ಕಿಚ್ಚ ಸುದೀಪ್ ತೆರೆಮರೆ ಮೇಲೆ ನಟನೆ ಮಾಡಿದ್ರೂ, ತೆರೆಹಿಂದೆ ಸಮಾಜಮುಖಿ ಕೆಲಸಗಳನ್ನು ಮಾಡುತ್ತಲೇ ಇದ್ದಾರೆ. ತಮ್ಮ ಟ್ರಸ್ಟ್ ಮೂಲಕ ಬಡವರಿಗೆ, ಅಸಹಾಯಕರಿಗೆ ಸಹಾಯ ಹಸ್ತ ಚಾಚುತ್ತಲೇ ಇದ್ದಾರೆ. ಕೆಲವ ದಿನಗಳ ಹಿಂದೆ ಕೊರೊನಾ ಸೋಂಕು ತಗುಲಿದ ಆಸ್ಪತ್ರೆಗೆ ಸಿಬ್ಬಂದಿಗೆ ಸುಮಾರು 1500 ಕೇಕ್ಗಳನ್ನು ಕಳುಹಿಸಿಕೊಟ್ಟಿದ್ದರು. ಈಗ ಅಭಿಮಾನಿಯ ಗಂಡನ ಜೀವ ಉಳಿಸಿ ದೇವರಾಗಿದ್ದಾರೆ.
ಕಿಚ್ಚನ ಅಭಿಮಾನಿ ಸೌಮ್ಯಾ ತೀರಾ ಸಂಕಷ್ಟಕ್ಕೆ ಸಿಲುಕಿದ್ದರು. ಗಂಡನಿಗೆ ಬ್ಲಡ್ ಇನ್ಫೆಕ್ಷನ್ ಆಗಿ ಆಸ್ಪತ್ರೆಗೆ ಸೇರಿಸಿದ್ದರು. ಆ ವೇಳೆ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪತಿ ಮನೆಗೆ ವಾಪಾಸಾಗಿದ್ರು. ಇನ್ನೇನು ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ, ಅನ್ನೋವಾಗ್ಲೇ ಕೊರೊನಾ ಸೋಂಕು ತಗುಲಿತ್ತು.
ಹೀಗಾಗಿ ಖಾಸಗಿ ಆಸ್ಪತ್ರೆಗೆ ಪತಿಯನ್ನು ಸೇರಿಸಲು ಹೋದ್ರೆ, ರೆಮ್ಡಿಸಿವಿರ್ ಇಲ್ಲದೆ ದಾಖಲು ಮಾಡಿಕೊಳ್ಳೋದಿಲ್ಲವೆಂದು ಹೇಳಿದ್ದರು. 50 ಸಾವಿರ ಅಡ್ವಾನ್ಸ್.. 20 ಸಾವಿರ ರೆಮ್ಡಿಸಿವಿರ್ ಇಂಜೆಕ್ಷನ್ಗೆ ಖರ್ಚಾಗಿತ್ತು. ಮತ್ತೆರಡು ಇಂಜೆಕ್ಷನ್ ತರುವಂತೆ ಹೇಳಿದ್ದರು. ಅಷ್ಟೋತ್ತಿಗಾಗ್ಲೇ 1 ಲಕ್ಷದ 30 ಸಾವಿರ ಬಿಲ್ ಆಗಿತ್ತು. ಸಂಬಂಧಿಕರು, ಸ್ನೇಹಿತರು ಯಾರೂ ನೆರವಿಗೆ ಬಾರದಿದ್ದಾಗ ಮೊದಲು ಮಾನವನಾಗಿ ಟ್ರಸ್ಟ್ಗೆ ಫೋನ್ ಮಾಡಿ ಸಹಾಯಕತೆ ತೋಡಿಕೊಂಡಿದ್ರು. ಟ್ರಸ್ಟ್ ಮೇಲ್ವೀಚಾರ ಕಿಟ್ಟಿ ಮೂಲಕ ವಿಷಯ ತಿಳಿದುಕೊಂಡ ಕಿಚ್ಚ ತನ್ನ ಅಭಿಮಾನಿ ಸೌಮ್ಯಾಗೆ ಸಹಾಯ ಮಾಡಿದ್ರು. ಹೀಗಾಗಿ ಕಿಚ್ಚನ ಮಹಿಳಾ ಅಭಿಮಾನಿ ತನ್ನೆಲ್ಲಾ ಆಯಸ್ಸು ನಿಮಗೆ ಸಿಗಲಿ ಎಂದು ಹೇಳಿ ಧನ್ಯವಾದಗಳನ್ನು ಹೇಳಿದ್ದಾಳೆ.
ಕಿಚ್ಚ ಸುದೀಪ್ ಕೂಡ ಕೊರೊನಾ ಸೋಂಕು ತಗುಲಿತ್ತು. ಸುಮಾರು 15 ದಿನ ಚಿಕಿತ್ಸೆ ಪಡೆದು ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ತಾವೇ ಅನಾರೋಗ್ಯದಿಂದ ಬಳಲುತ್ತಿದ್ರೂ, ಇನ್ನೊಬ್ಬರ ಸಹಾಯಕ್ಕೆ ಮುಂದಾಗಿರೋದಕ್ಕೆ ಕಿಚ್ಚ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.