ಕಿಚ್ಚ ಸುದೀಪ್ ಈ ವಾರ ಬಿಗ್ ಬಾಸ್ ಮನೆಗೆ ಬರ್ತಾರೆ. ಶನಿವಾರ, ಭಾನುವಾರ ಎರಡು ದಿನ ರಂಜಿಸುತ್ತಾರೆ ಅಂತ ಕಾತುರದಿಂದ ಕಾದು ಕೂತಿದ್ದ ಅಭಿಮಾನಿಗಳಿಗೆ ಈಗ ನಿರಾಸೆಯಾಗಿದೆ. ಯಾಕಂದ್ರೆ, ಬಿಗ್ ಬಾಸ್ ಮನೆಗೆ ಈ ವಾರವೂ ಗೈರಾಗಿದ್ದಾರೆ. ಈ ಮಧ್ಯೆ ಶಿವರಾಜ್ಕುಮಾರ್, ರವಿಚಂದ್ರನ್, ರಿಷಬ್ ಹಾಗೂ ಉಪೇಂದ್ರಗೆ ಟ್ವೀಟ್ ಮೂಲಕ ಧನ್ಯವಾದ ಹೇಳಿದ್ದಾರೆ. ಅದ್ಯಾಕೆ ಅನ್ನೋದು ನೋಡಿ.
ಕಿಚ್ಚ ಸುದೀಪ್ ಎರಡು ವಾರಗಳ ಕಾಲ ಅನಾರೋಗ್ಯದಿಂದ ಬಳಲುತ್ತಿದ್ರು. ಕಿಚ್ಚನಿಗೆ ಏನಾಗಿದೆ? ಅವ್ರ ಆರೋಗ್ಯ ಸಮಸ್ಯೆಯೇನು? ಅನ್ನೋದು ಯಾರಿಗೂ ಗೊತ್ತಿಲ್ಲ. ಹೀಗಾಗಿ ಅಭಿಮಾನಿಗಳು ಸೇರಿದಂತೆ, ಚಿತ್ರರಂಗ ಕೂಡ ಗಾಬರಿಗೊಳಗಾಗಿತ್ತು. ಆದ್ರೆ, ರನ್ನ ಅನಾರೋಗ್ಯದಿಂದ ಬಳಲುತ್ತಿದ್ದಾಗ ಚಿತ್ರರಂಗದ ದಿಗ್ಗಜರು ಸುದೀಪ್ಗೆ ಬೇಗ ಗುಣಮುಖರಾಗುವಂತೆ ಫೋನ್ ಮಾಡಿ ವಿಶ್ ಮಾಡಿದ್ದರು. ಹೀಗಾಗಿ ಶಿವಣ್ಣ, ರವಿಚಂದ್ರನ್, ರಿಷಬ್ ಹಾಗೂ ಉಪೇಂದ್ರ ಅವ್ರಿಗೆ ಟ್ವೀಟ್ ಮಾಡಿ ಧನ್ಯವಾದ ಹೇಳಿದ್ದಾರೆ.
ಇನ್ನು ಬಿಗ್ ಬಾಸ್ ಮನೆಯಲ್ಲಿ ಕಿಚ್ಚ ಈ ವಾರ ನಿರೂಪಣೆ ಮಾಡದೆ ಇರೋಕೆ ಕಾರಣವಿದೆ. ಕೊವಿಡ್ ರೂಲ್ಸ್ ಪ್ರಕಾರ, ಯಾವುದೇ ರೀತಿಯ ಒಳಾಂಗಣ ಹಾಗೂ ಹೊರಾಂಗಣ ಚಿತ್ರೀಕರಣವನ್ನ ನಿಷೇಧಿಸಲಾಗಿದೆ. ಹೀಗಾಗಿ ಈ ವಾರ ಕೂಡ ಕಿಚ್ಚ ಬಿಗ್ ಬಾಸ್ ಪರದೆ ಮೇಲೆ ಕಾಣಿಸಿಕೊಳ್ಳುತ್ತಿಲ್ಲ.
ಸುದೀಪ್ ಈಗ ಸಂಪೂರ್ಣ ಗುಣಮುಖರಾಗಿದ್ದು, ಲಾಕ್ಡೌನ್ ಮುಗಿಯುತ್ತಿದ್ದಂತೆ ಮತ್ತೆ ಚಿತ್ರೀಕರಣಕ್ಕೆ ಮರಳಲಿದ್ದಾರೆ. ಸದ್ಯ ಕಿಚ್ಚನ ಕೋಟಿಗೊಬ್ಬ 3 ಸಿನಿಮಾ ಬಿಡುಗಡೆಯಾಗ ಬೇಕಿದೆ. ಇನ್ನೂ ವಿಕ್ರಾಂತ್ ರೋಣ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿಯುವ ಹಂತದಲ್ಲಿದ್ದು, ಆಗಸ್ಟ್ ತಿಂಗಳಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ.