ಯುವರತ್ನ ಸಿನಿಮಾ ಬಿಡುಗಡೆಯಾದ ಎರಡೇ ದಿನಕ್ಕೆ ಸರ್ಕಾರ ಹೊಸ ಜಾರಿ ಮಾಡಿತ್ತು. ಈ ರೂಲ್ಸ್ನಲ್ಲಿ ಕೊರೊನಾ ಸಂಖ್ಯೆ ಹೆಚ್ಚಿರುವ ರಾಜ್ಯ ಏಳು ಜಿಲ್ಲೆಗಳಲ್ಲಿ ಚಿತ್ರಮಂದಿರ ಶೇ. 50ರಷ್ಟು ಇಳಿಕೆ ಹಾಗೂ ಜಿಮ್ಗಳನ್ನ ಸಂಪೂರ್ಣ ಬಂದ್ ಮಾಡಲಾಗಿತ್ತು. ಸರ್ಕಾರದ ಈ ಕ್ರಮಕ್ಕೆ ಯಶ್ ಟ್ವೀಟ್ ಮಾಡಿದ್ದು, ಅಸಮಧಾನ ವ್ಯಕ್ತ ಪಡಿಸಿದ್ದಾರೆ.
ಯಶ್ ಸಿನಿಮಾ ಹಾಗೂ ಜಮ್ ಪರವಾಗಿ ಧ್ವನಿ ಎತ್ತಿದ್ದು, ಟ್ವಿಟ್ಟರ್ನಲ್ಲಿ ಹೀಗೆ ಬರೆದುಕೊಂಡಿದ್ದಾರೆ. ‘‘ಅನ್ನ ಹುಟ್ಟಿಸದ ಸಭೆ, ಸಮಾರಂಭ, ಮೆರವಣಿಗಳು ಮುಕ್ತ. ಹೊಟ್ಟೆ ಹೊರೆಯಲು ಮಾಡುವ ವೃತ್ತಿಗಳಿಗೆ ಹೊಡೆತ. ಅಪಘಾತ ಆಗುವುದೆಂದು ವಾಹನ ಸಂಚಾರ ನಿಲ್ಲಿಸೋದು ಸರಿಯಾಗುತ್ತದೆಯೇ? ಕಟ್ಟುನಿಟ್ಟಿನ ಸಂಚಾರಕ್ರಮ ಸಾಕಲ್ಲವೇ? ಹಾಗೇ ಸಾಲ ಸೋಲ ಮಾಡಿ, ಜಿಮ್ ನಡೆಸುವವರು ಕಷ್ಟಪಡುತ್ತಿದ್ದಾರೆ. ಸೂಕ್ತ ಮುನ್ನೆಚ್ಚರಿಕೆಯೊಂದಿಗೆ ಜಿಮ್ ಬಳಸಲು ಅನುಮತಿ ನೀಡಿದರೆ ಗ್ರಾಹಕರ ಆರೋಗ್ಯಕ್ಕೂ ಒಳ್ಳೆಯದು, ಜಿಮ್ ಮಾಲೀಕರು ಬದುಕಿಕೊಳ್ಳುತ್ತಾರಲ್ಲವೇ? ರೋಗಕ್ಕೆ ಪರಿಹಾರ ಏನೆಂದು ನಮಗ್ಯಾರಿಗೂ ಗೊತ್ತಿಲ್ಲ. ಆದರೆ ಹಸಿವೆಗೆ ಪರಿಹಾರ ಗೊತ್ತಿದೆಯಲ್ಲಾ’’ ಎಂದು ಯಶ್ ಟ್ವಿಟರ್ನಲ್ಲಿ ಪ್ರಶ್ನೆ ಮಾಡಿದ್ದಾರೆ.
ಕೊರೊನಾ ವಿಚಾರದಲ್ಲಿ ಸರ್ಕಾರ ನಿರಂತರವಾಗಿ ಚಿತ್ರರಂಗವನ್ನ ಟಾರ್ಗೇಟ್ ಮಾಡುತ್ತಿದೆ. ಇದು ಸರಿಯಲ್ಲ. ಬೇಕಾದ್ರೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲಿ. ಅದನ್ನ ಬಿಟ್ಟು ಹೀಗೆ ಏಕಾಏಕಿ ನಿರ್ಧಾರ ತೆಗೆದುಕೊಳ್ಳೋದ್ಯಾಕೆ ಅನ್ನೋದನ್ನ ಪ್ರಶ್ನೆ ಮಾಡಿದ್ದಾರ. ಅಲ್ಲದೆ ಜಿಮ್ ಮಾಲೀಕರ ಪರವಾಗಿಯೂ ಧ್ವನಿ ಎತ್ತಿದ್ದು, ಸಾಲ ಮಾಡಿ ಜಿಮ್ ಹಾಕಿದ್ದಾರೆ, ಕಠಿಣ ಕ್ರಮ ಕೈಗೊಂಡು ಒಪನ್ ಮಾಡಲು ಅನುವು ಮಾಡಿಕೊಡಿ ಎಂದು ಹೇಳಿದ್ದರು.
ಯಶ್ ಮನವಿ ಮಾಡುತ್ತಿದ್ದಂತೆ ರಾಜ್ಯ ಸರ್ಕಾರ ಜಿಮ್ಗಳಲ್ಲೂ ಶೇ. 50ರಷ್ಟು ವಿನಾಯಿತಿ ಘೋಷಿಸಿದೆ. ಹೀಗಾಗಿ ಸ್ಯದ್ಯಕ್ಕೆ ಥಿಯೇಟರ್ ಮಾಲೀಕರು, ಚಿತ್ರರಂಗ ಹಾಗೂ ಜೀಮ್ ಮಾಲೀಕರು ನಿರಾಳರಾಗಿದ್ದಾರೆ. ಆದ್ರೆ, ಏಪ್ರಿಲ್ ಏಳರ ಬಳಿಕ ಸರ್ಕಾರದ ರೂಲ್ಸ್ ಹೇಗೆ ಬದಲಾಗುತ್ತೋ ಗೊತ್ತಿಲ್ಲ.