ಹಾಳಾದ ಕೊರೋನಾ ಇಲ್ಲ ಅಂದಿದ್ರೆ, ಕಳೆದ ವರ್ಷವೇ ಕೆಜಿಎಫ್ ಚಾಪ್ಟರ್ -2 ರಿಲೀಸ್ ಆಗ್ಬೇಕಿತ್ತು. ಹಾಳಾಗಿ ಹೋಗ್ಲಿ ಈ ವರ್ಷ ಜುಲೈ 16ಕ್ಕೆ ಹೊಸ ಡೇಟ್ ಅನೌನ್ಸ್ ಆಗಿತ್ತು. ಅದೇನೋ ಡೆಲ್ಟಾ ರೂಪಾಂತರಿ ವೈರಸ್ ಆರ್ಭಟಕ್ಕೆ ರಾಕಿ ಭಾಯ್ ಪ್ಲ್ಯಾನ್ ಎಲ್ಲಾ ವೇಸ್ಟ್ ಆಗೋಗಿದೆ. ಇಲ್ದೆ ಇದ್ದಿದ್ರೆ, ಇಷ್ಟೊತ್ತಿಗೆ ಟಿಕೆಟ್ ಬುಕ್ಕಿಂಗ್ ಸ್ಟಾರ್ಟ್ ಆಗಿ ಬಿಡ್ತಿತ್ತು. ಆದ್ರೀಗ ಇಡೀ ಚಿತ್ರತಂಡ ಸಿನಿಮಾ ರಿಲೀಸ್ ಡೇಟ್ ಬಗ್ಗೆ ಹೊಸ ಅಪ್ ಡೇಟ್ ಕೊಟ್ಟಿದೆ. ಹಾಲ್ ತುಂಬಾ ಗ್ಯಾಂಗ್ ಸ್ಟರ್ಸ್ ತುಂಬಿ ತುಳುಕುವಾಗ ಮಾತ್ರ ಮಾನ್ಸ್ಟರ್ ಬರ್ತಾನೆ. ಆದಷ್ಟು ಬೇಗ ಹೊಸ ರಿಲೀಸ್ ಡೇಟ್ ಅನೌನ್ಸ್ ಮಾಡ್ತೀವಿ ಅಂತ ಹೇಳಲಾಗಿದೆ.
ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಬರ್ತಿರೋ ಮೋಸ್ಟ್ ಅವೇಟೆಡ್ ಸೀಕ್ವೆಲ್ ಸಿನಿಮಾ ಇದು. ಫಸ್ಟ್ ಚಾಪ್ಟರ್ ಗಿಂತ ಸೆಕೆಂಡ್ ಚಾಪ್ಟರ್ 10ಪಟ್ಟು ದೊಡ್ಡದಾಗಿರುತ್ತೆ ಅಂತ ಹೇಳಿ ಇಡೀ ಟೀಂ ನಿರೀಕ್ಷೆ ಹೆಚ್ಚುವಂತೆ ಮಾಡಿದೆ. ಸಂಜಯ್ ದತ್ ಎಂಟ್ರಿಯಿಂದ ಕೆಜಿಎಫ್ ಅಖಾಡ ಮತ್ತಷ್ಟು ರೋಚಕತೆ ಪಡೆದುಕೊಂಡಿದೆ. ಸಣ್ಣ ಟೀಸರ್ನಿಂದ ನಿರೀಕ್ಷೆ ದುಪ್ಪಟ್ಟು ಮಾಡಿದೆ ಚಿತ್ರತಂಡ. ಸದ್ಯ ರಾಜ್ಯದಲ್ಲಿ ಸಿನಿಮಾ ಪ್ರದರ್ಶನಕ್ಕೆ ಇನ್ನು ಅನುಮತಿ ಸಿಕ್ಕಿಲ್ಲ. 100% ಆಕ್ಯುಪೆನ್ಸಿ ಜೊತೆಗೆ ಸಿನಿಮಾ ಪ್ರದರ್ಶನಕ್ಕೆ ಅನುಮತಿ ಸಿಕ್ಕಿದ ಕೂಡಲೇ ಚಾಪ್ಟರ್ -2 ತೆರೆಗಪ್ಪಳಿಸಲಿದೆ.
ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಬಹುಕೋಟಿ ವೆಚ್ಚದಲ್ಲಿ ಕೆಜಿಎಫ್ ಚಾಪ್ಟರ್ -2 ನಿರ್ಮಾಣವಾಗಿದೆ. ಕಳೆದ ಬಾರಿಗಿಂತ ಈ ಬಾರಿ ಬಹಳ ದೊಡ್ಡ ಮಟ್ಟದಲ್ಲಿ ಸಿನಿಮಾ ಪ್ರಮೋಷನ್ ಮತ್ತು ರಿಲೀಸ್ ಪ್ಲ್ಯಾನ್ ನಡೀತಿದೆ. ಕೆಜಿಎಫ್ ಸಿನಿಮಾ ಕ್ರೇಜ್ ನೋಡ್ತಿದ್ರೆ, ಪ್ರಮೋಷನ್ ಇಲ್ಲದೇ ರಿಲೀಸ್ ಮಾಡಿದ್ರು, ಸಿನಿಮಾ ಕೋಟಿ ಕೋಟಿ ಬಾಚಲಿದೆ. ಚಾಪ್ಟರ್-2 ಸೂಪರ್ ಹಿಟ್ ಅನ್ನೋದು ಪಕ್ಕಾ ಆಗೋಗಿದೆ. ಆದರೆ ಅದು ಯಾವ ರೇಂಜ್ ನಲ್ಲಿ ಅನ್ನೋದನ್ನ ಮಾತ್ರ ಕಾದು ನೋಡಬೇಕಿದೆ.