ಕಿಚ್ಚ ಸುದೀಪ್ 25 ವರ್ಷದ ಬೆಳ್ಳಿ ಹೆಜ್ಜೆ ಕಾರ್ಯಕ್ರಮದಲ್ಲಿ ಸಿ.ಎಂ ಯಡಿಯೂರಪ್ಪ ಭಾಗವಹಿಸಿದ್ದರು. ಕಿಚ್ಚನ ಸಿನಿ ಜರ್ನಿಗೆ ಶುಭಕೋರಿದ್ದಷ್ಟೇ ಅಲ್ಲದೆ, ಸನ್ಮಾನ ಮಾಡಿದ್ದರು. ಆ ಕಾರ್ಯಕ್ರಮ ನಡೆದ ಬೆನ್ನಲ್ಲೇ ಸುದೀಪ್ ಮತ್ತೆ ಸಿ.ಎಂ ಯಡಿಯೂರಪ್ಪ ಅವರನ್ನ ಭೇಟಿಯಾಗಿದ್ದಾರೆ. ಅದ್ಯಾಕೆ ಅನ್ನೋ ಕುತೂಹಲವೀಗ ಎಲ್ಲರನ್ನೂ ಕಾಡಲು ಶುರುವಾಗಿದೆ.
ಕಿಚ್ಚ ಸುದೀಪ್ ಜೊತೆ ಫ್ಯಾಂಟಮ್ ಚಿತ್ರದ ನಿರ್ಮಾಪಕ ಜಾಕ್ ಮಂಜು ಕೂಡ ಜೊತೆಯಲ್ಲಿದ್ದರು. ಕೆಲ ಹೊತ್ತು ಸಿ.ಎಂ ಹಾಗೂ ಸುದೀಪ್ ನಡುವೆ ಕೆಲವು ವಿಷಯಗಳಿಗೆ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಆದ್ರೆ, ಇದೂವರೆಗೂ ಸುದೀಪ್ ಭೇಟಿಯಾಗಿದ್ದು ಯಾಕೆ? ಅಂತ ಅಧಿಕೃತವಾಗಿ ಹೇಳಿಲ್ಲ.
ಸಿ.ಎಂ ಕೆಲ ದಿನಗಳ ಹಿಂದೆ ಸುದೀಪ್ರನ್ನ ಭೇಟಿ ಮಾಡಿದ ಹಿನ್ನೆಲೆಯಲ್ಲಿ ಇಂದು (ಮಾರ್ಚ್ 18) ಗೌರವಾರ್ಥವಾಗಿ ಭೇಟಿ ಮಾಡಿದ್ದಾರೆ ಅನ್ನೋದು ಆಪ್ತವಲಯದಿಂದ ಕೇಳಿ ಬರ್ತಿರೊ ಮಾಹಿತಿ. ಇದೇ ವೇಳೆ ಸಿ.ಎಂಗೆ ಶಾಲು ಹೊದಿಸಿ, ಹಾರ ಹಾಕಿದೆ ಫೋಟೋ ಕೂಡ ಹರಿದಾಡುತ್ತಿದೆ.
ಕಿಚ್ಚ ದಿಢೀರನೇ ಸಿ.ಎಂ ಭೇಟಿ ಮಾಡಿದ್ದು, ಚರ್ಚೆ ನಡೆಸಿದ್ದು ಯಾಕೆ ಎಂದು ಎಲ್ಲೆಡೆ ಚರ್ಚೆಯಾಗುತ್ತಿದೆ. ಆದ್ರೆ, ಈ ಭೇಟಿ ಬಗ್ಗೆ ಸುದೀಪ್ ಇನ್ನೂ ಹೇಳಿಕೊಂಡಿಲ್ಲ. ಹೀಗಾಗಿ ಸಹಜವಾಗೇ ಈ ಭೇಟಿ ಕುತೂಹಲ ಕೆರಳಿಸಿದೆ. ಸುದೀಪ್ ಕೋಟಿಗೊಬ್ಬ 3 ಸಿನಿಮಾ ಬಿಡುಗಡೆಗೆ ತಯಾರಿ ನಡೆಸಿದೆ. ಈಗಷ್ಟೇ ಸಿನಿಮಾ ಪ್ರಚಾರ ಆರಂಭ ಆಗಿದ್ದು, ಯಾವ ಮಟ್ಟದಲ್ಲಿರುತ್ತೆ ಅನ್ನೋ ಕುತೂಹಲವಿದೆ.