ಹಾಲಿವುಡ್ನಲ್ಲಿ ಸಾಕಷ್ಟು ಸೂಪರ್ ಹೀರೋ ಸಿನಿಮಾಗಳು ಬರ್ತಿರ್ತಾವೆ. ಬಾಲಿವುಡ್ನಲ್ಲಿ ಆಗೊಂದು ಹೀಗೊಂದು ಇಂತಹ ಪ್ರಯತ್ನ ನಡೀತಿರತ್ತೆ. ‘ಕ್ರಿಶ್’ ಆ ಹಾದಿಯಲ್ಲಿ ಅದ್ಭುತ ಪ್ರಯತ್ನ. ಈಗಾಗಲೇ ಕ್ರಿಶ್ ಸರಣಿಯ 3 ಸಿನಿಮಾಗಳು ಬಂದು ಸೂಪರ್ ಹಿಟ್ ಆಗಿದೆ. ಈಗ ಹೊಸ ಸೀಕ್ವೆಲ್ ಬಗ್ಗೆ ಹೃತಿಕ್ ರೋಷನ್ ಮಾಹಿತಿ ಕೊಟ್ಟಿದ್ದಾರೆ. ಕ್ರಿಶ್-4 ಬರುತ್ತೆ ಅನ್ನೋ ಮಾತುಗಳು ಹಲವು ವರ್ಷಗಳಿಂದ ಕೇಳಿ ಬರ್ತಿದೆ. ಆದರೆ ಅಧಿಕೃತವಾಗಿರಲಿಲ್ಲ. ಕ್ರಿಶ್ ಸರಣಿಯ ಮೊದಲ ಸಿನಿಮಾ 15 ವರ್ಷ ಪೂರೈಸಿದ್ದು, ಇದೇ ಸಂಭ್ರಮದಲ್ಲಿ ಹೃತಿಕ್ ರೋಷನ್ ಕ್ರಿಶ್-4 ಘೋಷಿಸಿದ್ದಾರೆ.
ಹೃತಿಕ್ ರೋಷನ್ ತಂದೆ ರಾಕೇಶ್ ರೋಷನ್ ಸೀಕ್ವೆಲ್ಗೂ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಈ ಬಾರಿ ಕೃಷ್ಣ ಮೆಹ್ರಾ ಎದುರು ಖಳನಾಯಕನಾಗಿ ಯಾರು ನಟಿಸ್ತಾರೆ ಅನ್ನೋ ಕುತೂಹಲ ಅಭಿಮಾನಿಗಳನ್ನ ಕಾಡುತ್ತಿದೆ. 13 ಸೆಕೆಂಡುಗಳ ಸಣ್ಣ ಟೀಸರ್ ಝಲಕ್ ರಿಲೀಸ್ ಮಾಡಿ ಕ್ರಿಶ್-4 ಸಿನಿಮಾ ಬಂದೇ ಬರುತ್ತೆ ಅನ್ನೋದನ್ನ ಹೃತಿಕ್ ಹೇಳಿದ್ದಾರೆ. ಆದರೆ ಯಾವಾಗ ಈ ಸೂಪರ್ ಹೀರೋ ಸಿನಿಮಾ ಸೆಟ್ಟೇರುತ್ತೆ ಅನ್ನೋದರ ಬಗ್ಗೆ ಮಾಹಿತಿಯಿಲ್ಲ. ‘ವಾರ್’ ನಂತರ ಹೃತಿಕ್ ಯಾವ ಚಿತ್ರದಲ್ಲಿ ನಟಿಸ್ತಾರೆ ಅನ್ನೋದು ಗೊತ್ತಿಲ್ಲ. ಕೊರೋನಾ ಆರ್ಭಟ ಲಾಕ್ಡೌನ್ ಇಲ್ಲದೇ ಇದ್ದಿದ್ದರೆ ಇಷ್ಟೊತ್ತಿಗೆ ಹೃತಿಕ್ ಹೊಸ ಸಿನಿಮಾ ಬರಬೇಕಿತ್ತು.
ಹೃತಿಕ್ ರೋಷನ್ ಕ್ರಿಶ್-4 ಸಿನಿಮಾ ಘೋಷಿಸಿದ್ರು, ಸಿನಿಮಾ ಯಾವಾಗ ಸೆಟ್ಟೇರುತ್ತೆ, ಯಾವಾಗ ರಿಲೀಸ್ ಆಗುತ್ತೆ ಅನ್ನೋದನ್ನ ಖಚಿತ ಪಡಿಸಿಲ್ಲ. ಬಾಲಿವುಡ್ ಗ್ರೀಕ್ ಗಾಡ್ ಮುಂದಿನ ಸಿನಿಮಾ ಇದೇ ಆಗಿರುತ್ತಾ ಅನ್ನೋದು ಗೊತ್ತಿಲ್ಲ. ಒಟ್ನಲ್ಲಿ ಕ್ರಿಶ್ ಫ್ರಾಂಚೆಸಿ ಸಿನಿಮಾ ಬರುತ್ತೆ ಅನ್ನೋದನ್ನ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಟೆಕ್ನಾಲಜಿ ಬದಲಾದಂತೆ ಕ್ರಿಶ್ ಸರಣಿ ಸಿನಿಮಾಗಳನ್ನ ಬಹಳ ರೋಚಕವಾಗಿ ಕಟ್ಟಿಕೊಡುವ ಪ್ರಯತ್ನ ಮಾಡ್ತಾ ಬರಲಾಗಿದೆ. ಇವತ್ತಿನ ಟೆಕ್ನಾಲಜಿ ಬಳಸಿ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಕ್ರಿಶ್-4 ದೊಡ್ಡಮಟ್ಟದಲ್ಲೇ ಸದ್ದು ಮಾಡುವ ಸುಳಿವು ಸಿಕ್ತಿದೆ.