ಕಿಚ್ಚ ಸುದೀಪ್ ಅಭಿನಯಿಸುತ್ತಿರೋ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ ವಿಕ್ರಾಂತ್ ರೋಣಾ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಹೀಗಾಗಿ ಕಿಚ್ಚನ ಅಭಿಮಾನಿಗಳು ವಿಕ್ರಾಂತ್ ರೋಣಾನನ್ನ ತೆರೆಮೇಲೆ ನೋಡೋಕೆ ಕಾತುರರಾಗಿದ್ದಾರೆ. ಆದ್ರೆ, ಬಿಡುಗಡೆಗಿಂತ್ಲೂ ಖುಷಿಪಡೋ ಸುದ್ದಿಯೊಂದಿದೆ.
ಅನೂಪ್ ಭಂಡಾರಿ ನಿರ್ದೇಶಿಸ್ತಿರೋ ವಿಕ್ರಾಂತ್ ರೋಣಾ, ಸುಮಾರಿ 14 ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆಯಂತೆ. ಇಷ್ಟೇ ಅಲ್ಲ, ಸುಮಾರು 55 ದೇಶಗಳಲ್ಲಿ ಏಕಕಾಲಕ್ಕೆ ಇಡೀ ಸಿನಿಮಾ ರಿಲೀಸ್ ಆಗ್ತಿದೆ. ಕನ್ನಡದ ಯಾವುದೇ ಸಿನಿಮಾ ಇಷ್ಟೊಂದು ದೊಡ್ಡ ಮಟ್ಟದಲ್ಲಿ ರಿಲೀಸ್ ಆಗಿಲ್ಲ. ಹೀಗಾಗಿ ಕಿಚ್ಚನ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ವಿಕ್ರಾಂತ್ ರೋಣಾ ರಿಲೀಸ್ ಡೇಟ್ ಘೋಷಣೆಯಾಗಿದ್ದಕ್ಕೆ ಖುಷಿಯಾಗಿದ್ದೇನೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ವೇಗವಾಗಿ ನಡೆಯುತ್ತಿದೆ. ಅತ್ಯುತ್ತಮ ತಂತ್ರಜ್ಞರು ಈ ಸಿನಿಮಾಗಾಗಿ ಕೆಲಸ ಮಾಡುತ್ತಿದ್ದಾರೆ. ಅತೀ ಶೀಘ್ರದಲ್ಲಿ ವಿಕ್ರಾಂತ್ ರೋಣಾ ಸಿನಿಮಾದ ತುಣುಕುಗಳನ್ನ ನಿಮ್ಮ ಮುಂದಿಡುತ್ತೇವೆ ಎಂದು ನಿರ್ದೇಶಕ ಅನೂಪ್ ಭಂಡಾರಿ ಹೇಳಿದ್ದಾರೆ.
ಇನ್ನೊಂದು ಖುಷಿ ವಿಷಯ ಏನಂದ್ರೆ, ವಿಕ್ರಾಂತ್ ರೋಣಾ 3 ಡಿಯಲ್ಲಿ ಬಿಡುಗಡೆ ಮಾಡೋಕೆ ಸಿದ್ಧತೆ ನಡೆದಿದೆ. ಆದ್ರೆ, ಈ ಬಗ್ಗೆ ಕಿಚ್ಚ ಸುದೀಪ್ ಆಗ್ಲಿ, ಚಿತ್ರತಂಡವಾಗಲಿ ಅಧಿಕೃತ ಮಾಹಿತಿಯನ್ನ ಹೊರ ಹಾಕಿಲ್ಲ. ಕಿಚ್ಚ ಸುದೀಪ್ ಜೊತೆ ನಿರೂಪ್ ಭಂಡಾರಿ, ನೀತಾ ಅಶೋಕ್ ಕೂಡ ನಟಿಸಿದ್ದಾರೆ.