ಆಟಕ್ಕೂ ವಯಸ್ಸಿಗೂ ಹಾಕ್ಕೊಂಡಿರೋ ಬಟ್ಟೆಗೂ ಸಂಬಂಧವೇ ಇಲ್ಲ ಅನ್ನೋದನ್ನ ಇಲ್ಲೊಬ್ಬ ಅಜ್ಜಿ ಪ್ರೂವ್ ಮಾಡಿದ್ದಾರೆ. ಹೆಚ್ಚು ಕಮ್ಮಿ 80 ವರ್ಷ ವಯಸ್ಸಾಗಿರುವ ಅಜ್ಜಿ ಅನಾಯಾಸವಾಗಿ ಬೌಲಿಂಗ್ ಬಾಲ್ ಎಸೆದು Perfect Strike ಸ್ಕೋರ್ ಮಾಡಿದ್ದಾರೆ. ಅಷ್ಟೇ ಅಲ್ಲ ಸ್ಕೋರ್ ಮಾಡಿದ ನಂತ್ರ ಮೂಗಿನಿಂದ ಕೆಳಗಿಳಿದ ಮಾಸ್ಕ್ ಅನ್ನು ಸರಿಪಡಿಸಿಕೊಂಡಿದ್ದಾರೆ.
ಅಜ್ಜಿ ಬೌಲಿಂಗ್ ನಲ್ಲಿ perfect strike ಸ್ಕೋರ್ ಮಾಡಿರೋ ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ಲಾಗಿದೆ. ಅಜ್ಜಿ ಎನರ್ಜಿ, ಅವರ ಜೋಶ್ ನೋಡಿ ಕೆಲವರು ಕೊಂಡಾಡಿದ್ದಾರೆ. ಮತ್ತೆ ಕೆಲವರು ಅಜ್ಜಿ ಮಾಸ್ಕ್ ಸರಿ ಮಾಡಿಕೊಂಡಿದನ್ನ ನೋಡಿ ಎಲ್ಲರೂ ಕೋರೋನಾ ಸಂಕಷ್ಟದ ಸಮಯದಲ್ಲಿ ಅಜ್ಜಿನ ನೋಡಿ ಆದ್ರು ಮಾಸ್ಕ್ ಧರಿಸೋದನ್ನ ಕಲಿಬೇಕು ಅಂತಿದ್ದಾರೆ. ಆದರೆ ಕೆಲವರು ಮಾತ್ರ ಸೀರೆಯಲ್ಲಿ ಅಜ್ಜಿ ಬೌಲಿಂಗ್ ಮಾಡಿದ್ದನ್ನ ಯಾಕೆ ಹೈಲೆಟ್ ಮಾಡ್ತೀದ್ದೀರಾ. ಸೀರೆಗೂ ಆಟಕ್ಕೂ ಸಂಬಂಧವಿಲ್ಲ ಅಂತಿದ್ದಾರೆ.
ನಟ ಕಿಚ್ಚ ಸುದೀಪ್ ಕೂಡ ಈ ವೀಡಿಯೋ ನೋಡಿ ಬೆರಗಾಗಿದ್ದಾರೆ. This is living to the complete,,,This is happiness,,,This is energy ,,,Thisssss,,,, is an example.
Wishing her more happiness n good heath. ಅಂತ ಬರೆದು ವೀಡಿಯೋ ಶೇರ್ ಮಾಡಿದ್ದಾರೆ.