ಅನ್ಲಾಕ್ ಆಗ್ತಿದ್ದಂತೆ ಲಾಕ್ ಆಗಿದ್ದ ಚಿತ್ರರಂಗ ಮೈಕೊಡವಿಕೊಂಡು ಸಿನಿಮಾ ಕೆಲಸ ಶುರುಮಾಡಿದೆ. ಅದ್ರಲ್ಲೂ ಕಿಚ್ಚ ಸುದೀಪ್ ನಟಿಸ್ತಿರೋ ಬಹುನಿರೀಕ್ಷೆಯ ಸಿನಿಮಾ ವಿಕ್ರಾಂತ್ ರೋಣದ ಕೆಲಸ ಬರದಿಂದ ಸಾಗಿದೆ. ಎರಡು ದಿನಗಳ ಹಿಂದೆ ಡಬ್ಬಿಂಗ್ ಮಾಡ್ತಿರೋದಾಗಿ ಹೇಳಿದ್ದ ಕಿಚ್ಚ ಸುದೀಪ್ ತಮ್ಮ ಕೆಲಸ ಮುಗಿಸಿದ್ದಾರೆ. ಈಗೇನಿದ್ರೂ ಹಾಡುಗಳ ಚಿತ್ರೀಕರಣಕ್ಕೆ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ.
‘‘ವಿಕ್ರಾಂತ್ ರೋಣ ಸಿನಿಮಾದಲ್ಲಿ ನನ್ನ ಭಾಗದ ಡಬ್ಬಿಂಗ್ ಮುಗಿಸಿದ್ದೇನೆ. 3ಡಿ ಯಲ್ಲಿ ಕೆಲವು ದೃಶ್ಯಗಳನ್ನು ನೋಡಿದೆ. ಇದೊಂದು ಅದ್ಭುತ ಅನುಭವ. ವಿಕ್ರಾಂತ್ ರೋಣನ ಪ್ರಪಂಚ ನೋಡಲು ಥ್ರಿಲ್ ಆಗಿದೆ. ಈಗೇನಿದ್ರೂ ಹಾಡುಗಳ ಚಿತ್ರೀಕರಣಕ್ಕೆ ಸಿದ್ಧನಾಗಬೇಕಿದೆ’’ ಹೀಗೆಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.
ವಿಕ್ರಾಂತ್ ರೋಣ ಕೇವಲ 2Dಯಲ್ಲಷ್ಟೇ ಅಲ್ಲ. 3Dಯಲ್ಲೂ ಬರುತ್ತಿದೆ. ಹೀಗಾಗಿ ಕಿಚ್ಚ ಸುದೀಪ್ ಫ್ಯಾನ್ ಸಿಕ್ಕಾ-ಪಟ್ಟೆ ಥ್ರಿಲ್ ಆಗಿದ್ದಾರೆ. ಕಿಚ್ಚನ ಸಾಹಸವನ್ನು ತೆರೆಮೇಲೆ ನೋಡಲು ಉತ್ಸಾಹದಿಂದ ಕಾಯ್ತಿದ್ದಾರೆ. ಅದ್ರಂತೆ ಸ್ವತ: ಸುದೀಪ್ 3D ನೋಡಿ ಥ್ರಿಲ್ ಆಗಿದೆ ಅಂದ್ಮೇಲಂತೂ ಅಭಿಮಾನಿಗಳು ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅಂತ ಕಾಯ್ತಿದ್ದಾರೆ.
ವಿಕ್ರಾಂತ್ ರೋಣ ತಂಡ ಸಿನಿಮಾವನ್ನ ಆಗಸ್ಟ್ 13 ರಂದು ಬಿಡುಗಡೆ ಮಾಡೋದಾಗಿ ಹೇಳಿದೆ. ಆದ್ರೆ, ಲಾಕ್ಡೌನ್ನಿಂದಾಗಿ ಕೆಲವು ದಿನಗಳು ಕೆಲಸಗಳು ನಿಂತಿದ್ವು. ಹೀಗಾಗಿ ವಿಕ್ರಾಂತ್ ರೋಣ ಕೂಡ ಬಿಡುಗಡೆ ದಿನವನ್ನು ಮುಂದೂಡುತ್ತಾ? ಇಲ್ಲಾ ಈಗಾಗ್ಲೇ ಅನೌನ್ಸ್ ಮಾಡಿದ ಡೇಟ್ಗೆ ಬಿಡುಗಡೆ ಮಾಡುತ್ತಾ ಅನ್ನೋದನ್ನು ವಿಕ್ರಾಂತ್ ರೋಣ ತಂಡ ಸ್ಪಷ್ಟಪಡಿಸಿಲ್ಲ.