ಪೊಗರು ಬಂತು.. ರಾಬರ್ಟ್ ಗೆಲ್ತು.. ಯುವರತ್ನನ ಅಬ್ಬರ ಶುರುವಾಗಿದೆ. ಸರದಿಯಲ್ಲಿ ಕಿಚ್ಚನ ಕೋಟಿಗೊಬ್ಬ 3 ಸಿನಿಮಾ ಬಿಡುಗಡೆಗೆ ಸಜ್ಜಾಗಿ ನಿಂತಿದೆ. ಹೀಗಾಗಿ ಭರದಿಂದ ಕೋಟಿಗೊಬ್ಬ 3 ಸಿನಿಮಾದ ಪ್ರಚಾರ ಶುರುವಾಗಿದೆ. ಶುಭ ಶುಕ್ರವಾರ ಇದೇ ಚಿತ್ರದ ಹೊಚ್ಚ ಹೊಸ ಲಿರಿಕಲ್ ಸಾಂಗ್ ರಿಲೀಸ್ ಆಗಿದ್ದು, ಕಿಚ್ಚನ ಫ್ಯಾನ್ಸ್ಗೆ ಕಿಕ್ ಕೊಟ್ಟಿದೆ.
ನೀ ಕೋಟಿಯಲ್ಲಿ ಒಬ್ಬನೇ ನಾ ಕಾಯುವೆನು ನಿನ್ನನೇ.. ಅನ್ನೋ ಹಾಡು ಏಪ್ರಿಲ್ 02 ಬೆಳಗ್ಗೆ ರಿಲೀಸ್ ಆಗಿದೆ. ಈ ರೊಮ್ಯಾಂಟಿಕ್ ಹಾಡಿನಲ್ಲಿ ಕಿಚ್ಚ ಸುದೀಪ್ ಫುಲ್ ಯಂಗ್ ಆಗಿ, ಡುಯೆಟ್ ಹಾಡಿದ್ದಾರೆ. ಇವ್ರೊಂದಿಗೆ ಪ್ರೇಮಂ ಸಿನಿಮಾದ ನಾಯಕಿ ಮಡೋನಾ ಸೆಬಾಸ್ಟಿಯನ್ ಕೂಡ ಕ್ಯೂಟ್ ಆಗಿ ಕಾಣಸ್ತಿದ್ದಾರೆ.
ಅರ್ಜುನ್ ಜನ್ಯ ಹಾಕಿದ ಈ ರೊಮ್ಯಾಂಟಿಕ್ ಟ್ಯೂನ್ಗೆ ಯೋಗರಾಜ್ ಭಟ್ ಸಾಹಿತ್ಯ ರಚಿಸಿದ್ದಾರೆ. ನೀ ಕೋಟಿಗೊಬ್ಬನೇ ಅಂತ ಶ್ರೇಯಾ ಘೋಷಾಲ್ ಸುಮಧುರವಾಗಿ ಹಾಡಿದ್ದಾರೆ. ಈ ಹಾಡು ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಭರ್ಜರಿ ವೀವ್ಸ್ ಪಡೆದುಕೊಳ್ತಿದೆ.
ಯುವ ನಿರ್ದೇಶಕ ಶಿವ ಕಾರ್ತಿಕ್ ಈ ಸಿನಿಮಾದ ನಿರ್ದೇಶಕ. ಕೋಟಿಗೊಬ್ಬ 2 ಸಿನಿಮಾದ ಗೆಲುವು ಕೋಟಿಗೊಬ್ಬ 3 ಚಿತ್ರವನ್ನ ನಿರ್ಮಿಸಲು ಪ್ರೇರಣೆ. ಕಳೆದ ವರ್ಷವೇ ರಿಲೀಸ್ ಆಗ್ಬೇಕಿದ್ದ ಸಿನಿಮಾ, ಏಪ್ರಿಲ್ ಕೊನೆವಾರದಲ್ಲಿ ಬಿಡುಗಡೆಯಾಗೋಕೆ ಸಿದ್ಧತೆಗಳನ್ನ ಮಾಡಿಕೊಂಡಿದೆ. ಈ ಬಾರಿ ಕಿಚ್ಚ ಅಂತರಾಷ್ಟ್ರೀಯ ಮಟ್ಟದ ಕಿಲಾಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ.