ್ತಿದ್ದಂತೆ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯೋದು ಬಹುತೇಕ ಖಚಿತ ಅನ್ನೋ ಮಾತು ಕೇಳಿಬರುತ್ತಿದೆ. ಅತ್ತ ಸಿಎಂ ಬದಲಾವಣೆ ಬಗ್ಗೆ ಚರ್ಚೆಯಾಗುತ್ತಿದ್ದರೆ, ಇನ್ನೊಂದ್ಕಡೆ ಮಿತ್ರಮಂಡಳಿ ಆ್ಯಕ್ಟಿವ್ ಆಗಿದೆ. ಸಿಎಂ ಬದಲಾವಣೆ ಆದ್ರೆ, ತಮ್ಮ ಮುಂದಿನ ನಡೆ ಹೇಗಿರ್ಬೇಕು ಅನ್ನೋ ಬಗ್ಗೆ ಚರ್ಚೆ ಮಾಡೋಕೆ ಮುಂದಾಗಿವೆ.
ಕೆಲವು ಮೂಲಗಳ ಪ್ರಕಾರ, ಸಿಎಂ ಬದಲಾವಣೆ ಬೆಳವಣಿಗೆ ಬಗ್ಗೆ ಸಭೆ ನಡೆಸಲು ವಲಸೆ ಬಂದವರು ತೀರ್ಮಾನಿಸಿದ್ದಾರೆ. ಈ ಸಭೆಯಲ್ಲಿ ಉದ್ಭವವಾಗಿರುವ ಕೆಲವು ಪ್ರಶ್ನೆಗಳ ಬಗ್ಗೆ ಚರ್ಚೆ ನಡೆಯಲಿದೆ ಎನ್ನಲಾಗಿದೆ. ಒಂದ್ವೇಳೆ ಸಿಎಂ ಬದಲಾವಣೆಯಾದ್ರೆ, ತಮ್ಮ ಮುಂದಿನ ನಡೆ ಹೇಗಿರಬೇಕು?ಯಡಿಯೂರಪ್ಪ ಅವ್ರನ್ನೇ ಮುಂದುವರಿಸಿ ಎಂದು ಮನವಿ ಮಾಡ್ಬೇಕಾ? ಬೇಡ್ವಾ? ಇಲ್ಲಾ ಮುಖ್ಯಮಂತ್ರಿ ಯಾರಾದ್ರೂ ಆಗಲಿ, ನಮ್ಮ ಸಚಿವ ಸ್ಥಾನ ಮುಂದುವರಿಸಿ ಎಂದು ಮನವಿ ಮಾಡ್ಬೇಕಾ? ಎಂಬುದನ್ನು ಚರ್ಚೆ ಮಾಡಲಿದ್ದಾರೆ.
ಸದ್ಯದ್ರಲ್ಲೇ ವಲಸೆ ನಾಯಕರ ಸಭೆ?
ಸಿಎಂ ಬದಲಾವಣೆ ಬೆಳವಣಿಗೆ ಹಿನ್ನೆಲೆಯಲ್ಲಿ ವಲಸೆ ನಾಯಕರು ಸಭೆ ಸೇರಲಿದ್ದಾರೆ. ಸಭೆ ಮಾಡಿ ಕೆಲವು ವಿಷಯಗಳನ್ನು ಚರ್ಚೆ ಮಾಡಲು ನಿರ್ಧಾರ ಮಾಡಲಾಗಿದೆಯಾದ್ರೂ, ಸಭೆಯ ದಿನಾಂಕ ಮಾತ್ರ ಇನ್ನೂ ನಿಗದಿ ಆಗಿಲ್ಲ. ಈ ವೇಳೆ ರಮೇಶ್ ಜಾರಕಿಹೊಳಿ ದೂರ ಇಟ್ಟು ಚರ್ಚೆ ಮಾಡ್ತಾರಾ ಅನ್ನೋ ಕುತೂಹಲ ಹುಟ್ಕೊಂಡಿದೆ.
ಯಡಿಯೂರಪ್ಪ ನಾಯಕತ್ವ ಒಪ್ಪಿ ಬಿಜೆಪಿಗೆ ಬಂದಿರೋ ವಲಸಿಗರಿಗೆ ಪೀಕಲಾಟ ಶುರುವಾಗಿದೆ. ಯಡಿಯೂರಪ್ಪ ಕೆಳಗಿಳಿದ ಬಳಿಕ ಕೆಲವರನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ತಾರೆ ಅನ್ನೋ ಸುದ್ದಿನೂ ಇದೆ. ಈ ಕಾರಣಕ್ಕೆ ಮಿತ್ರ ಮಂಡಳಿಯಲ್ಲಿ ಟೆನ್ಷನ್ ಶುರುವಾಗಿದೆ.