ವರ್ಷದ ಅತಿ ದೊಡ್ಡ ಬ್ಲಾಕ್ ಬಸ್ಟರ್ ಸಿನಿಮಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’. ಇದಕ್ಕೂ ಮುನ್ನ ಬಂದ ‘ಪೊಗರು’ ಸಿನಿಮಾ ಒಳ್ಳೆಯ ಓಪನಿಂಗ್ ಪಡೆದುಕೊಳ್ತು. 3 ವರ್ಷಗಳಿಂದ ಸೌಂಡ್ ಮಾಡ್ತಾ ಬಂದಿದ್ದ ಪೊಗರು ಬಾಕ್ಸಾಫೀಸ್ನಲ್ಲೂ ಸದ್ದು ಮಾಡಿತ್ತು. ಆದ್ರೂ ವಿವಾದಗಳಿಗೆ ಸಿಲುಕಿ ನಿರೀಕ್ಷೆ ಮಟ್ಟಕ್ಕೆ ಮುಟ್ಟಿರಲಿಲ್ಲ. ಆದರೆ ಈಗ ಪೊಗರು ಶಿವ, ರಾಬರ್ಟ್ ದರ್ಶನ್ ರೀತಿ ಸೌಂಡ್ ಮಾಡುವ ಮಾಹಿತಿ ಸಿಕ್ಕಿದೆ.
ರಾಬರ್ಟ್ ಚಿತ್ರದ ಎಲ್ಲಾ ಡೈಲಾಗ್ ಗಳು ಸೂಪರ್ ಹಿಟ್ ಆಗಿತ್ತು. ರಾಬರ್ಟ್, ರಾಘವ ಹೀಗೆ ಎರಡು ಶೇಡ್ ಗಳಲ್ಲಿ ದರ್ಶನ್ ಹೇಳಿದ ಡೈಲಾಗ್ಸ್, ರಾಘವ ವಿನೋದ್ ಪ್ರಭಾಕರ್ ಡೈಲಾಗ್ಸ್, ನಾನಾ ಜಗಪತಿ ಬಾಬು ಡೈಲಾಗ್ಸ್ ಹೀಗೆ ಎಲ್ಲವೂ ಅಭಿಮಾನಿಗಳಿಂದ ಶಿಳ್ಳೆ ಚಪ್ಪಾಳೆ ಗಿಟ್ಟಿಸಿಕೊಂಡಿತ್ತು. ಇತ್ತೀಚಿಗೆ ಆನಂದ್ ಆಡಿಯೋ ಸಂಸ್ಥೆ ಯೂಟ್ಯೂಬ್ನಲ್ಲಿ ಎರಡು ಭಾಗಗಳಾಗಿ ರಾಬರ್ಟ್ ಚಿತ್ರದ ಆಡಿಯೋ ಡೈಲಾಗ್ಸ್ jukebox ರಿಲೀಸ್ ಮಾಡಿದ್ದರು. ಅದಕ್ಕೆ ಒಳ್ಳೆಯ ರೆಸ್ಪಾನ್ಸ್ ಕೂಡ ಸಿಕ್ಕಿತ್ತು. ಇದೀಗ ಪೊಗರು ಡೈಲಾಗ್ಸ್ ಕೂಡ ಆಡಿಯೋ ರೂಪದಲ್ಲಿ ಬರ್ತಿದೆ.
ನಂದ ಕಿಶೋರ್ ನಿರ್ದೇಶನದ ಪೊಗರು ಚಿತ್ರದಲ್ಲೂ ಭರ್ಜರಿ ಡೈಲಾಗ್ಗಳಿವೆ. ಪೊಗರು ಶಿವನ ಉದ್ದುದ್ದ ಡೈಲಾಗ್ಸ್ ಕೇಳಿ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ರು. ಅದರಲ್ಲೂ ಗೀತಾ ಟೀಚರ್ ರಶ್ಮಿಕಾ ಮಂದಣ್ಣ ಮತ್ತು ಪೊಗರು ಶಿವನ ನಡುವಿನ ಡೈಲಾಗ್ಸ್ ಬೇಜಾನ್ ಸದ್ದು ಮಾಡಿತ್ತು. ಇದೀಗ ಪೊಗರು ಡೈಲಾಗ್ಸ್ ಆಡಿಯೋ jukebox ಹೊರ ತರ್ತಿದೆ ಆನಂದ್ ಆಡಿಯೋ ಸಂಸ್ಥೆ. ಶನಿವಾರ ಪೊಗರು ಡೈಲಾಗ್ಸ್ ಮತ್ತೊಮ್ಮೆ ಕೇಳಿ ಎಂಜಾಯ್ ಮಾಡಬಹುದು.