ನಟಿ ಮೇಘನಾ ರಾಜ್ ಮತ್ತು ಜ್ಯೂನಿಯರ್ ಚಿರುನಾ ಭೇಟಿ ಮಾಡೋಕೆ ಕೇರಳದಿಂದ ಆಪ್ತರೊಬ್ಬರು ಬಂದಿದ್ರು. ಅವರೇ ಮಲಯಾಳಂ ನಟ ಇಂದ್ರಜಿತ್ ಸುಕುಮಾರನ್. ಪಾಪಿನ್ಸ್ ಸೇರಿದಂತೆ ಸುಮಾರು ಮೂರು ಮಲಯಾಳಂ ಚಿತ್ರಗಳಲ್ಲಿ ಮೇಘನಾ ಮತ್ತು ಇಂದ್ರಜಿತ್ ಜೊತೆಯಾಗಿ ನಟಿಸಿದ್ದಾರೆ. ಉತ್ತಮ ಸ್ನೇಹಿತರಾಗಿರುವ ಇವರ ಕುಟುಂಬಗಳೂ ಆಪ್ತವಾಗಿವೆ.
ಅಂದ್ಹಾಗೆ ಇಂದ್ರಜಿತ್, ಖ್ಯಾತ ನಟ ಮತ್ತು ನಿರ್ಮಾಪಕ ಪೃಥ್ವಿರಾಜ್ ಸುಕುಮಾರನ್ ಸಹೋದರ. ಮೇಘನಾ ರಾಜ್ ತನ್ನ ಕರಿಯರ್ ಆರಂಭಿಸಿದ್ದೇ ಮಲಯಾಳಂನಿಂದ. ಹಾಗಾಗಿ ಆಕೆಗೆ ಅಲ್ಲಿನ ಕಲಾವಿದರೂ ಬಹಳ ಆಪ್ತರಿದ್ದಾರೆ. ಮೇಘನಾ ಮಗುವಿಗೆ ಜನ್ಮ ನೀಡಿದಾಗ ಮಲಯಾಳಂನ ಖ್ಯಾತ ತಾರಾ ದಂಪತಿ ಫಾಹದ್ ಫಸಿಲ್ ಮತ್ತು ನಜರಿಯಾ ಆಕೆಯನ್ನು ಭೇಟಿ ಮಾಡೋಕೆ ಆಸ್ಪತ್ರೆಗೇ ಬಂದಿದ್ದರು. ನಜರಿಯಾ ಮತ್ತು ಮೇಘನಾ ಆಪ್ತ ಗೆಳತಿಯರು.


ಫೆಬ್ರವರಿ 22ಕ್ಕೆ ಜ್ಯೂನಿಯರ್ ಚಿರುಗೆ ನಾಲ್ಕು ತಿಂಗಳು ತುಂಬಿದೆ. ಮುದ್ದಾಗಿರುವ ಈ ಕಂದನನ್ನು ನೋಡಲು, ಹಾಗೇ ಮೇಘನಾರನ್ನು ಭೇಟಿ ಮಾಡಲು ಇಂದ್ರಜಿತ್ ಸುಕುಮಾರನ್ ಬೆಂಗಳೂರಿನ ಮೇಘನಾರ ತಾಯಿ ಮನೆಗೆ ಬಂದಿದ್ದರು. ಇದನ್ನು ತಡವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ ಮೇಘನಾ.
ಜ್ಯೂನಿಯರ್ ಚಿರುಗೆ ನಿನ್ನ ಕಂಪೆನಿ ಬಹಳ ಇಷ್ಟವಾಯ್ತು. “ಇಂದ್ರು.. ನಮ್ಮ ಮನೆ ಬಿರಿಯಾನಿ ನಿನಗೂ ಇಷ್ಟವಾಗಿದೆ ಎಂದುಕೊಂಡಿದ್ದೇನೆ.. ಆದಷ್ಟು ಬೇಗ ಪೂರ್ಣಿಮಾರನ್ನು ಭೇಟಿಯಾಗ್ಬೇಕು” ಎಂದು ಪೋಸ್ಟ್ ಮಾಡಿದ್ದಾರೆ ಮೇಘನಾ. ಪೂರ್ಣಿಮಾ ಇಂದ್ರಜಿತ್ ಸುಕುಮಾರನ್ ಪತ್ನಿ. ಮೇಘನಾ ಮತ್ತು ಮಗುವನ್ನು ನೋಡಲು, ಅವರೊಂದಿಗೆ ಸಮಯ ಕಳೆಯಲು ಅಷ್ಟು ದೂರದಿಂದ ಮಲಯಾಳಂ ತಾರೆಯರು ಸಮಯ ಮಾಡಿಕೊಂಡು ಬರುವುದು ನಿಜಕ್ಕೂ ಮೆಚ್ಚುಗೆಯ ವಿಚ