‘ಬಂಗಾರದ ಮನುಷ್ಯ’ .. ಡಾ ರಾಜ್ಕುಮಾರ್ ಅಭಿನಯದ ಈ ಚಿತ್ರ ಕೇವಲ ಒಂದು ಸಿನಿಮಾ ಅಲ್ಲ, ಅದೊಂದು ಕ್ರಾಂತಿಯೇ ಆಗಿಬಿಟ್ಟಿತ್ತು. ಯುವಜನರಲ್ಲಿ ಕೃಷಿಯ ಕ್ರಾಂತಿಯ ಕಿಚ್ಚು ಹಚ್ಚಿಸಿದ ಅದ್ಭುತ ಚಿತ್ರ ಅದು. 49 ವರ್ಷಗಳ ಹಿಂದೆ ಹಳ್ಳಿಗಳನ್ನು ತೊರೆದು ಪಟ್ಟಣ ಸೇರಿ ಕೆಲಸಕ್ಕಾಗಿ ಅಲೆದಾಡೋ ಅದೆಷ್ಟೋ ಯುವಕರು ಈ ಸಿನಿಮಾ ನೋಡಿ ಹಳ್ಳಿಗಳಿಗೆ ಮರಳಿದ್ರು. ಅಷ್ಟರಮಟ್ಟಿಗೆ ಜನರ ಮೇಲೆ ಅಣ್ಣಾವ್ರ ಸಿನಿಮಾ ಪ್ರಭಾವ ಬೀರಿತ್ತು. ಮತ್ತೆ ಹೊಲಗಳಲ್ಲಿ ಪೈರು ಮೂಡೋಕೆ ಕಾರಣವಾದ ಆ ಸಿನಿಮಾ ತಯಾರಿಯ ಹಿಂದೆ ಸಾಕಷ್ಟು ರೋಚಕ ಕಥೆಗಳಿವೆ. ಅವೆಲ್ಲವನ್ನೂ ಒಂದು ಪುಸ್ತಕದ ರೂಪದಲ್ಲಿ ಹೊರತಂದಿದ್ದಾರೆ ಪತ್ರಕರ್ತ ಮಹೇಶ್ ದೇವಶೆಟ್ಟಿ. ಡಾ ರಾಜ್ ಹುಟ್ಟುಹಬ್ಬದ ದಿನೇ ಈ ಪುಸ್ತಕ ಲೋಕಾರ್ಪಣೆಯಾಗಿದ್ದು ವಿಶೇಷ.
ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್ ಆರ್ ರಂಗನಾಥ್ ಬಿಡುಗಡೆ ಮಾಡಿದ ಈ ಪುಸ್ತಕಕ್ಕೆ ಸಂಚುರಿ ಸ್ಟಾರ್ ಶಿವರಾಜ್ಕುಮಾರ್ ಬೆನ್ನುಡಿ ಬರೆದಿದ್ದಾರೆ. ಮೇಕಿಂಗ್ ಆಫ್ ಬಂಗಾರದ ಮನುಷ್ಯ ಎನ್ನುವ ಈ ಪುಸ್ತಕದಲ್ಲಿ ಸಾಕಷ್ಟು ರೋಚಕ ಹಾಗೂ ವಿಶಿಷ್ಟ ಮಾಹಿತಿಗಳು ಇವೆಯಂತೆ. ಸತತವಾಗಿ ಎರಡು ವರ್ಷಗಳ ಕಾಲ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡ ಈ ಚಿತ್ರ ಇಂದಿಗೂ ಅನೇಕ ವಿಚಾರಗಳಲ್ಲಿ ದಾಖಲೆಗಳ ಪಟ್ಟಿ ಹೊಂದಿದೆ.
ಮೇಕಿಂಗ್ ಆಫ್ ಬಂಗಾರದ ಮನುಷ್ಯ ಪುಸ್ತಕ ಪಬ್ಲಿಕ್ ಟಿವಿ ಕಚೇರಿಯಲ್ಲಿ ಬಿಡುಗಡೆಯಾದ ಈ ಕೃತಿಯ ಬಗ್ಗೆ ಶಿವಣ್ಣ ಬಹಳ ಮೆಚ್ಚುಗೆ ಪಡೆದರು. ಚಿತ್ರದ ಹಿಂದೆ ಅದೆಷ್ಟು ಅದ್ಭುತ ಸನ್ನಿವೇಶಗಳು, ಕಥಾನಕಗಳು ಇವೆ. ಅದು ಆಪ್ತರಾದ ಕೆಲವರಿಗೆ ಮಾತ್ರವೇ ತಿಳಿದಿತ್ತು. ಈಗ ಅದನ್ನು ಜಗತ್ತೇ ತಿಳಿಯುವಂಥಾ ಅವಕಾಶವನ್ನು ಈ ಪುಸ್ತಕ ನೀಡುತ್ತಿದೆ. ಇಷ್ಟೊಂದು ವಿವರಗಳನ್ನು ಕಲೆಹಾಕಿ ರೋಚಕವಾಗಿ ನಿರೂಪಣೆ ಮಾಡಿರುವ ಈ ಪುಸ್ತಕ ಅಪ್ಪಾಜಿ ಅಭಿಮಾನಿಗಳಿಗಂತೂ ದೊಡ್ಡ ಸಡಗರ ತರುತ್ತದೆ ಎಂದರು.