ಟಾಲಿವುಡ್ ಸೂಪರ್ಸ್ಟಾರ್ ಮಹೇಶ್ ಬಾಬು ಕೇಶ ವಿನ್ಯಾಸಗಾರರನಿಗೆ ಕೊರೊನಾ ಸೋಂಕು ತಗುಲಿರೋದು ಧೃಡಪಟ್ಟಿದೆ. ಹೀಗಾಗಿ ಮಹೇಶ್ ಬಾಬು ಸ್ವಯಂ ಪ್ರೇರಿತರಾಗಿ ಗೃಹಬಂಧನಕ್ಕೆ ಒಳಗಾಗಿದ್ದಾರೆ ಎಂದು ತೆಲುಗು ಚಿತ್ರರಂಗದ ಮೂಲಗಳು ತಿಳಿಸಿವೆ.
ಮಹೇಶ್ ಬಾಬು ಸರ್ಕಾರು ವಾರಿ ಪಾಟ ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ತಮ್ಮ ಹೇರ್ಸ್ಟೈಲಿಸ್ಟ್ ಜೊತೆ ಸಂಪರ್ಕದಲ್ಲಿ ಇದ್ದಿದ್ದರಿಂದ ಸೆಲ್ಫ್ ಐಸೋಲೆಷನ್ಗೆ ಒಳಗಾಗಲು ತೀರ್ಮಾನಿಸಿದ್ದಾರೆ. ಅಲ್ಲದೆ, ಮಹೇಶ್ ಬಾಬು ಅಷ್ಟೇ ಅಲ್ಲ, ಪತ್ನಿ ನಮೃತಾ ಶಿರೋಡ್ಕರ್, ಪುತ್ರಿ ಸಿತಾರಾ, ಗೌತಮ್ ಸೇರಿದಂತೆ ಅವರ ಇಡೀ ಕುಟುಂಬವೇ ಗೃಹಬಂಧನದಲ್ಲಿರೋಕೆ ತೀರ್ಮಾನಿಸಿದೆ.
ಇನ್ನು ಮಹೇಶ್ ಹೇರ್ಸ್ಟೈಲಿಸ್ಟ್ ಕೊರೊನಾ ಪಾಸಿಟಿವ್ ಬಂದಿರೋದು ಧೃಡಪಡುತ್ತಿದ್ದಂತೆ ಪ್ರಿನ್ಸ್ ಫ್ಯಾನ್ಸ್ ಆತಂಕಕ್ಕೆ ಒಳಗಾಗಿದ್ದಾರೆ. ಹೀಗಾಗಿ ಟ್ವಿಟ್ಟರ್ನಲ್ಲಿ #StaySafeMaheshAnna ಅಂತ ಟ್ರೆಂಡ್ ಮಾಡುತ್ತಿದ್ದಾರೆ. 14 ದಿನ ಸೆಲ್ಫ್ ಐಸೋಲೇಷನ್ ಮುಗಿಸಿದ ಬಳಿಕ ಮಹೇಶ್ ಬಾಬು ಮತ್ತೆ ಸರ್ಕಾರು ವಾರಿ ಪಾಟ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗುವ ಸಾಧ್ಯತೆಯಿದೆ.