ಒಂದೆರಡು ದಿನಗಳಿಂದ ಸುದೀಪ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಅನ್ನೋ ಮಾತು ಕೇಳಿ ಬಂದಿತ್ತು. ಈಗ ಸ್ವತ: ಕಿಚ್ಚನೇ ಟ್ವೀಟ್ ಮೂಲಕ ತನ್ನ ಆರೋಗ್ಯದ ಬಗ್ಗೆ ಮಾಹಿತಿಯನ್ನ ಹಂಚಿಕೊಂಡಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರೋದನ್ನ ಸ್ಪಷ್ಟಪಡಿಸಿದ್ದಾರೆ.
ಅನಾರೋಗ್ಯದ ಬಗ್ಗೆ ಕಿಚ್ಚ ಹೇಳಿದ್ದೇನು?
ಅನಾರೋಗ್ಯದ ಬಗ್ಗೆ ಮಾಡಿದ್ ಟ್ವೀಟ್ನಲ್ಲಿ ನಾನು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದೇನೆ. ಈ ವಾರಾಂತ್ಯದೊಳಗೆ ಗುಣಮುಖನಾಗುತ್ತೇನೆ. ಆದ್ರೆ, ವೈದ್ಯರು ಇನ್ನೂ ಕೆಲವು ದಿನಗಳ ಕಾಲ ವಿಶ್ರಾಂತಿ ಬೇಕೆಂದು ಹೇಳಿದ್ದಾರೆ ಎಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಬಿಗ್ಬಾಸ್ ಶೋನಲ್ಲಿ ಈ ವಾರ ಸುದೀಪ್ ಇರಲ್ಲ
ಸುದೀಪ್ ಆರೋಗ್ಯ ಸರಿಯಿಲ್ಲದೆ ಇರೋದ್ರಿಂದ ಈ ವಾರ ಬಿಗ್ ಬಾಸ್ ನಿರೂಪಣೆಯಿಂದ ಹೊರಬಿದ್ದಿದ್ದಾರೆ. ಬಿಗ್ಬಾಸ್ ಮನೆಯಿಂದ ಎಲಿಮಿನೇಟ್ ಮಾಡೋ ಈ ಎರಡು ದಿನ ಸುದೀಪ್ಗಾಗಿ ಇಡೀ ಕರ್ನಾಟಕ ಕಾದು ಕೂರುತ್ತಿದ್ದರು. ಆದ್ರೀಗ ಈ ವಾರ ಕಿಚ್ಚ ಸುದೀಪ್ ಗೈರಾಗಲಿಸಿದ್ದಾರೆ. ಹೀಗಾಗಿ ಸುದೀಪ್ ಕೂಡ ಈ ವಾರ ರಿಯಾಲಿಟಿ ಶೋ ಅನ್ನ ಹೇಗೆ ತೆಗದುಕೊಂಡು ಹೋಗ್ತಾರೆ ಅನ್ನೋ ಕುತೂಹಲದಿಂದ ನೋಡ್ತಿದ್ದಾರೆ.
ಕಿಚ್ಚನ ಅಭಿಮಾನಿಗಳಲ್ಲಿ ಆತಂಕ
ತನ್ನ ಅನಾರೋಗ್ಯದ ಬಗ್ಗೆ ಸ್ವತ: ಸುದೀಪ್ ತಿಳಿಸುತ್ತಿದ್ದಂತೆ, ಸುದೀಪ್ ಆತಂಕಕ್ಕೆ ಒಳಗಾಗಿದ್ದಾರೆ. ಆದಷ್ಟು ಬೇಗ ಗುಣಮುಖರಾಗಿ ಅಂತ ಹಾರೈಸುತ್ತಿದ್ದಾರೆ. ನೀವಿಲ್ಲದೆ ಬಿಗ್ ಬಾಸ್ ಶೋವನ್ನ ನೋಡಲು ಅಸಾಧ್ಯವೆಂದು ಕಿಚ್ಚನ ಅಭಿಮಾನಿಗಳು ಅಭಿಪ್ರಾಯ ಹೊರಹಾಕುತ್ತಿದ್ದಾರೆ.