ಕೊರೊನಾ ಎರಡನೇ ಎಲೆ ಮುಗೀತು. ಈಗೇನಿದ್ರೂ, ಮೂರನೇ ಅಲೆ ಬಗ್ಗೆ ಚಿಂತೆ ಶುರುವಾಗಿದೆ. ಮಕ್ಕಳನ್ನು ಕೊರೊನಾ ಮಹಾಮಾರಿಯಿಂದ ಹೇಗೆ ತಪ್ಪಿಸಿಕೊಳ್ಳೋದು ಅಂತೆ ಸರ್ಕಾರ ತಲೆಕಡೆಸಿಕೊಂಡು ಕೂತಿದೆ. ಈ ಮಧ್ಯೆ ಕಿಚ್ಚ ಸುದೀಪ್ ಮಕ್ಕಳ ಆರೋಗ್ಯ ವೃದ್ಧಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ತಮ್ಮ ಚಾರಿಟೆಬಲ್ ಟ್ರಸ್ಟ್ ನಿಂದ ಪೌಷ್ಟಿಕ ಆಹಾರ ನೀಡಲು ಮುಂದಾಗಿದ್ದಾರೆ.
ಮೂರನೇ ಅಲೆಯಲ್ಲಿ ಪೌಷ್ಟಿಕಾಂಶ ಕೊರತೆಯುಳ್ಳ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತ ಪಡಿಸಿದ ಹಿನ್ನೆಲೆಯಲ್ಲಿ ಕಿಚ್ಚನ ಹುಡುಗರು ಮಕ್ಕಳಿಗೆ ಪೌಷ್ಟಿಕಾಂಶ ನೀಡಲು ಮುಂದಾಗಿದ್ದಾರೆ. 1ವರ್ಷದಿಂದ 10ವರ್ಷದವರೆಗಿನ ಮಕ್ಕಳಿಗೆ ಪೌಷ್ಟಿಕಾಂಶವುಳ್ಳ ಆಹಾರ ವಿತರಣೆ ಮಾಡಲು ಕಿಚ್ಚ ಚಾರಿಟೆಬಲ್ ಸೊಸೈಟಿ ಮುಂದಾಗಿದೆ.
‘ಮುಂದಿನ ಭಾರತ ಸ್ವಸ್ಥ ಭಾರತ. ಇದು ನಮ್ಮ ಹೆಜ್ಜೆ. ನೀವೂ ಜೊತೆಯಾಗಿ’ ಎಂದು ಕಿಚ್ಚ ಸುದೀಪ್ ಕರೆ ನೀಡಿದ್ದಾರೆ. ಈಗಾಗ್ಲೇ ಪೌಷ್ಟಿಕಾಂಶಯುಕ್ತ ಆಹಾರ ವಿತರಣೆಗೆ ಮುಂದಾಗಿದ್ದು, ಸಂಪರ್ಕ ಸಂಖ್ಯೆಯನ್ನೂ ನೀಡಲಾಗಿದೆ. ಈ ಮೂಲಕ ಪೌಷ್ಟಿಕಾಂಶ ಕೊರೆತೆಯುಳ್ಳ ಆಹಾರವಿಲ್ಲದೆ ಬಳಲುತ್ತಿರೋ ಮಕ್ಕಳಿಗೆ ಸಿರಿದಾನ್ಯಗಳನ್ನ ತಲುಪಿಸಲು ಕಿಚ್ಚ ಚಾರಿಟೆಬಲ್ ಸೊಸೈಟಿ ಮುಂದಾಗಿದೆ.
ಎರಡನೆ ಅಲೆಯಲ್ಲೂ ಕಿಚ್ಚನ ಹುಡುಗರು ಫೀಲ್ಡಿಗಿಳಿದು ಜನರ ಸಹಾಯಕ್ಕೆ ನಿಂತಿದ್ದರು. ಫುಡ್ ಕಿಟ್ಗಳನ್ನು ಹಂಚಿದ್ದರು. ಚಿತ್ರರಂಗದ ಹಿರಿಯ ಕಲಾವಿದರ ನೆರವಿಗೆ ನಿಂತಿದ್ದರು. ಕೊರೊನಾ ಸಂಕಷ್ಟ ಕಾಲದಲ್ಲಿ ಜನರ ಆಗು-ಹೋಗುಗಳಿಗೆ ಸ್ಪಂದಿಸಿರೋ ಸುದೀಪ್ ಮುಂದಿನ ದಿನಗಳಲ್ಲಿ ತನ್ನ ಸೇವೆಯನ್ನು ಮತ್ತಷ್ಟು ವಿಸ್ತಾರಗೊಳಿಸಿದ್ದಾರೆ.