ಇದೊಂದು ಸುದ್ದಿ ನೋಡಿ ಸಾಕಷ್ಟು ಸಮಯದಿಂದ ಬಾಲಿವುಡ್ ಗಲ್ಲಿಗಳಿಂದ ಆಕಡೆ ಈಕಡೆ ಓಡಾಡ್ತಲೇ ಇದೆ. ಬಾಲಿವುಡ್ ನ ಹಾಟ್ ಅಂಡ್ ಕ್ಯೂಟ್ ಬೆಡಗಿ ಕಿಯಾರಾ ಅಡ್ವಾಣಿ ಮತ್ತು ಹ್ಯಾಂಡ್ಸಮ್ ಹಂಕ್ ಸಿದ್ಧಾರ್ಥ್ ಮಲ್ಹೋತ್ರಾ ಇಬ್ರೂ ಜೋಡಿಯಾಗಿದ್ದಾರೆ ಅನ್ನೋ ಗುಸು ಗುಸು ಕೇಳಿ ಬರ್ತಾನೇ ಇದೆ. ಈ ಸುದ್ದಿಯ ಕಿಡಿಗೆ ಆಗಾಗ ತುಪ್ಪ ಸುರಿಯುವಂತೆ ಇವ್ರಿಬ್ರೂ ಹಾಲಿಡೇ, ಲಂಚ್, ಡಿನ್ನರ್ ಅಂತ ಒಟ್ಟೊಟ್ಟಿಗೆ ಕಾಣಿಸಿಕೊಳ್ತಾ ಇದ್ದಾರೆ. ಅಂದ್ಮೇಲೆ ಏನೋ ಏನೋ ಆಗಿದೆ ಅಂತ ಮಾತಾಡ್ತಾ ಇರುವಷ್ಟರಲ್ಲಿ ಖುದ್ದು ಕಿಯಾರಾ ಒಂದಷ್ಟು ಇಂಟರೆಸ್ಟಿಂಗ್ ವಿಚಾರ ಬಾಯ್ಬಿಟ್ಟಿದ್ದಾರೆ.


ಕಿಯಾರಾ ಅಡ್ವಾಣಿ ಇತ್ತೀಚೆಗಷ್ಟೇ ಫಿಲ್ಮ್ ಫೇರ್ ಮ್ಯಾಗಜಿನ್ ನ ಕವರ್ ಪೇಜಿನಲ್ಲಿ ಕಾಣಿಸಿಕೊಂಡಿದ್ರು. ಈ ಸಂದರ್ಭದಲ್ಲಿ ಅವರು ಕೊಟ್ಟ ಸಂದರ್ಶನದಲ್ಲಿ ಒಂದು ಗುಟ್ಟು ಸದ್ದಿಲ್ಲದೇ ರಟ್ಟಾಗಿದೆ. ನಾನು ಕಳೆದ ಬಾರಿ ಡೇಟಿಂಗ್ ಹೋಗಿದ್ದು ಈ ವರ್ಷದಲ್ಲೇ….ಈ ವರ್ಷ ಶುರುವಾಗಿ ಇನ್ನೂ ಎರಡು ತಿಂಗಳು ಮುಗಿದಿದೆ ಅಷ್ಟೇ…ಉಳಿದ ಲೆಕ್ಕ ನೀವೇ ಮಾಡ್ಕೊಳಿ ಅಂತ ನಾಚಿ ನೀರಾಗಿದ್ದಾಳಂತೆ ಈ ಬೆಡಗಿ.


ಅಂದ್ಹಾಗೆ ಕಿಯಾರಾ ಮತ್ತು ಸಿದ್ಧಾರ್ಥ್ ಹಾಲಿಡೇ ಎಂಜಾಯ್ ಮಾಡೋಕೆ ಮಾಲ್ಡೀವ್ಸ್ ಗೆ ಹೋಗಿದ್ರು. ಅಲ್ಲದೇ ಇತ್ತೀಚೆಗಷ್ಟೇ ಸಿದ್ಧಾರ್ಥ್ ತಂದೆ ತಾಯಿಯನ್ನೂ ಭೇಟಿಯಾಗಿದ್ದಾರೆ ಕಿಯಾರಾ. ಇವ್ರಿಬ್ರ ನಡುವೆ ನಡೀತಿರೋದು ಬರೀ ಗುಸು ಗುಸು ಸುದ್ದಿ ಅಲ್ಲ, ಇದು ಸ್ವಲ್ಪ ಸೀರಿಯಸ್ಸಾಗೇ ಇರೋ ಥರಾ ಇದೆ ಅಂತ ಮಾತಾಡಿಕೊಳ್ತಿದೆ ಬಾಲಿವುಡ್. ಸಿದ್ಧಾರ್ಥ್ ಇದಕ್ಕೂ ಮುಂಚೆ ತಾರಾ ಸುತಾರಿಯಾ ಜೊತೆ ಓಡಾಡ್ತಿದ್ರು ಅಂತ ಸುದ್ದಿ ಇತ್ತು. ಸದ್ಯ ತಾರಾ ಕರೀನಾ ಕಪೂರ್ ಕಸಿನ್ ಅರ್ಮಾನ್ ಜೈನ್ ಜೊತೆ ಜೋಡಿಯಾಗಿದ್ದಾರೆ. ಕಪೂರ್ ಖಾನ್ ದಾನ್ ನ ಗೆಟ್ ಟುಗೆದರ್, ಔತಣ ಎಲ್ಲದರಲ್ಲೂ ಕಾಣಿಸಿಕೊಂಡಿದ್ದಾರೆ.