ಸುದೀಪ್ ಸಿನಿಪಯಣಕ್ಕೆ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ ಕೋಟಿಗೊಬ್ಬ ಚಿತ್ರತಂಡ ಸನ್ಮಾನ ಕಾರ್ಯಕ್ರಮವನ್ನ ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮಕ್ಕೆ ಸಿ.ಎಂ ಯುಡಿಯೂರಪ್ಪ ವಿಶೇಷ ಅತಿಥಿಯಾಗಿ ಆಗಮಿಸಿ, ಕಿಚ್ಚನನ್ನ ಸನ್ಮಾನಿಸಿದ್ದರು. ಕೆಲವು ದಿನಗಳ ಹಿಂದಷ್ಟೇ ಬುರ್ಜ್ ಖಲೀಫಾದಲ್ಲಿ ಕಿಚ್ಚ ಸುದೀಪ್ 25ನೇ ವರ್ಷದ ಬೆಳ್ಳಿಹಬ್ಬವನ್ನ ಆವರಿಸಿಕೊಂಡಿದ್ದರು.
ಕಿಚ್ಚನ ಬೆಳ್ಳಿ ಹಬ್ಬ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಾ.ಶಿವರಾಜ್ಕುಮಾರ್, ರಮೇಶ್ ಅರವಿಂದ್, ಕ್ರೇಜಿಸ್ಟಾರ್ ರವಿಚಂದ್ರನ್, ರಾಕ್ಲೈನ್ ವೆಂಕೇಶ್ ಮತ್ತಿತರರು ಆಗಮಿಸಿದ್ದರು. ಈ ವೇಳೆ ಸುದೀಪ್ ತಮ್ಮ 25 ವರ್ಷದ ಜರ್ನಿಯಲ್ಲಿ ರಾಕ್ ಲೈನ್ ವೆಂಕಟೇಶ್ ಹಾಗೂ ಉಪೇಂದ್ರ ಪಾತ್ರವನ್ನ ಬಣ್ಣಸಿದ್ರು.
ಒಂದು ಕಷ್ಟದ ಸಂದರ್ಭ.. ಆ ವೇಳೆ ದುಡ್ಡಿನ ಅಗತ್ಯವಿತ್ತು. ಕೆಲವರ ಬಳಿ ಹಣ ಕೇಳೋಕೆ ಸುದೀಪ್ಗೆ ಮನಸ್ಸಾಗಿರಲಿಲ್ಲ. ಮಧ್ಯರಾತ್ರಿ ರಾಕ್ ಲೈನ್ ವೆಂಕಟೇಶ್ ಅವ್ರಿಗೆ ಫೋನ್ ಮಾಡಿದ್ದರು. ತಕ್ಷಣವೇ ಮನೆಗೆ ಬರುವುದಾಗಿ ತಿಳಿಸಿದ್ದರು. ಸುದೀಪ್, ರಾಕ್ಲೈನ್ ಮನೆಗೆ ಹೋಗುತ್ತಿದ್ದಂತೆ ಹಿಂದೆ ಮುಂದೆ ನೋಡಿದೆ ಹಣ ಸಹಾಯ ಮಾಡಿದ್ರು. ಮಾನವೀಯತೆಯ ದೃಷ್ಟಿಯಿಂದ ಅಂದು ಮಾಡಿದ ಸಹಾಯವನ್ನು ನಾನು ಎಂದೂ ಮರೆಯೋದಿಲ್ಲ ಎಂದು ಹೇಳಿದ್ದಾರೆ.
ರಾಕ್ಲೈನ್ ಬಳಿಕ ಉಪೇಂದ್ರ ಅವರನ್ನೂ ಹೊಗಳಿದಿದ್ರು. ಉಪ್ಪಿ ನಿರ್ದೇಶನದ ಸಿನಿಮಾ ನೋಡಿ ಸುದೀಪ್ ಫಿದಾ ಆಗಿದ್ದರು. ಆ ವೇಳೆ ಸಹ-ನಿರ್ದೇಶಕನಾಗಲು ಹೋಗಿದ್ದರು. ಆಗ ಉಪೇಂದ್ರ ನೀನು ಹೀರೋ ಆಗು ಎಂದು ಹೇಳಿದ್ದರು. ಅವ್ರಿಂದ್ಲೇ ನಾನು ಈಗ ಹೀರೋ ಆಗಿ ನಿಂತಿದ್ದೇನೆ. ಉಪ್ಪಿಯವ್ರಿಗೆ ಕಲಿಯೋದು ವಿಷಯ ಬಹಳಷ್ಟಿದೆ ಎಂದು ಹೇಳಿದ್ದಾರೆ.