ನಟಿ ಮೇಘನಾ ರಾಜ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಆಕ್ಟಿವ್ ಆಗಿರ್ತಾರೆ. ಆಗಾಗ ತಮ್ಮ ಮಗನ ಆಟೋಟಗಳು, ತಮ್ಮ ಮತ್ತು ಪತಿ ಚಿರಂಜೀವಿ ಸರ್ಜಾ ಜೊತೆಯಾಗಿರುವ ಚಿತ್ರಗಳು ಮತ್ತು ವಿಡಿಯೋಗಳನ್ನು ಕೂಡಾ ಶೇರ್ ಮಾಡ್ತಾ ಇರ್ತಾರೆ. ಇತ್ತೀಚೆಗೆ ತಮ್ಮ ಪುಟ್ಟ ಕಂದ ಮತ್ತು ಅವನನ್ನು ಆರೋಗ್ಯವಾಗಿ ಭೂಮಿಗೆ ತರಲು ಸಹಾಯ ಮಾಡಿದ ತಮ್ಮ ಪ್ರಸೂತಿ ತಜ್ಞರನ್ನು ಕೊಂಡಾಡಿದ್ದಾರೆ ಮೇಘನಾ.
ಪುಟಾಣಿ ಚಿರು ಮುದ್ದು ಮುದ್ದಾಗಿ ಬೆಳೆಯುತ್ತಿದ್ದಾನೆ. ಸದ್ಯ ಮೇಘನಾ ಜಗತ್ತು ಮಗುವಿನ ಸುತ್ತಲೇ ಸುತ್ತುತ್ತಿದೆ. ಜ್ಯೂನಿಯರ್ ಚಿರು ಜನಿಸುವಾಗ ಚಿರಂಜೀವಿ ಸರ್ಜಾ ಅಸುನೀಗಿ 5 ತಿಂಗಳಾಗಿತ್ತು. ಹಾಗಾಗಿ ಗರ್ಭಿಣಿ ಮೇಘನಾಗೆ ಅತ್ಯಂತ ಅವಶ್ಯಕವಾಗಿ ದೈಹಿಕ ಮತ್ತು ಮಾನಸಿಕ ಶಕ್ತಿಯ ಅವಶ್ಯಕತೆ ಇತ್ತು.
ಅಂಥಾ ಕ್ಲಿಷ್ಟಕರ ಸಂದರ್ಭದಲ್ಲಿ ಆಕೆಯ ಜೊತೆ ನಿಂತದ್ದು ಆಕೆಯ ಪ್ರಸೂತಿ ತಜ್ಞೆ ಡಾ ಮಾಧುರಿ ಸುಮಂತ್. ಮೇಘನಾ ಪಾಲಿಗೆ ಆಪ್ತ ಗೆಳತಿಯಾಗಿ, ಅಕ್ಕನ ಸ್ಥಾನದಲ್ಲಿ ನಿಂತಿದ್ದು ಈ ವೈದ್ಯೆ. ತನ್ನ ವೈದ್ಯೆಯಾಗಿದ್ದ ಡಾ ಮಾಧುರಿ ಈಗ ಕುಟುಂಬದ ಸದಸ್ಯರಂತಾಗಿದ್ದಾರೆ. ನಿರಂತರವಾಗಿ ತನ್ನ ಕಷ್ಟ ಸುಖಗಳಿಗೆ ಸ್ಪಂದಿಸಿದ್ದಾರೆ. ನನ್ನನ್ನು ಸಂಭಾಳಿಸುವುದಲ್ಲದೇ ಮಗುವಿನ ಆರೋಗ್ಯಕ್ಕೂ ಹೆಚ್ಚಿನ ಒತ್ತು ಕೊಟ್ಟಿದ್ದಾರೆ.
ಈಕೆ ನನ್ನ ಬಾಳಿಗೆ ಬಂದಿದ್ದೇ ಒಂದು ವರ ಎಂದು ಕೊಂಡಾಡಿದ್ದಾರೆ ಮೇಘನಾ ರಾಜ್. ಸರಿಯಾದ ಸಮಯಕ್ಕೆ ಮಗು ಈ ಜಗತ್ತಿಗೆ ಬರೋದಕ್ಕೆ ಆಕೆಯ ಮಾರ್ಗದರ್ಶನ ಬಹಳ ಅಗತ್ಯವಿತ್ತು. ಹೀಗಾಗಿ ಜೀವದ ಗೆಳತಿಯಾಗಿ ಈಕೆ ಬಂದಿದ್ದಾರೆ. ಮಗು ಈಗ ಆರೋಗ್ಯವಾಗಿದ್ದು ಬೋರಲು ಹಾಕಿ ಮಗುಚುತ್ತಿದೆ. ಇದೇ ನನಗೆ ಬಹಳ ಸಂತಸದ ವಿಚಾರ ಎಂದಿದ್ದಾರೆ ಮೇಘನಾ ರಾಜ್.