ಕನ್ನಡ ಕಿರುತೆರೆಯಲ್ಲಿ ಹೊಸ ಇತಿಹಾಸ ಸೃಷ್ಟಿಸೋಕೆ ಹೊಸ ರಿಯಾಲಿಟಿ ಶೋ ಒಂದು ಬರ್ತಿದೆ. ವಾರಾಂತ್ಯದಲ್ಲಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಚ್ಚ ಹೊಸ ಶೋ ಆರಂಭವಾಗ್ತಿದೆ.. ಇದು ಕನ್ನಡ ಟಿವಿ ಲೋಕದ ಇತಿಹಾಸದಲ್ಲಿ ಅತೀ ದೊಡ್ಡ ಕುಕ್ಕಿಂಗ್ ರಿಯಾಲಿಟಿ ಶೋ.. ಅಂದ್ಹಾಗೆ ಕಾರ್ಯಕ್ರಮದ ಹೆಸರು ‘ಕುಕ್ಕು ವಿಥ್ ಕಿರಿಕ್ಕು’.
ಹೊಸದನ್ನು ಹಂಬಲಿಸೋ ಕನ್ನಡ ಪ್ರೇಕ್ಷಕ ಪ್ರಭುಗಳಿಗೆ ಹೊಸ ಕಾರ್ಯಕ್ರಮ ಕುಕ್ಕು ವಿಥ್ ಕಿರಿಕ್ಕು. ಹೊಟ್ಟೆ ತುಂಬಾ ನಗು, ಹೊಸ ರೀತಿಯ ಮನರಂಜನೆಯನ್ನ ಹೊತ್ತು ಬರುತ್ತಿದೆ. ಈ ಹೊಸ ಕಾರ್ಯಕ್ರಮಕ್ಕೆ ಚಾಲನೆ ನೀಡಿರೋದು ಅಭಿನಯ ಚಕ್ರವರ್ತಿ, ಕರುನಾಡ ಬಾದಷಾ ಕಿಚ್ಚ ಸುದೀಪ್. ಕನ್ನಡದ ಅತಿದೊಡ್ಡ ಕಾಮಿಡಿ ಕುಕ್ಕಿಂಗ್ ಶೋ ಗೆ ಖುದ್ದು ಕನ್ನಡದ ಕುಕ್ಕಿಂಗ್ ಕಿಂಗ್ ಕಿಚ್ಚ ಬಂದದ್ದು, ಕಾರ್ಯಕ್ರಮಕ್ಕೆ ಅಮೋಘ ಆರಂಭ ಸಿಕ್ಕಂತಾಗಿದೆ.
ಕುಕ್ಕು ವಿಥ್ ಕಿರಿಕ್ಕು ಕಾರ್ಯಕ್ರಮದ ವಿಶೇಷತೆ ಏನಂದ್ರೆ, ಕನ್ನಡ ಕಿರುತೆರೆಯ ಸುಪ್ರಸಿದ್ಧ 16 ಸೂಪರ್ ಸ್ಟಾರ್ ಗಳು ಒಟ್ಟಿಗೆ ಒಂದೇ ವೇದಿಕೆ ಮೇಲೆ ಅಡುಗೆ ಮಾಡ್ತಾರೆ, ಆಟ ಆಡ್ತಾರೆ, ಕಾಲ್ ಎಳೆದು ಕಚಗುಳಿ ಇಟ್ಟು ಮಜಾ ಮಾಡ್ತಾರೆ. ಒಟ್ನಲ್ಲಿ ಊಟ ಮತ್ತು ನಗುವಿನಿಂದ ನಿಮ್ಮ ಹೊಟ್ಟೆ ತುಂಬುಸ್ತಾರೆ. ಕಿರುತೆರೆಯ ಧಾರಾವಾಹಿಗಳ ಫೇಮಸ್ ಫೇಸ್ ಸುಂದರ್ ವೀಣಾ, ನಟ ನಿರೂಪಕ ಕಿರಿಕ್ ಕೀರ್ತಿ ಹ್ಯಾಂಡ್ಸಮ್ ಹೀರೋ ಚಂದದ ನಾಯಕ ಚಂದನ್, ಕವಿತಾ ಗೌಡ, ವನಿತಾ ವಾಸು, ರೆಮೋ ಅಲಿಯಾಸ್ ರೇಖಾ ಮೋಹನ್, ಅಪೂರ್ವ, ಲಾಸ್ಯ ನಾಗರಾಜ್ ಖಡಕ್ ಕುಕ್ಕುಗಳಾಗಿ ನಿಮ್ಮ ಮುಂದೆ ಕೈರುಚಿ ಜೊತೆ ನಗುವಿನ ರುಚಿ ತೋರಿಸಲು ರೆಡಿಯಾಗಿದ್ದಾರೆ.
ಅಯ್ಯೋ ದೇವ್ರೇ..! ಇವರೆಲ್ಲಾ ಒಟ್ಟಿಗೆ ಒಂದೇ ವೇದಿಕೇಲಿ ಬರ್ತಾರ ಅಂತ ಯೋಚಿಸ್ತಿದ್ರೆ? ಖಂಡಿತ ಹೌದು.. ಕಿಚ್ಚ ಸುದೀಪ್ ಸ್ಟಾರ್ ಎಂಟ್ರಿ ಕೊಟ್ಟು ಶುಭಾರಂಭ ಮಾಡಿದ್ದಾಗಿದೆ. ಈ ಭಯಂಕರ ನಟರೆಲ್ಲಾ ಸೇರೋ ಭಾರಿ ಮನರಂಜನೆ ನೀಡಲಿದ್ದಾರೆ. ಸ್ಟಾರ್ ಸುವರ್ಣದಲ್ಲಿ ಇದೇ ಏಪ್ರಿಲ್ 10, ಶನಿವಾರ ರಾತ್ರಿ 8:30 ಕ್ಕೆ ಆರಂಭವಾಗಲಿದ್ದು, ನಂತರ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.