ಮಾರ್ಚ್ 20ರ ಸಂಜೆ ದಿಢೀರನೇ ಕಿಚ್ಚನ ಅಭಿಮಾನಿಗಳು ಬರಹಗಾರ ಅಹೋರಾತ್ರ ಮನೆಗೆ ನುಗ್ಗಿ ದಾಂಧಲೆ ಮಾಡಿದ್ದರು. ಈ ವೇಳೆ ಫೇಸ್ ಬುಕ್ ಲೈವ್ ಬಂದಿದ್ದ ಅಹೋರಾತ್ರ ಕಿಚ್ಚನ ಬೆಂಬಲಿಗರೇ ಬಂದು ದಾಳಿ ಮಾಡಿದ್ದಾರೆ. ಕಿಚ್ಚನ ಅಭಿಮಾನಿಗಳು ನನ್ನನ್ನು ಕೊಲ್ಲಲು ಬಂದಿದ್ದರು ಎಂದು ಆರೋಪಿಸಿದ್ದರು.
ಕಿಚ್ಚ ಸುದೀಪ್ ರಮ್ಮಿ ಆನ್ಲೈನ್ ಗೇಮ್ನ ರಾಯಬಾರಿಯಾಗಿದ್ದರು. ಈ ವೇಳೆ ಅಹೋರಾತ್ರ ಕಿಚ್ಚ ಈ ಜಾಹೀರಾತಿನಲ್ಲಿ ನಟಿಸಿದ್ದನ್ನ ವಿರೋಧಿಸಿದ್ದರು. ಅಲ್ಲದೆ ರಮ್ಮಿ ಗೇಮ್ನಿಂದ ಹಲವರು ಮನೆ-ಮಠ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಇಂತಹ ಸಂದರ್ಭದಲ್ಲಿ ರಮ್ಮಿ ಗೇಮ್ ಅನ್ನ ಪ್ರಮೋಟ್ ಮಾಡಿದ್ದು ಎಷ್ಟು ಸರಿಯೆಂದು ವಿರೋಧಿಸಿದ್ದರು. ಆ ವೇಳೆ ಅವ್ಯಾಚ ಶಬ್ದಗಳಿಂದ ಕಿಚ್ಚ ಸುದೀಪ್ರನ್ನ ನಿಂದಿಸಿದ್ದರು.
ಕಳೆದ ಕೆಲವು ದಿನಗಳಿಂದ ಅಹೋರಾತ್ರ ಕಿಚ್ಚ ಸುದೀಪ್ ಮೇಲೆ ನಿರಂತರವಾಗಿ ನಿಂದಿಸುತ್ತಲೇ ಇದ್ದರು. ಇದರಿಂದ ರೊಚ್ಚಿಗೆದ್ದ ಕಿಚ್ಚನ ಅಭಿಮಾನಿಗಳು ಮಾರ್ಚ್ 20ರಂದು ಅಹೋರಾತ್ರ ಮನೆಗೆ ನುಗ್ಗಿದ್ದರು. ಕಿಚ್ಚ ಸುದೀಪ್ಗೆ ಕ್ಷಮೆ ಕೇಳಲೇಬೇಕೆಂದು ಪಟ್ಟು ಹಿಡಿದಿದ್ದರು. ಆದ್ರೆ, ಅಹೋರಾತ್ರ ಬೆಂಬಲಿಗರು ಹಾಗೂ ಕಿಚ್ಚನ ಫ್ಯಾನ್ಸ್ ಮಧ್ಯೆ ವಾಗ್ಯುದ್ಧವೇ ನಡೆದು ಹೋಯ್ತು.
ಈ ಗಲಾಟೆಯನ್ನ ಲೈವ್ ಮಾಡಿದ ಅಹೋರಾತ್ರ, ಕಿಚ್ಚ ಸುದೀಪ್ ಅಭಿಮಾನಿಗಳು ತನ್ನನ್ನು ಕೊಲ್ಲಲು ಬಂದಿದ್ದರು. ಸುದೀಪ್ ಅರೆಸ್ಟ್ ಆಗಲೇ ಬೇಕು ಅಂತ ಆಗ್ರಹಿಸಿದ್ದರು. ಅಲ್ಲದೆ ಈ ವೇಳೆ ಕೂಡ ಕಿಚ್ಚನನ್ನ ಅವ್ಯಾಚಕ ಶಬ್ದಗಳಿಂದ ನಿಂದಿಸಿದ್ದರು.