ಥಿಯೇಟರ್ ಸಂಪೂರ್ಣ ಓಪನ್ ಆಗುತ್ತಿದ್ದಂತೆ ಕನ್ನಡ ಸಿನಿಮಾಗಳು ಒಂದೊಂದಾಗೇ ಬಿಡುಗಡೆ ಸಜ್ಜಾಗುತ್ತಿವೆ. ಚಿತ್ರದ ಪ್ರಚಾರದಿಂದ ಹಿಡಿದು ರಿಲೀಸ್ಗೆ ಬೇಕಾಗಿರೋ ತಯಾರಿಯನ್ನೆಲ್ಲಾ ಮಾಡಿಕೊಳ್ಳುತ್ತಿದೆ. ಅದ್ರಲ್ಲೂ ನಾಡಹಬ್ಬಕ್ಕೆ ಸಿನಿಮಾ ತಯಾರಿ ಭರ್ಜರಿಯಾಗಿದ್ದು, ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನು ಸಿನಿಮಾ ಮುಗಿಲ್ ಪೇಟ್ ಪ್ರಚಾರ ಆರಂಭಿಸಿದೆ.
ಅಕ್ಟೋಬರ್ 7ರಿಂದ ನಾಡ ಹಬ್ಬ ಆರಂಭ ಆಗುತ್ತಿದೆ. ಮನು ರವಿಚಂದ್ರನ್ ತಮ್ಮ ಸಿನಿಮಾ ‘ಮುಗಿಲ್ ಪೇಟೆ’ಯ ವಿಡಿಯೋ ಸಾಂಗ್ವೊಂದನ್ನು ರಿಲೀಸ್ ಮಾಡುತ್ತಿದ್ದಾರೆ. ನಿರ್ದೇಶಕರೆ ಬರೆದಿರುವ ಈ ಹಾಡಿನಲ್ಲಿ ಮನು ಜೊತೆ ರೊಮ್ಯಾಂಟಿಕ್ ಮೂಡ್ನಲ್ಲಿ ಕಾಣಿಸಿಕೊಳ್ತಿದ್ದಾರೆ ಕಯಾದು ಲೋಹರ್.
ಮುಗಿಲ್ ಪೇಟೆಯಲ್ಲಿ ಎಲ್ಲರಿಗಿಂತ ಹೆಚ್ಚು ಸಂಭ್ರಮದಲ್ಲಿರುವುದು ಶ್ರೀಧರ್ ಸಂಭ್ರಮ್. ಮೆಲೋಡಿ ಹಾಗೂ ರೊಮ್ಯಾಂಟಿಕ್ ಹಾಡುಗಳನ್ನು ಶ್ರೀಧರ್ ವಿ ಸಂಭ್ರಮ್ ನೀಡಿದ್ದಾರೆ. ನಕುಲ್ ಈ ಹಾಡಿರೋ ಮೊದಲ ಹಾಡು ನಾಡಹಬ್ಬಕ್ಕೆ ಚಿತ್ರಪ್ರೇಮಿಗಳಿಗೆ ಉಡುಗೊರೆಯಾಗಿ ನೀಡಲಿದ್ದಾರೆ.
ಮುಗಿಲ್ ಪೇಟೆ ಟ್ರೈಲರ್ ಈಗಾಗಲೇ ನಿರೀಕ್ಷೆಗೂ ಮೀರಿ ಮೆಚ್ಚುಗೆ ಗಳಿಸಿದೆ. ರಿಷಿ, ಅವಿನಾಶ್, ತಾರಾ ಅನುರಾಧ, ಸಾಧುಕೋಕಿಲ, ರಂಗಾಯಣ ರಘು ಹೀಗೆ ದಿಗ್ಗಜರೇ ‘ಮುಗಿಲ್ ಪೇಟೆ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಭರತ್ ಎಸ್ ನಾವುಂದ ಮುಗಿಲ್ ಪೇಟ್ ಸಿನಿಮಾ ನಿರ್ದೇಶಿಸಿದ್ದು, ರಕ್ಷಾ ವಿಜಯ್ ಕುಮಾರ್ ಸಿನಿಮಾ ನಿರ್ಮಿಸಿದ್ದಾರೆ. ದೀಪಾವಳಿ ಹಬ್ಬಕ್ಕೆ ಮುಗಿಲ್ ಪೇಟ್ ಥಿಯೇಟರ್ಗಳಿಗೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದೆ.