ಏಪ್ರಿಲ್ 26 ಮಾಲಾಶ್ರೀ ಕುಟುಂಬ ದು:ಖದಲ್ಲಿ ಮುಳುಗಿ ಹೋಗಿತ್ತು. ಕೊರೊನಾದಿಂದ ರಾಮು ಚೇತರಿಸಿಕೊಳ್ಳುತ್ತಾರೆ. ಅವರಿಗೆ ಏನೂ ಆಗೋದಿಲ್ಲ ಅನ್ನೋ ಧೈರ್ಯದಲ್ಲೇ ಇದ್ದ ಮಾಲಾಶ್ರೀಗೆ ಪತಿಯ ಸಾವು ಬರ ಸಿಡಿಲಿನಂತೆ ಬಂದೊದಗಿತ್ತು. ರಾಮು ಇಲ್ಲದ ಜೀವನವನ್ನು ಊಹಿಸಿಕೊಳ್ಳಲು ಸಾಧ್ಯವೇ ಇಲ್ಲವೆಂದು ಭಾವುಕ ಪತ್ರವೊಂದನ್ನ ಬರೆದಿದ್ದಾರೆ.
ರಾಮು ಕೊರೊನಾದಿಂದ ಮೃತಪಟ್ಟ 12 ದಿನಗಳ ಬಳಿಕ ನಟಿ ಮಾಲಾಶ್ರೀ ಭಾವುಕ ಪತ್ರವೊಂದನ್ನ ಶೇರ್ ಮಾಡಿದ್ದಾರೆ. ಇಂತಹ ಕಷ್ಟದ ವೇಳೆ ಧೈರ್ಯ ತುಂಬಿ ಬೆಂಬಲ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ. ತಮಗೆ ಬೆನ್ನೆಲುಬಾಗಿ ನಿಂತವ್ರಿಗಾಗಿ ಪತ್ರವೊಂದನ್ನ ಬರೆದಿದ್ದಾರೆ.
‘ಕಳೆದ 12 ದಿನಗಳಿಂದ ನನಗೆ ಹಾಗೂ ನನ್ನ ಕುಟುಂಬಕ್ಕೆ ತುಂಬಾ ನೋವಿನಿಂದ ಕೂಡಿದೆ. ನನಗೆ ಮುಂದಿನ ದಾರಿಯೇ ಕಾಣುತ್ತಿಲ್ಲ. ರಾಮು ಅವರ ಅಗಲಿಕೆಯಿಂದ ನನ್ನ ಹೃದಯ ಛಿದ್ರ ಛಿದ್ರವಾಗಿದೆ. ರಾಮು ಯಾವಾಗಲೂ ನಮಗೆ ಬೆನ್ನೆಲುಬಾಗಿ ನಿಂತಿರುತಿದ್ರು. ನಮಗೆ ಸದಾ ಸಲಹೆಗಳನ್ನು ನೀಡುತ್ತಿದ್ರು.’ ಎಂದು ಪತ್ರದಲ್ಲಿ ಬರೆದಿದ್ದಾರೆ.
‘ಇಂತಹ ಸಂಕಷ್ಟ ಕಾಲದಲ್ಲಿ ಇಡೀ ಚಿತ್ರರಂಗ ಪ್ರೀತಿ ತೋರಿದೆ. ಬೆಂಬಲ ಕೊಟ್ಟಿದೆ. ಇದಕ್ಕೆ ನಾವು ಎಂದಿಗೂ ಚಿರಋಣಿ. ಈ ಸಮಯದಲ್ಲಿ ಪ್ರೀತಿ, ಬೆಂಬಲ ತೋರಿದ ಸಿನಿಮಾದ ಪ್ರತಿಯೊಬ್ಬರಿಗೂ, ಮಾಧ್ಯಮವರಿಗೂ, ಕಲಾವಿದರು, ನಿರ್ಮಾಪಕರು, ತಂತ್ರಜ್ಞರು, ರಾಮು ಅಭಿಮಾನಿಗಳು, ಸ್ನೇಹಿತರು ಮತ್ತು ಹಿತೈಶಿಗಳಿಗೆ ಧನ್ಯವಾದಗಳು. ಇಂಥ ಪರಿಸ್ಥಿತಿಯಲ್ಲಿ ಮನೆಯಲ್ಲೇ ಇರಿ ಸುರಕ್ಷಿತರಾಗಿರಿ. ನಿಮ್ಮ ಪ್ರೀತಿ ಪಾತ್ರರನ್ನು ಚೆನ್ನಾಗಿ ನೋಡಿಕೊಳ್ಳಿ’ ಎಂದು ಮನವಿ ಮಾಡಿಕೊಂಡಿದ್ದಾರೆ.
ಮಾಲಾಶ್ರೀ ಬರೆದ ಈ ಭಾವುಕ ಪತ್ರಕ್ಕೆ ನೋಡಿದ ಬಳಿಕ ಮಾಲಾಶ್ರೀಗೆ ಚಿತ್ರರಂಗದ ಅನೇಕ ಗಣ್ಯರು ಸಾಂತ್ವನ ಹೇಳಿದ್ದಾರೆ. ನಿರ್ಮಾಪಕ ಕೋಟಿ ರಾಮು ಕೊರೊನಾ ಪಾಸಿಟಿವ್ ಬಂದಿದ್ರಿಂದ ಬೆಂಗಳೂರಿನ ಎಂ ಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ರು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಏಪ್ರಿಲ್ 26ರ ಸಂಜೆ ರಾಮು ಕೊನೆಯುಸಿರೆಳೆದಿದ್ರು.