ಬಾಲಿವುಡ್ನ ಎವರ್ಗ್ರಿನ್ ಬ್ಯೂಟಿ ಮಲೈಕಾ ಅರೋರಾ. ವಯಸ್ಸು 47 ಆದರೂ ಬ್ಯೂಟಿ ಒಂದಿಷ್ಟೂ ಕಮ್ಮಿಯಾಗಿಲ್ಲ. ಸೌಂದರ್ಯವನ್ನು ಕಾಪಾಡಿಕೊಳ್ಳುವಲ್ಲಿ ಈಕೆ ಹಲವು ನಟಿಯರಿಗೆ ಮಾದರಿ. ಮಲೈಕಾ ಸದಾ ತಾನು ಧರಿಸೋ ಬಟ್ಟೆಗಳಿಂದಲೋ, ಬೋಲ್ಡ್ ಲುಕ್ನಿಂದಲೋ ಸದಾ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ತನಗಿಂತ 11ವರ್ಷ ಕಿರಿಯನೊಂದಿಗೆ ಡೇಟಿಂಗ್ ನಡೆಸ್ತಿರೋ ಈ ಬಾಲಿವುಡ್ ನಟಿ ಫುಲ್ ಬಿಂದಾಸ್. ಮಲೈಕಾ ವೇದಿಕೆ ಮೇಲೆ ತಾನು ಹಣ ಮಾಡೋಕೆ ಚಿಕ್ಕವಯಸ್ಸಿನಲ್ಲಿ ಏನು ಮಾಡಿದೆ ಅನ್ನೋ ಗುಟ್ಟನ್ನು ಹೊರಹಾಕಿದ್ದಾರೆ.
ಮಲೈಕಾ ಅರೋರಾ ‘ಎಂಟಿವಿ ಸೂಪರ್ ಮಾಡಲ್ ಆಫ್ ದಿ ಇಯರ್’ ಅನ್ನುವ ರಿಯಾಲಿಟಿ ಶೋಗೆ ತೀರ್ಪುಗಾರರಾಗಿದ್ದಾರೆ. ಸಂದರ್ಶನದ ವೇಳೆ ತಾನು ಮಾಡಲಿಂಗ್ ಪ್ರಪಂಚಕ್ಕೆ ಕನಸುಗಳನ್ನು ಹೊತ್ತು ಬರಲಿಲ್ಲ. ಮಾಡಲಿಂಗ್ ಮಾಡೋದು ನನಗೆ ತುಂಬಾನೇ ಕಷ್ಟವಾಗುತ್ತಿತ್ತು. ಆದರೆ, ಪಾಕೆಟ್ ಮನಿಗಾಗಿ ಚಿಕ್ಕ ವಯಸ್ಸಿನಲ್ಲೇ ಮಾಡಲಿಂಗ್ ಪ್ರಪಂಚಕ್ಕೆ ಕಾಲಿಟ್ಟೆ. ಕೊನೆಗೆ ಅದೇ ನನಗೆ ಆಸರೆಯಾಗಿದೆ ಎಂದು ಮಲೈಕಾ ಅರೋರಾ ಹೇಳಿದ್ದಾರೆ.
90ರ ದಶಕದಲ್ಲಿ ಮಲೈಕಾ ಅರೋರಾ ಮಾಡಲಿಂಗ್ ಪ್ರಪಂಚಕ್ಕೆ ಕಾಲಿಟ್ಟಿದ್ದರು. ಅಲ್ಲಿಂದ ಮತ್ತೆಂದು ಹಿಂತಿರುಗಿ ನೋಡಲೇ ಇಲ್ಲ. ಮಾಡಲಿಂಗ್ನಲ್ಲಿ ಹೆಸರು ಮಾಡುತ್ತಿದ್ದಂತೆ ಸಿನಿಮಾಗಳ ಕಡೆ ಮುಖ ಮಾಡಿದ್ದರು. ಹಾಡುಗಳಿಗೆ ಹೆಜ್ಜೆ ಹಾಕಿದ್ರು, ಐಟಂ ಸಾಂಗ್ಗಳಲ್ಲಿ ಮಿಂಚಿದರು. ಈಗ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.