ಕೆಜಿಎಫ್ ಸಿನಿಮಾ ರಿಲೀಸ್ ಆಗಿದಲ್ಲಿಂದ ಪ್ರಶಾಂತ್ ನೀಲ್ ನಸೀಬು ಬದಲಾಗಿದೆ. ಒಂದರ ಹಿಂದೊಂದು ಸಿನಿಮಾಗಳು ಗ್ರೀನ್ ಸಿಗ್ನಲ್ ಕೊಡ್ತಾನೇ ಇದ್ದಾರೆ. ಈಗಾಗ್ಲೇ ಪ್ರಭಾಸ್ ಅಭಿನಯದ ಸಲಾರ್ ಶೂಟಿಂಗ್ ನಡೀತಿದೆ. ಕೆಜಿಎಫ್ 2 ಸಿನಿಮಾ ಪೋಸ್ಟ್ ಪ್ರೋಡಕ್ಷನ್ ಬಹುತೇಕ ಮುಗಿದು ಬಿಡುಗಡೆ ರೆಡಿಯಾಗ್ತಿದೆ. ಅಷ್ಟರಲ್ಲೇ ಜೂ.ಎನ್ಟಿಆರ್ ಜೊತೆ ಸಿನಿಮಾ ಮಾಡೋಕೆ ಸಜ್ಜಾಗಿದ್ದಾರೆ. ಒಂದರ ಹಿಂದೊಂದು ಸಿನಿಮಾ ಮಾಡ್ತಿರೋ ಪ್ರಶಾಂತ್ ನೀಲ್ ಪಡೆಯೋ ಸಂಭಾವನೆ ಎಷ್ಟು? ಜೂ. ಎನ್ಟಿಆರ್ ಚಿತ್ರಕ್ಕೆ ಎಷ್ಟು ಕೋಟಿ ಜೇಬಿಗಿಳಿಸಿಕೊಂಡಿದ್ದಾರೆ ಅನ್ನೋ ಬಗ್ಗೆ ಟಾಲಿವುಡ್ ಚರ್ಚೆ ಮಾಡುತ್ತಿದೆ.
ಜೂ. ಎನ್ ಟಿ ಆರ್ ಹಾಗೂ ಕೆಜಿಎಫ್ ನಿರ್ದೇಶಕ ಪ್ರಶಾಂತ್ ಜೊತೆಯಾಗಿ ಸಿನಿಮಾ ಮಾಡೋದು ಕನ್ಫರ್ಮ್. ಎನ್ಟಿಆರ್ 31ನೇ ಚಿತ್ರವನ್ನು ನಾನೇ ನಿರ್ದೇಶನ ಮಾಡ್ತೀನಿ ಅಂತ ಪ್ರಶಾಂತ್ ನೀಲ್ ಈಗಾಗ್ಲೇ ಹೇಳಿದ್ದಾಗಿದೆ. ಮುಂದಿನ ವರ್ಷದಲ್ಲಿ ಈ ಚಿತ್ರ ಶುರುವಾಗುತ್ತೆ ಅಂತಾನೂ ಹೇಳಿದ್ದಾರೆ. ಹೀಗಾಗಿ ಪ್ರಶಾಂತ್ ನೀಲ್ ಸಹ ಪ್ರಭಾಸ್ ಜೊತೆಗಿನ ಸಲಾರ್ ಚಿತ್ರವನ್ನು ಆದಷ್ಟು ಬೇಗ ಮುಗಿಸಬೇಕಿದೆ. ಇದರ ಮಧ್ಯೆ ತೆಲುಗಿನ ದಿಗ್ಗಜರಿಗೆ ಆ್ಯಕ್ಷನ್ ಕಟ್ ಹೇಳ್ತಿರೋ ಪ್ರಶಾಂತ್ ನೀಲ್ ಸಂಭಾವನೆ ಬಗ್ಗೆನೂ ಚರ್ಚೆ ಆಗ್ತಿದೆ.
ಕೆಜಿಎಫ್ ಎರಡು ಚಾಪ್ಟರ್ಗಳ ಬಳಿಕ ಪ್ರಶಾಂತ್ ನೀಲ್ ಸಂಭಾವನೆ ₹10 ಕೋಟಿ ಆಗಿದ್ಯಂತೆ. ಜೂ.ಎನ್ಟಿಆರ್ ಚಿತ್ರದ ನಿರ್ದೇಶನಕ್ಕೆ ನೀಲ್ ಸಂಭಾವನೆ ₹10 ಕೋಟಿ ದಾಟಿದೆ ಅನ್ನೋ ಮಾತು ಟಾಲಿವುಡ್ನಲ್ಲಿ ಕೇಳಿಬರ್ತಿದೆ. ಒಂದ್ವೇಳೆ ಈ ಸುದ್ದಿ ನಿಜವೇ ಆಗಿದ್ರೆ. ಕನ್ನಡದ ಮಟ್ಟಿಗೆ ಅತೀ ಹೆಚ್ಚು ಸಂಭಾವನೆಯೋ ನಿರ್ದೇಶಕ ಪ್ರಶಾಂತ್ ನೀಲ್ ಆಗ್ತಾರೆ.
ಪ್ರಶಾಂತ್ ಅಕೌಂಟ್ನಲ್ಲಿ ಸಲಾರ್ ಕೂಡ ಇದೆ. ಹೀಗಾಗಿ ಕನ್ನಡದ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲಂಸ್ ಪ್ರಶಾಂತ್ಗೆ ಎಷ್ಟು ಸಂಭಾವನೆ ಕೊಟ್ಟಿದೆ ಅನ್ನೋ ಕುತೂಹಲವಂತೂ ಇದೆ. ಸದ್ಯ ತೆಲುಗಿನಲ್ಲಂತೂ ನೀಲ್ಗೆ ಬೇಡಿಕೆಯಂತೂ ದುಪ್ಪಟ್ಟಾಗಿದೆ.