ಸುಮಾರು ₹400 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗ್ತಿರೋ ಸಿನಿಮಾ ಆದಿಪುರುಷ್. ಪ್ರಭಾಸ್ ಈ ಸಿನಿಮಾದಲ್ಲಿ ಶ್ರೀರಾಮನಾಗಿ ಕಾಣಿಸಿಕೊಳ್ಳಲಿದ್ದಾರೆ. ಸೈಫ್ ಅಲಿಖಾನ್ ಲಂಕೇಶನಾಗಿ ತೆರೆಮೇಲೆ ಮಿಂಚಲಿದ್ದಾರೆ. ಬಹುತೇಕ ಸೆಟ್ಟಿನಲ್ಲೇ ನಡೆಯೋ ಈ ಸಿನಿಮಾದ ಎರಡು ಪಾತ್ರಗಳು ಸಾಕಷ್ಟು ಗೊಂದಲಗಳನ್ನ ಸೃಷ್ಟಿಸಿತ್ತು. ಕೊನೆಗೂ ಆ ಎಲ್ಲಾ ಗೊಂದಲಗಳಿಗೀಗ ತೆರೆಬಿದ್ದಿದೆ.
ಆದಿಪುರುಷ್ ಚಿತ್ರದಲ್ಲಿ ಸೀತೆ ಪಾತ್ರ ಮಾಡೋಱರು ಅನ್ನೋದೇ ಒಂದು ಗೊಂದಲವಾಗಿತ್ತು. ಮೊದಲು ಸೀತೆ ಪಾತ್ರದಲ್ಲಿ ಕೃತಿ ಸನನ್ ನಟಿಸ್ತಾರೆ ಎನ್ನಲಾಗಿದ್ದರೂ, ಬಳಿಕ ಕೀರ್ತಿ ಸುರೇಶ್ ಹೆಸರು ಹರಿದಾಡಿತ್ತು. ಆದ್ರೀಗ ಸ್ವತ: ನಿರ್ದೇಶಕ ಓಂ ರಾವತ್ ಸೀತೆಯನ್ನ ಕೃತಿ ಸನನ್ ಎಂದು ಅನೌನ್ಸ್ ಮಾಡಿದ್ದಾರೆ.
ಓಂ ರಾವತ್ ತನ್ನ ಟ್ವಿಟರ್ ಖಾತೆಯಲ್ಲಿ ಎರಡು ಫೋಟೋಗಳನ್ನ ಇನ್ಸ್ ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದಾರೆ. ಪ್ರಭಾಸ್ ಜೊತೆ ಕೃತಿ ಹಾಗೂ ಸನ್ನಿ ಇರುವ ಫೋಟೋ ಒಂದಾದ್ರೆ, ಇನ್ನೊಂದ್ರಲ್ಲಿ ಓಂ ರಾವತ್ ಸನ್ನಿ ಹಾಗೂ ಕೃತಿ ಸನನ್ ಇದ್ದಾರೆ. ಈ ಎರಡೂ ಫೋಟೋಗಳು ಈಗ ಎಲ್ಲೆ ವೈರಲ್ ಆಗುತ್ತಿದೆ.
ಸೀತೆಯ ಪಾತ್ರದಲ್ಲಿ ಕೃತಿ ಸನನ್ ಕಾಣಿಸಿಕೊಂಡ್ರೆ, ಲಕ್ಷ್ಮಣನ ಪಾತ್ರಕ್ಕೆ ವಿಕ್ಕಿ ಕೌಶಾಲ್ ಹೆಸರು ಕೇಳಿ ಬಂದಿತ್ತು. ಆದ್ರೀಗ ಬಾಲಿವುಡ್ ನಟ ಸನ್ನಿಯನ್ನ ಲಕ್ಷ್ಮಣನ ಪಾತ್ರ ಆಯ್ಕೆ ಮಾಡಿದ್ದನ್ನ ಸ್ವತ: ಓಂ ರಾವತ್ ರಿವೀಲ್ ಮಾಡಿದ್ದಾರೆ. ಕೊನೆಗೂ ಆದಿಪುರುಷ್ ಸೆಟ್ಟಿಗೆ ಸೀತೆ ಬಂದಿದ್ದಾಗಿದೆ. ಸಿನಿಮಾದ ಶೂಟಿಂಗ್ ಇನ್ನೂ ವೇಗವಾಗಿ ಸಾಗಲಿದೆ.