ವರ್ಷದ ಬಹುನಿರೀಕ್ಷಿತ ಕನ್ನಡ ಸಿನಿಮಾಗಳಲ್ಲಿ ಕೋಟಿಗೊಬ್ಬ- 3 ಕೂಡ ಒಂದು. ಕೊರೋನಾ ಹಾವಳಿ ಇಲ್ಲದೇ ಹೋಗಿದ್ರೆ, ಕಳೆದ ವರ್ಷವೇ ಸಿನಿಮಾ ರಿಲೀಸ್ ಆಗಿ ಇಷ್ಟೊತ್ತಿಗೆ ಎಲ್ಲಾ ಮರೆತುಬಿಡುತ್ತಿದ್ದರು. ಲಾಕ್ಡೌನ್ ಕಾರಣ ಕೋಟಿಗೊಬ್ಬ – 3 ರಿಲೀಸ್ ತಡವಾಗ್ತಿದೆ. ಈ ನಡುವೆ ಸುದೀಪ್ ಅಭಿನಯದ ಕೋಟಿಗೊಬ್ಬ ಸರಣಿಯ 2ನೇ ಚಿತ್ರಕ್ಕೆ ಓಟಿಟಿಯಿಂದ ಬೇಡಿಕೆ ಬಂದಿದೆ ಅನ್ನುವ ಸುದ್ದಿ ಕೆಲ ದಿನಗಳ ಹಿಂದೆ ಭಾರೀ ಸದ್ದು ಮಾಡಿತ್ತು. ₹35 ಕೋಟಿಗೆ ಚಿತ್ರವನ್ನ ನೇರವಾಗಿ ಓಟಿಟಿಯಲ್ಲಿ ಹಾಕಲು ಕೇಳ್ತಿದ್ದಾರೆ ಅನ್ನೋ ಸುದ್ದಿ ಹಬ್ಬಿತ್ತು. ಆದರೆ ಈ ವಿಚಾರ ಸುಳ್ಳು ಅಂತ ಸಿನಿಮಾ ಸೂರಪ್ಪ ಬಾಬು ಹೇಳಿದ್ದರು. ಯಾವುದೇ ಕಾರಣಕ್ಕೂ ನಮ್ಮ ಚಿತ್ರವನ್ನ ಡಿಜಿಟಲ್ ಫ್ಲಾಟ್ ಫಾರ್ಮ್ ಗೆ ಕೊಡಲ್ಲ ಅಂದು ಬಿಟ್ಟಿದ್ದರು.
ಕೋಟಿಗೊಬ್ಬ – 3 ಹೈವೋಲ್ಟೇಜ್ ಆ್ಯಕ್ಷನ್ ಸಿನಿಮಾ. ಇದನ್ನ ಸಿಲ್ವರ್ ಸ್ಕ್ರೀನ್ ಗೆ ಅಂತ ಮಾಡಿರೋದು. ಸ್ಮಾಲ್ ಸ್ಕ್ರೀನ್ ನಲ್ಲಿ ನೋಡಿದ್ರೆ ಮಜಾ ಇರೋದಿಲ್ಲ. ಥಿಯೇಟರ್ ಗೆ ಬಂದ್ರೆ 100 ಕೋಟಿ ಕಲೆಕ್ಷನ್ ಮಾಡುತ್ತೆ, ನಾನ್ಯಾಕೆ ಓಟಿಟಿಗೆ ಕೊಡ್ತೀನಿ ಅಂದಿದ್ದರು. ಇದೀಗ ನಿಧಾನವಾಗಿ ಕೊರೋನಾ ಹಾವಳಿ ಕಮ್ಮಿ ಆಗಿ ಲಾಕ್ಡೌನ್ ನಿಂದ ಕೊಂಚ ರಿಲೀಫ್ ಸಿಕ್ಕಿದೆ. ಆಗಸ್ಟ್ ವೇಳೆಗೆ ಥಿಯೇಟರ್ ಓಪನ್ ಮಾಡಿ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಕೊಡುವ ಸಾಧ್ಯತೆ ಇದೆ.
ಥಿಯೇಟರ್ ಬಾಗಿಲು ತೆರೆದರೆ ಮೊದಲು ಬಿಡುಗಡೆ ಆಗುವ ಕನ್ನಡದ ದೊಡ್ಡ ಸಿನಿಮಾಗಳಲ್ಲಿ ಕೋಟಿಗೊಬ್ಬ-3 ಮೊದಲ ಸಾಲಿನಲ್ಲಿದೆ. ಯಾಕೆಂದರೆ ಸುದೀಪ್ ಅಭಿನಯದ ವಿಕ್ರಾಂತ್ ಬರೋಣ ಸಿನಿಮಾ ಸಹ ಬಿಡುಗಡೆ ಆಗಬೇಕಿದೆ. ಹಾಗಾಗಿ ಸಾಧ್ಯವಾದಷ್ಟು ಬೇಗ ಕೋಟಿಗೊಬ್ಬನ ದರ್ಶನವಾಗಲಿದೆ. ಇನ್ನು ಕೋಟಿಗೊಬ್ಬ -3 ಚಿತ್ರಕ್ಕೆ 50 ದಿನಗಳು ಮಾತ್ರ ಅವಕಾಶ. ಸಿನಿಮಾ ರಿಲೀಸ್ ಆಗಿ 50 ದಿನಗಳ ನಂತರ ಓಟಿಟಿಗೆ ಬರಲಿದೆ. ಈಗಾಗಲೇ ಈ ಬಗ್ಗೆ ಒಪ್ಪಂದ ಆಗಿದೆ ಅಂತ ನಿರ್ಮಾಪಕ ಸೂರಪ್ಪ ಬಾಬು ಹೇಳಿದ್ದಾರೆ. ಸಿನಿಮಾ ರಿಲೀಸ್ ಆಗಿ 50 ದಿನಕ್ಕೆ ಡಿಜಿಟಲ್ ಫ್ಲಾಟ್ ಫಾರ್ಮ್ ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಆ ನಂತರ ಚಿತ್ರಮಂದಿರಗಳಿಗೆ ವಿಕ್ರಾಂತ್ ರೋಣ ಕಿಚ್ಚನ ಆಗಮನವಾಗಲಿದೆ.